ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಸ್ಟಾರ್ ಹೆಲ್ತ್ ಡೇಟಾ ಹ್ಯಾಕ್: 3 ಕೋಟಿಗೂ ಹೆಚ್ಚು ಗ್ರಾಹಕರ ಮಾಹಿತಿ ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ!

xenZen ಎಂದು ಗುರುತಿಸಲಾದ ಹ್ಯಾಕರ್‌ ಗ್ರಾಹಕರ ಜನ್ಮ ದಿನಾಂಕ, ಫೋನ್ ಸಂಖ್ಯೆ, ಪ್ಯಾನ್ ಕಾರ್ಡ್ ಸೇರಿದಂತೆ ಇತರ ವಿವರಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರಿಂದ ವಿಮಾ ಕಂಪನಿಯ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.

ಸಾಂದರ್ಭಿಕ ಚಿತ್ರ
Nagaraja AB
Updated On : 10 Oct 2024, 10:51 am

ಬೆಂಗಳೂರು: ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ ಕಂಪನಿಯ 31 ಮಿಲಿಯನ್‌ಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾವನ್ನು 1.50 ಲಕ್ಷ ಡಾಲರ್ ಗೆ ಮಾರಾಟಕ್ಕೆ ಲಭ್ಯವಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.

xenZen ಎಂದು ಗುರುತಿಸಲಾದ ಹ್ಯಾಕರ್‌ ಗ್ರಾಹಕರ ಜನ್ಮ ದಿನಾಂಕ, ಫೋನ್ ಸಂಖ್ಯೆ, ಪ್ಯಾನ್ ಕಾರ್ಡ್ ಸೇರಿದಂತೆ ಇತರ ವಿವರಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರಿಂದ ವಿಮಾ ಕಂಪನಿಯ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.

ದುರುದ್ದೇಶಪೂರಿತ ಸೈಬರ್ ದಾಳಿಗೆ ಗ್ರಾಹಕರು ಬಲಿಯಾಗಿದ್ದಾರೆ ಪರಿಣಾಮ ಕೆಲವು ಡೇಟಾಗೆ ಅನಧಿಕೃತ ಮತ್ತು ಅಕ್ರಮ ಪ್ರವೇಶವಾಗಿದೆ ಎಂದು ವಿಮಾ ಕಂಪನಿ TNIE ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಸೇವೆಗಳು ಅಡ್ಡಿಯಿಲ್ಲದೆ ಮುಂದುವರಿಯುತ್ತವೆ ಎಂದು ಸ್ಪಷ್ಪಪಡಿಸುತ್ತೇವೆ. ಸೈಬರ್ ಭದ್ರತೆ ತಜ್ಞರ ನೇತೃತ್ವದಲ್ಲಿ ಸಂಪೂರ್ಣ ಮತ್ತು ಕಠಿಣವಾದ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ.ತನಿಖೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

Advertisement

Advertisement

Also Read

ಸೈಬರ್ ಕಳ್ಳರಿಂದ ಹೈಕೋರ್ಟ್‌ ವಿಡಿಯೋ ಕಾನ್ಫರೆನ್ಸ್ ಹ್ಯಾಕ್: ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯಗಳು!

ಮದ್ರಾಸ್ ಹೈಕೋರ್ಟ್ ಸಂಪರ್ಕಿಸಿದ್ದು, ಸಂಬಂಧಿತ ಮಾಹಿತಿಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಕೆಲವು ಮೂರನೇ ವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶವನ್ನು ಶ್ರದ್ದೆಯಿಂದ ಪಾಲಿಸುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments