ಸಾಂದರ್ಭಿಕ ಚಿತ್ರ  
ರಾಜ್ಯ

ಕಸದ ಸೆಸ್: ಬೆಂಗಳೂರಿನ ಅಪಾರ್ಟ್ ಮೆಂಟ್, ಕಾರ್ಪೊರೇಟ್ ಕಚೇರಿಗಳಿಗೆ ನೊಟೀಸ್ ಜಾರಿ

ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪಾವತಿಸಲು ಶುಲ್ಕವನ್ನು ವಿಧಿಸಲಾಗಿದೆ. ಮಾಲೀಕರಿಂದ 7 ದಿನಗಳಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯ ಮತ್ತು ಅವುಗಳನ್ನು ವಿಲೇವಾರಿ ಮಾಡಿದ ವಿಧಾನದ ಬಗ್ಗೆ ಸಹ ವಿವರಣೆ ಕೇಳಿದೆ.

ಬೆಂಗಳೂರು: ಮೂರು ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪ್ರತ್ಯೇಕಗೊಂಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ನಿಂದ (BSWML) ಕಸದ ಸೆಸ್ ವಿಧಿಸಿರುವ ಕುರಿತು ನಗರದಲ್ಲಿನ ಸಾವಿರಾರು ಅಪಾರ್ಟ್‌ಮೆಂಟ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ಈ ವಾರ ನೊಟೀಸ್ ಜಾರಿಯಾಗಿದೆ.

ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪಾವತಿಸಲು ಶುಲ್ಕವನ್ನು ವಿಧಿಸಲಾಗಿದೆ. ಮಾಲೀಕರಿಂದ 7 ದಿನಗಳಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯ ಮತ್ತು ಅವುಗಳನ್ನು ವಿಲೇವಾರಿ ಮಾಡಿದ ವಿಧಾನದ ಬಗ್ಗೆ ಸಹ ವಿವರಣೆ ಕೇಳಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೊಟೀಸ್ ನ ಪ್ರತಿ ಲಭ್ಯವಾಗಿದೆ. ಇದು ಪಾವತಿಸಬೇಕಾದ ಎರಡು ವಿಭಿನ್ನ ರೀತಿಯ ಶುಲ್ಕದ ಬಗ್ಗೆ ಹೇಳುತ್ತದೆ. ಅಪಾರ್ಟ್ಮೆಂಟ್ ಸ್ಥಳದಲ್ಲಿ ಸಂಸ್ಕರಣೆಯನ್ನು ಅಳವಡಿಸಿಕೊಂಡರೆ ಪ್ರತಿ ಕೆಜಿಗೆ 3 ರೂಪಾಯಿ ಮತ್ತು ತ್ಯಾಜ್ಯದ ಸ್ಥಳದಲ್ಲೇ ವಿಲೇವಾರಿ ಮಾಡಿದರೆ ಆವರಣ ಸ್ಥಳದಲ್ಲಿ ಅಳವಡಿಸಿಕೊಳ್ಳದಿದ್ದರೆ ಕೆಜಿಗೆ 12 ರೂಪಾಯಿ ಆಗಿರುತ್ತದೆ. ಮನೆಯೊಳಗೆ ವಿಲೇವಾರಿ ಮಾಡದಿದ್ದಲ್ಲಿ ನೋಟರೈಸ್ ಮಾಡಿದ ಅಫಿಡವಿಟ್‌ಗಳನ್ನು ಸಲ್ಲಿಸುವುದನ್ನು ಸಹ ನೊಟೀಸ್ ಕಡ್ಡಾಯಗೊಳಿಸಿದೆ. 2023-2024 ರ ಆರ್ಥಿಕ ವರ್ಷಕ್ಕೆ ವಾರ್ಷಿಕ ಆದಾಯ ತೆರಿಗೆ ಸಲ್ಲಿಸಲು ಆಂತರಿಕ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನು ಕೇಳಲಾಗಿದೆ.

ಬಿಬಿಎಂಪಿ ಕಾಯಿದೆ 2020, ಬಿಬಿಎಂಪಿ ಸ್ಟಾರ್ಮ್‌ವಾಟರ್ ಮ್ಯಾನೇಜ್‌ಮೆಂಟ್ ಬೈಲಾಸ್ 2020 ಮತ್ತು SWM ನಿಯಮಗಳು 2016 ರ ನಿಯಮ 15 (f) ಅಡಿಯಲ್ಲಿ ಇದನ್ನು ನೀಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬಹು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಟೆಕ್ ಕಂಪನಿಗಳಿಗೆ ಸೇವಾ ಪೂರೈಕೆದಾರರಾಗಿರುವ ಸಾಹಸ್ ಝೀರೋ ವೇಸ್ಟ್‌ನ ಸಿಇಒ ಶೋಭಾ ರಘುರಾಮ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ನಮ್ಮ ಗ್ರಾಹಕರು ಸ್ವೀಕರಿಸಿದ ಸಂವಹನವು ಕಾನೂನು ಸೂಚನೆಗೆ ಸಮಾನವಾಗಿದೆ. ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ವಿಧಾನದ ಕುರಿತು ಈ ವಾರ ಎಲ್ಲಾ ಸಂಸ್ಥೆಗಳ ಪರವಾಗಿ ಪ್ರತಿಕ್ರಿಯೆಗಳನ್ನು ಸಲ್ಲಿಸುವಲ್ಲಿ ನಾವು ನಿರತರಾಗಿದ್ದೇವೆ ಎಂದರು.

ವಾರ್ಡ್ ನಂ. 198 ಮಂದಿ ಈ ನೋಟಿಸ್ ಪಡೆದಿದ್ದಾರೆ. ತಮ್ಮ ಆವರಣದಲ್ಲಿ ಸಾವಯವ ತ್ಯಾಜ್ಯ ಕಾಂಪೋಸ್ಟರ್ (ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ) ಹೊಂದಿರುವವರು ಮಾತ್ರ ರೂ 3 ಪಾವತಿಸಿದರೆ ಉಳಿದವರು ರೂ 12 ಪಾವತಿಸಬೇಕು ಎನ್ನುತ್ತಾರೆ ರಾಜರಾಜೇಶ್ವರಿನಗರದ ಅಪಾರ್ಟ್‌ಮೆಂಟ್ ಮಾಲೀಕ ಕಿರಣ್ ಕುಮಾರ್.

ಸುಮಾರು 100 ಆರ್‌ಡಬ್ಲ್ಯೂಎಗಳನ್ನು ಹೊಂದಿರುವ ಕನಕಪುರದ ಚೇಂಜ್‌ಮೇಕರ್ಸ್‌ನ ಅಧ್ಯಕ್ಷ ಅಬ್ದುಲ್ ಅಲೀಮ್, ನಾವು ಈಗಾಗಲೇ ವಾರ್ಷಿಕ ಆಸ್ತಿ ತೆರಿಗೆಯೊಂದಿಗೆ ಕಸದ ಸೆಸ್ ನ್ನು ಪಾವತಿಸುತ್ತೇವೆ. ಕಸ ಸಂಗ್ರಹಣೆಗಾಗಿ ನಾವು ಬಿಬಿಎಂಪಿ ಎಂಪನೆಲ್ಡ್ ಮಾರಾಟಗಾರರಿಗೆ ಪಾವತಿಸುತ್ತಿದ್ದೇವೆ ಎಂದು ಕೇಳುತ್ತಾರೆ.

ಶುಲ್ಕವನ್ನು ಬಿಬಿಎಂಪಿಯ ಬ್ಯಾಂಕ್‌ಗೆ ಅಥವಾ ಯಾವುದೇ ಪಿಒಎಸ್‌ನಲ್ಲಿ (ಪಾಯಿಂಟ್ ಆಫ್ ಸೇಲ್) ಪಾವತಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದು SWM ಬೈಲಾಸ್ 2020 ರ ಅನುಸಾರವಾಗಿ ದಂಡದ ಬಗ್ಗೆ ಎಚ್ಚರಿಕೆ ನೀಡಿದೆ ಮತ್ತು ಪರಿಸರ ಪರಿಹಾರವನ್ನು ಮರುಪಡೆಯಲು ಕ್ರಮವನ್ನು ಪ್ರಾರಂಭಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT