ವೈರಲ್ ಆದ ನಕ್ಷೆ 
ರಾಜ್ಯ

ಅರವತ್ತರ ದಶಕದಲ್ಲಿಯೇ ಬೆಂಗಳೂರು ವರ್ತುಲ ರೈಲು ಯೋಜನೆಗೆ ಚಿಂತನೆ! ನಕ್ಷೆ ವೈರಲ್

‘Bangalore - Photos from a Bygone Age’ ಎಂಬ ಫೇಸ್‌ಬುಕ್ ಗುಂಪಿನಲ್ಲಿ ನಕ್ಷೆಯನ್ನು ಫೋಸ್ಟ್ ಮಾಡಲಾಗಿದೆ. ನಂತರ ಅನೇಕ ಎಕ್ಸ್ ಬಳಕೆದಾರರು ಅದನ್ನು ಫೋಸ್ಟ್ ಮಾಡಿದ್ದು, ಇದು ಇಡೀ ದಿನ ಚರ್ಚೆ ಹುಟ್ಟುಹಾಕಿತು

ಬೆಂಗಳೂರು: ಸಾರಿಗೆ ಅನುಕೂಲಕ್ಕಾಗಿ 1960ರ ಆರಂಭದಲ್ಲಿಯೇ ಬೆಂಗಳೂರು ನಗರ ಸುತ್ತಮುತ್ತ ವರ್ತುಲ ರೈಲು ಯೋಜನೆಯ ವಿಂಟೇಜ್ ನಕ್ಷೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ವೈರಲ್ ಆಗಿದ್ದು, ಅದನ್ನು ಅನುಷ್ಟಾನಗೊಳಿಸದೆ ಉತ್ತಮ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ಅನೇಕರು ಶಪಿಸುತ್ತಿದ್ದಾರೆ.

ಈ ಬಗ್ಗೆ ಸ್ವಲ್ಪ ಗಮನಹರಿಸಿದ್ದರೆ ಈಗಿನ ಟ್ರಾಫಿಕ್‌ ಜಾಮ್‌ಗಳು ಕಂಡುಬರುತ್ತಿರಲಿಲ್ಲ ಎಂದು ಅನೇಕ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ‘Bangalore - Photos from a Bygone Age’ ಎಂಬ ಫೇಸ್‌ಬುಕ್ ಗುಂಪಿನಲ್ಲಿ ನಕ್ಷೆಯನ್ನು ಫೋಸ್ಟ್ ಮಾಡಲಾಗಿದೆ. ನಂತರ ಅನೇಕ ಎಕ್ಸ್ ಬಳಕೆದಾರರು ಅದನ್ನು ಫೋಸ್ಟ್ ಮಾಡಿದ್ದು, ಇದು ಇಡೀ ದಿನ ಚರ್ಚೆ ಹುಟ್ಟುಹಾಕಿತು

ಪ್ರಸ್ತಾವಿತ ಮಾರ್ಗದಲ್ಲಿ ಬೆಂಗಳೂರು ನಗರ ನಿಲ್ದಾಣ-ಬೆಂಗಳೂರು ಕಂಟೋನ್ಮೆಂಟ್-ಬೆಂಗಳೂರು ಪೂರ್ವ-ಜೀವನಹಳ್ಳಿ-ಹಳೆ ಮದ್ರಾಸ್ ರಸ್ತೆ (ಇಲ್ಲಿ ರೈಲು ನಿಲ್ದಾಣದೊಂದಿಗೆ ತಿರುವು ಪಡೆಯುತ್ತದೆ) ಬಿನ್ನಮಂಗಲ, ದೊಮ್ಮಲೂರು-ಕೋರಮಂಗಲ, ಸೆಂಟ್ರಲ್ ಜಂಕ್ಷನ್ (ಇಲ್ಲಿ ಸೆಲ್ಲಂ ಬ್ರಾಡ್ ಗೇಜ್ ಸೇರುತ್ತದೆ) ಜಯನಗರ, ಬನಶಂಕರಿ, ಆವಲಹಳ್ಳಿ, ಮೈಸೂರು ರಸ್ತೆ ಮತ್ತು ಸಿಟಿ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

ಇದು ಕಳೆದ ಹೋದ ಅವಕಾಶ ಎಂದು ನಗರ ಸಾರಿಗೆ ತಜ್ಞ ಸಂಜೀವ್ ಪಿ ದ್ಯಾಮಣ್ಣನವರ್ ಕರೆದಿದ್ದಾರೆ. ಅದನ್ನು ಈಗ ಕನಸು ಕಾಣಲೂ ಸಾಧ್ಯವಿಲ್ಲ. 15 ಅಥವಾ 20 ವರ್ಷಗಳ ಹಿಂದೆಯೇ ಈ ಯೋಜನೆ ಜಾರಿಗೆ ಬಂದಿದ್ದರೂ ನಮಗೆ ಅವಕಾಶವಿತ್ತು. ಈಗ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ. ಈಗ ಇರುವ ಏಕೈಕ ಅವಕಾಶ ಎಂದರೆ ಪ್ರಸ್ತಾವಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್) ಯೋಜನೆಯ ಉದ್ದಕ್ಕೂ ಒಂದು ವರ್ತುಲ ರೈಲು ಮಾರ್ಗ ನಿರ್ಮಿಸಬಹುದಾಗಿದೆ ಎಂದಿದ್ದಾರೆ.

ಈ ಯೋಜನೆ ಅನುಷ್ಠಾನಗೊಳ್ಳದ ಬಗ್ಗೆ ಯಾರನ್ನೂ ದೋಷಣೆ ಮಾಡಬಾರದು. ನಾನು ಹುಟ್ಟಿ ಬೆಳದದ್ದು ಬೆಂಗಳೂರಿನಲ್ಲಿಯೇ. ಆ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಇರಲಿಲ್ಲ. ನಂತರ ನಗರದಲ್ಲಿ ಜನಸಂಖ್ಯೆ ಹೆಚ್ಚಾಯಿತು ಎಂದು ಮಾಜಿ ಸಂಸದ ಎಂ.ವಿ. ರಾಜೀವ್ ಗೌಡ ಹೇಳಿದ್ದಾರೆ.

ಉಪನಗರ ರೈಲಿನಂತಹ ನಗರ-ನಗರ ಸಾರಿಗೆಯ ಕಲ್ಪನೆಗೆ ರೈಲ್ವೆ ಹೆಚ್ಚು ಮುಕ್ತವಾಗಿರಲಿಲ್ಲ. ಅವರ ಗಮನವೆಲ್ಲಾ ಅಂತರ-ನಗರದ ಮೇಲೆ ಮಾತ್ರ ಇತ್ತು ಮತ್ತು ಆದ್ದರಿಂದ ಉಪನಗರ ರೈಲು ಯೋಜನೆಯು ತುಂಬಾ ನಿಧಾನವಾಯಿತು. ಆದಾಗ್ಯೂ ಈಗ ವಿಶೇಷ ಏಜೆನ್ಸಿ, ಕೆ-ರೈಡ್ ಅಡಿಯಲ್ಲಿ ಯೋಜನೆ ಕಾಮಗಾರಿ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆ ಅನುಷ್ಠಾನವಾಗಿದ್ದರೆ ನಗರದಲ್ಲಿನ ಇಂದಿನ ಟ್ರಾಫಿಕ್ ಟಾಮ್ ಸಮಸ್ಯೆ ಇರುತ್ತಿರಲಿಲ್ಲ ಎಂದು ಜನಪ್ರಿಯ ಎಕ್ಸ್ ಖಾತೆ Bnglrweatherman ನಲ್ಲಿ ಹೇಳಲಾಗಿದೆ. ವಾಟ್ ಎ ಗ್ರೇಟ್ ಮಿಸ್ ಎಂದು ಅಶಿಶ್ ಮಹೇಂದ್ರ ಎಂಬುವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ ತೀರ್ಪು ಸೆ.9ಕ್ಕೆ ಕಾಯ್ದಿರಿಸಿದ ಕೋರ್ಟ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

'DNA ಕಳ್ಳತನ' ಭೀತಿ.. ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ, ಕಾರಣ ಏನು? video

SCROLL FOR NEXT