ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕಾವೇರಿ ನೀರಿಗಾಗಿ ಕಾಯುತ್ತಿವೆ ಕೆಆರ್ ಪುರಂ, ಮಹದೇವಪುರದ 31 ಗ್ರಾಮಗಳು

ಅಕ್ಟೋಬರ್ 16 ರಂದು ಕಾವೇರಿ ಹಂತ-5 ಉದ್ಘಾಟನೆ ನಂತರ ನೀರು ಸರಬರಾಜು ಮಾಡಲಾಗುವುದು ಎಂದು BWSSB ಭರವಸೆ ನೀಡಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಜತೆ ವಿಲೀನಗೊಂಡ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಸುವ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಭರವಸೆ ನೀಡಿದ್ದರು. ಹೀಗಾಗಿ ಹಲವು ಗ್ರಾಮಗಳ ನಿವಾಸಿಗಳು ತಮ್ಮ ಮನೆಗಳಿಗೂ ಕಾವೇರಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಕ್ಟೋಬರ್ 16 ರಂದು ಕಾವೇರಿ ಹಂತ-5 ಉದ್ಘಾಟನೆ ನಂತರ ನೀರು ಸರಬರಾಜು ಮಾಡಲಾಗುವುದು ಎಂದು BWSSB ಭರವಸೆ ನೀಡಿದೆ. ಆದರೆ ಕೆಆರ್ ಪುರಂ ಮತ್ತು ಮಹದೇವಪುರ ಕ್ಷೇತ್ರದ 31 ಹಳ್ಳಿಗಳೂ ಇನ್ನೂ ಕಾವೇರಿ ನೀರಿಗಾಗಿ ಕಾಯುತ್ತಿವೆ.

BWSSB ಅಧಿಕಾರಿಗಳ ಪ್ರಕಾರ, ಪೈಪ್‌ಲೈನ್ ಕೆಲಸದಲ್ಲಿನ ಸವಾಲುಗಳು, ವಿಶೇಷವಾಗಿ ನೆಲದ ಕೆಳಗೆ ಗಟ್ಟಿಯಾದ ಬಂಡೆ ಸಿಕ್ಕಿರುವುದರಿಂದ ವಿಳಂಬವಾಗಿದೆ.

ಕೂಡ್ಲು ಮತ್ತು ಹೂಡಿ ನಡುವಿನ 180 ಮೀಟರ್ ವ್ಯಾಪ್ತಿಯಲ್ಲಿ ಅನೇಕ ಸ್ಥಳಗಳಲ್ಲಿ ನೆಲದ ಒಳಗೆ ಬಂಡೆಗಳಿವೆ. ಹೀಗಾಗಿ ವಿಳಂವಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿಯ ಕಾವೇರಿ ಹಂತ-5ರ ಮುಖ್ಯ ಎಂಜಿನಿಯರ್ ಮಹೇಶ್ ಕೆಎನ್ ಅವರು ವಿವರಿಸಿದ್ದಾರೆ.

"40-ಮೀಟರ್ ವಿಸ್ತಾರವಾದ ಗಟ್ಟಿಯಾದ ಬಂಡೆಯನ್ನು ಕೊರೆಯುವುದು ಸವಾಲಾಗಿದೆ. ಎರಡು ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಕೇವಲ 6 ಮೀಟರ್ ಮಾತ್ರ ಉಳಿದಿದೆ. ಯೋಜನೆಯು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಂತರ ಪೈಪ್‌ಲೈನ್ ಸರಿಪಡಿಸಿ ಹೂಡಿಯಲ್ಲಿನ ನೆಲಮಟ್ಟದ ಜಲಾಶಯವನ್ನು(ಜಿಎಲ್‌ಆರ್) ತುಂಬಿಸಿ 31 ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದು” ಎಂದು ಅವರು ತಿಳಿಸಿದ್ದಾರೆ.

"ಕಳೆದ ಎರಡು ವರ್ಷಗಳಿಂದ, BWSSB, ಸ್ಥಳೀಯ ಶಾಸಕರು ಮತ್ತು ಸಂಬಂಧಿಸಿದ ಸಚಿವರು 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕಕ್ಕಾಗಿ ಹಲವು ದಿನಾಂಕ ಮತ್ತು ಡೆಡ್ ಲೈನ್ ಗಳನ್ನು ನೀಡಿದ್ದರು. ಆದರೆ ಇದುವರೆಗೂ ಯಾವುದೇ ಪ್ರಯೋಜನೆ ಆಗಿಲ್ಲ" ಎಂದು ರಾಮಮೂರ್ತಿನಗರದ ನಿವಾಸಿ ಕೊಚ್ಚು ಶಂಕರ್ ಅವರು ಹೇಳಿದ್ದಾರೆ.

ಗುಂಜೂರು ಗ್ರಾಮದ ಮತ್ತೊಬ್ಬ ನಿವಾಸಿ ಸಹ ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದು, ಅಕ್ಟೋಬರ್ 16 ರಂದು ಕಾವೇರಿ ಹಂತ-5 ಉದ್ಘಾಟನೆಯಾದರೂ, ಚನ್ನಸಂದ್ರ, ಪಣತ್ತೂರು, ಗುಂಜೂರು ಸೇರಿದಂತೆ ಹಲವಾರು ಪ್ರದೇಶಗಳಿಗೆ ಇನ್ನೂ ಕಾವೇರಿ ನೀರು ಸರಬರಾಜು ಮಾಡುತ್ತಿಲ್ಲ. ನಿಧಾನಗತಿಯ ಕೆಲಸದಿಂದಾಗಿ ಕನಿಷ್ಠ ಜನವರಿ 2025 ರವರೆಗೂ ಕಾಯಬೇಕಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT