ಹೊತ್ತಿ ಉರಿದ ವಿಂಟೇಜ್ ಕಾರು  
ರಾಜ್ಯ

ಹಂಪಿ: ಪ್ರವಾಸಕ್ಕೆ ಹೊರಟಿದ್ದ ವಿಂಟೇಜ್ ಕಾರು ಮಾರ್ಗ ಮಧ್ಯೆ ಹೇಗೆ ಹೊತ್ತಿ ಉರಿಯಿತು ನೋಡಿ...

ಬೆಂಕಿಗೆ ಆಹುತಿಯಾದ ಕಾರು ಹಿಂದೆ ಇತ್ತು. ರಾಯರಕೆರೆ ಸಮೀಪಕ್ಕೆ ಬಂದಾಗ ಬೆಳಗ್ಗೆ 9 ಗಂಟೆ ವೇಳೆಗೆ ಕಾರಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿತು.

ವಿಜಯನಗರ: ವಿಂಟೇಜ್ ಕಾರುಗಳ ಪ್ರವಾಸದಲ್ಲಿ ಹೊರಟಿದ್ದ ಕಾರಿಗೆ ಹೊಸಪೇಟೆಯ ಹಂಪಿ ಸಮೀಪ ರಾಯರಕೆರೆ ಎಂಬಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣವಾಗಿ ಭಸ್ಮವಾಗಿದೆ.

ನಿನ್ನೆ ಹಂಪಿ, ಅಂಜನಾದ್ರಿ, ತುಂಗಭದ್ರಾ ಅಣೆಕಟ್ಟು ಪ್ರದೇಶಗಳಿಗೆ ತೆರಳಿದ್ದ ಭಾರತದ 20 ಕಾರುಗಳಲ್ಲಿ ಈ ಕಾರು ಸಹ ಸೇರಿತ್ತು. ಎಕ್ಸ್ ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್ 2024 ಹೆಸರಿನಲ್ಲಿ ವಿಂಟೇಜ್ ಕಾರುಗಳ ಪ್ರವಾಸವಾಗಿದ್ದು, ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ ನಲ್ಲಿ ತಂಗಿದ್ದ ಈ ಕಾರುಗಳು ವಿದೇಶದ 20 ಕಾರುಗಳ ಜತೆ ಚಿಕ್ಕಮಗಳೂರಿನತ್ತ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಬೆಂಕಿಗೆ ಆಹುತಿಯಾದ ಕಾರು ಹಿಂದೆ ಇತ್ತು. ರಾಯರಕೆರೆ ಸಮೀಪಕ್ಕೆ ಬಂದಾಗ ಬೆಳಗ್ಗೆ 9 ಗಂಟೆ ವೇಳೆಗೆ ಕಾರಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿತು. ಕಾರಲ್ಲಿದ್ದವರು ತಕ್ಷಣ ಕಾರು ನಿಲ್ಲಿಸಿ ಇಳಿದ ಕಾರಣ ಏನೂ ಅಪಾಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಕಾರು ಬಹುತೇಕ ಭಸ್ಮವಾಗಿತ್ತು.

ಸ್ಥಳಕ್ಕೆ ಶಾಸಕ ಹೆಚ್ ಆರ್ ಗವಿಯಪ್ಪ ಭೇಟಿ ನೀಡಿ ಪರಿಶೀಲಿಸಿದ್ದು ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!