ಮದನ್ - ನಟಿ ವೀಣಾ 
ರಾಜ್ಯ

ಬೆಂಗಳೂರು: ಮದುವೆಗೆ ಒಪ್ಪದ ಕಿರುತೆರೆ ನಟಿ; ಮನನೊಂದ ಯುವಕ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಂಡ ಯುವಕ 25 ವರ್ಷದ ಮದನ್ ಎಂದು ತಿಳಿದು ಬಂದಿದ್ದು, ಕಿರುತೆರೆ ನಟಿ ವೀಣಾ ಅವರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಬೆಂಗಳೂರು: ಕಿರುತೆರೆ ನಟಿಯೊಬ್ಬರು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ 25 ವರ್ಷದ ಮದನ್ ಎಂದು ತಿಳಿದು ಬಂದಿದ್ದು, ಕಿರುತೆರೆ ನಟಿ ವೀಣಾ ಅವರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಸೀರಿಯಲ್ ನಟಿ ವೀಣಾ ಅವರೊಂದಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮದನ್ ಸೆಪ್ಟೆಂಬರ್ ಒಂದರಂದು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಆದರೆ ವೀಣಾ ಮದುವೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮನ ನೊಂದು ಮದನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಪಾರ್ಟಿಯಲ್ಲಿ ಮದನ್, ವೀಣಾಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ಆದರೆ ನಟಿ ಮದುವೆ ಪ್ರಸ್ತಾಪ ನಿರಾಕರಿಸಿದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಟಿ ವೀಣಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಕಾಂಗ್ರೆಸ್`ಗೆ ಹೊನ್ನಾಳಿ ಶಾಸಕ ಶಾಕ್; ಶಾಂತನಗೌಡ ರಾಜೀನಾಮೆಗೆ ಮುಂದು!

ಅತಿರೇಕದ ಆಚರಣೆ ಮಧ್ಯೆಯೂ ಭಾರತ ಯುವ ಪಡೆಯನ್ನು ಶ್ಲಾಘಿಸಿದ್ದೇಕೆ ಶೋಯೆಬ್ ಅಖ್ತರ್, Pak ವಿರುದ್ಧ ಆಕ್ರೋಶ!

ಬಾಲಿವುಡ್ ನಟನ ಸಂಕಷ್ಟಕ್ಕೆ ಮಿಡಿದ ಸೋಶಿಯಲ್ ವರ್ಕರ್, ಶರದ್ ಕಪೂರ್‌ಗೆ ಆರ್ಥಿಕ ನೆರವು ನೀಡಿದ ರಾಹುಲ್ ಗುಪ್ತಾ! VIDEO

ಜಾಗತಿಕ ತಂತ್ರಜ್ಞಾನ ಹಬ್ ಆಗಲಿದೆ ಕರ್ನಾಟಕ; 'AI, ರೋಬೋಟಿಕ್ಸ್, ಚಿಪ್ ಉತ್ಪಾದನೆಗೆ ಆದ್ಯತೆ': ಸಿಎಂ DK ಶಿವಕುಮಾರ್