ಆಟೋ ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪ್ರಯಾಣ ದರ ಹೆಚ್ಚಿಸಿ, ಜಗಳಕ್ಕೆ ಕಡಿವಾಣ ಹಾಕಿ- ಆಟೋ ಚಾಲಕರ ಸಲಹೆ!

ಇಂಧನ, ಬಿಡಿಭಾಗಗಳು ಮತ್ತು ಜೀವನ ವೆಚ್ಚ ನಿರಂತರವಾಗಿ ಏರಿಕೆಯಾಗಿರುವುದರಿಂದ ಆಟೋಗಳ ಕಾರ್ಯಾಚರಣೆ ವೆಚ್ಚವು ಗಗನಕ್ಕೇರಿದೆ. ಆದರೆ ಕಳೆದ ಮೂರು ವರ್ಷಗಳಿಂದ ದರಗಳು ಒಂದೇ ಆಗಿವೆ.

ಬೆಂಗಳೂರು: ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಪ್ರಯಾಣಿಕರ ಮೇಲೆ ಆಟೋ ಚಾಲಕರ ಹಲ್ಲೆ, ಪರಸ್ಪರ ವಾಗ್ವಾದ, ಅವಾಚ್ಯ ಶಬ್ದಗಳಿಂದ ನಿಂದನೆಯಂತಹ ಘಟನೆಗಳು ಬೆಂಗಳೂರಿನಲ್ಲಿ ಸಾಮಾನ್ಯ ದೃಶ್ಯವಾಗಿದೆ. ಪ್ರತಿ ವರ್ಷ ಆಟೊ ದರ ಪರಿಷ್ಕರಣೆ ಹಾಗೂ ಹೊಸ ದರವನ್ನು ಆಟೊ ಚಾಲಕರು ಕಟ್ಟುನಿಟ್ಟಾಗಿ ಪಾಲಿಸಿದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿಯಂತ್ರಿಸಬಹುದು ಎನ್ನುತ್ತಾರೆ ಆಟೊ ಚಾಲಕರು ಹಾಗೂ ಸಂಘ ಸಂಸ್ಥೆಗಳು.

ಇಂಧನ, ಬಿಡಿಭಾಗಗಳು ಮತ್ತು ಜೀವನ ವೆಚ್ಚ ನಿರಂತರವಾಗಿ ಏರಿಕೆಯಾಗಿರುವುದರಿಂದ ಆಟೋಗಳ ಕಾರ್ಯಾಚರಣೆ ವೆಚ್ಚವು ಗಗನಕ್ಕೇರಿದೆ. ಆದರೆ ಕಳೆದ ಮೂರು ವರ್ಷಗಳಿಂದ ದರಗಳು ಒಂದೇ ಆಗಿವೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ (ARDU) ಪ್ರಧಾನ ಕಾರ್ಯದರ್ಶಿ ರುದ್ರ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ಅನೇಕ ಆಟೋ ಚಾಲಕರು ಈಗ ಮೀಟರ್ ಪಾಲಿಸಲ್ಲ ಎಂಬುದನ್ನು ಒಪ್ಪಿಕೊಂಡ ಮೂರ್ತಿ, ಕೆಲವು ವರ್ಷಗಳ ಹಿಂದಷ್ಟೇ ಆ್ಯಪ್ ಪರಿಚಯಿಸಲಾಯಿತು. ಅದಕ್ಕೂ ಹಿಂದೆ ಜನರು ಮೀಟರ್ ನಷ್ಟು ಹಣ ಪಾವತಿಸಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈಗ ಚಾಲಕರು ಮೀಟರ್ ಪಾಲಿಸಲ್ಲ ಎಂದು ಜನರು ಆ್ಯಪ್ ಚಾಲಿತ ಆಟೋಗಳಿಗೆ ಮೊರೆ ಹೋಗುತ್ತಾರೆ. ಚಾಲಕರು ಆ್ಯಪ್ ಮೇಲೆ ಆಧಾರಿತವಾಗಿರುವಾಗ ಜನರು ಆಟೋ ಬಳಸದೆ ಬುಕ್ಕಿಂಗ್ ರದ್ದು ಮಾಡಿದಾಗ ಸಹಜವಾಗಿ ಚಾಲಕರು ಆಕ್ರೋಶಗೊಳ್ಳುತ್ತಾರೆ ಎಂದರು.

ಕಳೆದ ದಶಕದಲ್ಲಿ 2013 ರಲ್ಲಿ ಎರಡು ಬಾರಿ ಮತ್ತು 2021 ರಲ್ಲಿ ಕೊನೆಯದಾಗಿ ಮಾತ್ರ ಆಟೋ ದರಗಳನ್ನು ಹೆಚ್ಚಿಸಲಾಗಿದೆ. ಅಂದಿನಿಂದ ದರ ಹೆಚ್ಚಿಸಲು ಸರ್ಕಾರಕ್ಕೆ ಹಲವು ಮನವಿ ಸಲ್ಲಿದ್ದೇವೆ. ಆದರೆ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಮೂರ್ತಿ ಹೇಳಿದರು.

ಸರ್ಕಾರ ಪ್ರಯಾಣ ದರ ಹೆಚ್ಚಿಸಿದರೂ ಆಟೋ ಚಾಲಕರು ಮೀಟರ್ ಪಾಲಿಸಲ್ಲ ಎಂದು ಕೆಲವು ಬಳಕೆದಾರರು ಹೇಳುತ್ತಾರೆ. ನಿಯಮವನ್ನು ಉಲ್ಲಂಘಿಸುವವರಿಗೆ ಭಾರಿ ದಂಡವನ್ನು ವಿಧಿಸಬೇಕು. ಮರು ಕಳಿಸಿದರೆ ಅವರ ಆಟೋ ಪರ್ಮಿಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ರದ್ದುಗೊಳಿಸಬೇಕು. ಇದರಿಂದ ಪ್ರತಿಯೊಬ್ಬರು ಆಟೋ ಮೀಟರ್ ಪಾಲಿಸುತ್ತಾರೆ ಎಂದರು.

ಆಟೋ ದರವನ್ನು ಕನಿಷ್ಠ 40 ರೂ.ಗೆ ಮತ್ತು ನಂತರ ಪ್ರತಿ ಕಿಲೋಮೀಟರ್‌ಗೆ 20 ರೂ.ಗೆ ಹೆಚ್ಚಿಸುವಂತೆ ARDU ಮತ್ತು ಆದರ್ಶ ಆಟೋ ಯೂನಿಯನ್‌ನಂತಹ ಆಟೋ ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸಿವೆ.

ನನಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಟೋ ಓಡಿಸಿಕೊಂಡು ಬರುವ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ನನ್ನ ಹೆಂಡತಿಯೂ ಕೆಲಸ ಮಾಡುತ್ತಿರುವುದರಿಂದ ಹೇಗೋ ಸಂಸಾರ ನಡೆಸುತ್ತಿದ್ದೇವೆ. ನನ್ನ ಸಂಪಾದನೆಯ ಬಹುಪಾಲು ಗ್ಯಾಸ್ ಗೆ ಹೋಗುತ್ತದೆ, ಆಟೋ, ಆಹಾರದ ಖರ್ಚನ್ನು ನಿರ್ವಹಿಸುತ್ತದೆ. ಯಾವುದೇ ಉಳಿತಾಯವಿಲ್ಲದೆ ನನ್ನ ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಮದುವೆ ಮಾಡುವುದು ಹೇಗೆ? ಎಂದು ಕೆಂಗೇರಿ ನಿವಾಸಿ ಪ್ರಶಾಂತ್‌ ಎಂಬುವರು ತಮ್ಮ ಆಳಲು ತೋಡಿಕೊಳ್ಳುವ ಮೂಲಕ ಆಟೋ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT