ಸುಬ್ಬೇಗೌಡ ಎಂಬುವರ ಮನೆಯಲ್ಲಿ ಎಎನ್ ಎಫ್ ತಂಡದಿಂದ ಪರಿಶೀಲನೆ 
ರಾಜ್ಯ

13 ವರ್ಷಗಳ ಬಳಿಕ ಮಲೆನಾಡಿನಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತು: ಆತಂಕದಲ್ಲಿ ಸ್ಥಳೀಯರು!

ಶೃಂಗೇರಿ ತಾಲ್ಲೂಕಿನ ಅರಣ್ಯದ ಸಮೀಪವಿರುವ ಹಳ್ಳಿಗಳಲ್ಲಿ ಆರು ಶಸ್ತ್ರಸಜ್ಜಿತ ಅಪರಿಚಿತರು ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳ ಆಧಾರದ ಮೇಲೆ ಎಎನ್‌ಎಫ್ ತನ್ನ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಚಿಕ್ಕಮಗಳೂರು: ಕೊಪ್ಪ ಮತ್ತು ಶೃಂಗೇರಿ ತಾಲೂಕಿನಲ್ಲಿ 13 ವರ್ಷಗಳ ನಂತರ ನಕ್ಸಲ್ ಚಟುವಟಿಕೆಗಳು ಮತ್ತೆ ಕಾಣಿಸಿಕೊಂಡಿದ್ದು, ಮಲೆನಾಡು ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಕೊಪ್ಪ ಮತ್ತು ಶೃಂಗೇರಿ ತಾಲೂಕಿನಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲೆಯ ಹಲವೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಶೃಂಗೇರಿ ತಾಲ್ಲೂಕಿನ ಅರಣ್ಯದ ಸಮೀಪವಿರುವ ಹಳ್ಳಿಗಳಲ್ಲಿ ಆರು ಶಸ್ತ್ರಸಜ್ಜಿತ ಅಪರಿಚಿತರು ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳ ಆಧಾರದ ಮೇಲೆ ಎಎನ್‌ಎಫ್ ತನ್ನ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ತನಗೆ ಸಿಕ್ಕ ಸುಳಿವಿನ ಆಧಾರದ ಮೇಲೆ, ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೇಗೌಡರ ಮನೆಯ ಮೇಲೆ ಎಎನ್‌ಎಫ್ ಸ್ಕ್ವಾಡ್ ದಾಳಿ ನಡೆಸಿತು, ಅಲ್ಲಿ ನಕ್ಸಲರು ಆಹಾರವನ್ನು ಬೇಯಿಸಿ ತಿಂದಿದ್ದಾರೆ ಎಂದು ವರದಿಯಾಗಿದೆ. ತಂಡವು ಮೂರು ಸಿಂಗಲ್ ಬ್ಯಾರೆಲ್ ಬಂದೂಕುಗಳು ಮತ್ತು ಕೆಲವು ಕಾರ್ಟ್ರಿಜ್ಗಳನ್ನು ಪತ್ತೆ ಹಚ್ಚಿದೆ.

ಮುಂಡಗಾರು ಲತಾ ಮತ್ತು ಜಾನ್ ಎಂದು ಕರೆಯಲ್ಪಡುವ ಜಯಣ್ಣ ನೇತೃತ್ವದ ನಕ್ಸಲ್ ತಂಡಗಳು ಮನೆಗೆ ಭೇಟಿ ನೀಡಿರಬಹುದು ಎಂದು ಮೂಲಗಳು ಶಂಕಸಿವೆ. ಈ ಬಗ್ಗೆ ಎಎನ್‌ಎಫ್ ಸದಸ್ಯರು ಸುಬ್ಬೇಗೌಡರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಸಿಐಡಿ ಎಡಿಜಿಪಿ ಪ್ರಣಬ್ ಮೊಹಾಂತಿ ಗ್ರಾಮಕ್ಕೆ ಭೇಟಿ ನೀಡಿದ್ದು, ಎಎನ್‌ಎಫ್ ಎಸ್‌ಪಿ ಜಿತೇಂದ್ರಕುಮಾರ್ ದಹಿಮಾ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತು ಚಿಕ್ಕಮಗಳೂರು ಎಸ್‌ಪಿ ಡಾ.ವಿಕ್ರಮ್ ಅಮಾತೆ ಅವರ ಮಾರ್ಗದರ್ಶನದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT