ರಾಜ್ಯ

ಬೆಂಗಳೂರು: ಬಟ್ಟೆ ಸರಿಯಾಗಿ ಧರಿಸದಿದ್ರೆ ಆ್ಯಸಿಡ್ ಎರಚುವೆ! ಸಹೋದ್ಯೋಗಿ ಮಹಿಳೆಗೆ ಬೆದರಿಕೆ ಹಾಕಿದ ವ್ಯಕ್ತಿ, ಕೆಲಸದಿಂದ ವಜಾ

ನಿಮ್ಮ ಹೆಂಡತಿಗೆ ಒಳ್ಳೆಯ ಡ್ರೆಸ್ ಧರಿಸಲು ಹೇಳಿ, ಇಲ್ಲದಿದ್ದರೆ ಆಕೆಯ ಮುಖದ ಮೇಲೆ ಆಸಿಡ್ ಎರಚಬೇಕಾಗುತ್ತದೆ ಎಂದು ಶೆಟ್ಟಿ ಅವರು ಅಕ್ಟೋಬರ್ 9 ರಂದು ಅನ್ಸಾರ್‌ಗೆ ಮೇಸೆಜ್ ಕಳುಹಿಸಿದ್ದರು.

ಬೆಂಗಳೂರು: ಸರಿಯಾಗಿ ಬಟ್ಟೆ ಧರಿಸದಿದ್ದರೆ ಮಹಿಳಾ ಸಹೋದ್ಯೋಗಿಯ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.ಪೊಲೀಸರು ಆರೋಪಿ ನಿಕಿತ್ ಶೆಟ್ಟಿ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ವಿಶೇಷವಾಗಿ ಕರ್ನಾಟಕದಲ್ಲಿ, ನಿಮ್ಮ ಹೆಂಡತಿಗೆ ಒಳ್ಳೆಯ ಡ್ರೆಸ್ ಧರಿಸಲು ಹೇಳಿ, ಇಲ್ಲದಿದ್ದರೆ ಆಕೆಯ ಮುಖದ ಮೇಲೆ ಆಸಿಡ್ ಎರಚಬೇಕಾಗುತ್ತದೆ ಎಂದು ಶೆಟ್ಟಿ ಅವರು ಅಕ್ಟೋಬರ್ 9 ರಂದು ಅನ್ಸಾರ್‌ಗೆ ಮೇಸೆಜ್ ಕಳುಹಿಸಿದ್ದರು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಮೇಸೆಜ್ ಸ್ಕ್ರೀನ್ ಶಾಟ್ ನ್ನು ಹಂಚಿಕೊಂಡಿದ್ದರು.

ನನ್ನ ಹೆಂಡತಿಯ ಬಟ್ಟೆಯ ಆಯ್ಕೆಯನ್ನು ಪ್ರಶ್ನೆ ಮಾಡಿರುವ ಈ ವ್ಯಕ್ತಿ, ನನ್ನ ಹೆಂಡತಿಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈ ರೀತಿಯ ಯಾವುದೇ ಘಟನೆ ನಡೆಯದಂತೆ ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ಶಹಬಾಜ್ ಅನ್ಸಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದು. ಇದನ್ನು ಡಿಜಿಪಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಕೂಡಾ ಮಾಡಿದ್ದಾರೆ.

ಈ ಸಂಸ್ಥೆಯಲ್ಲಿ (ಶೆಟ್ಟಿ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆ) ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ನೆಟ್ಟಿಗರು ಈ ವಿಷಯವನ್ನು ಗಮನಕ್ಕೆ ತಂದ ನಂತರ ಶೆಟ್ಟಿ ಅವರನ್ನು ಕಂಪನಿಯಿಂದ ವಜಾಗೊಳಿಸಿದೆ. ನನ್ನ ಪತ್ನಿಗೆ ಆಸಿಡ್ ದಾಳಿಯ ಬೆದರಿಕೆ ಹಾಕಿದ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾನೆ. ಕಂಪನಿಯು ಕೂಡಲೇ ಕಾರ್ಯಪ್ರವೃತ್ತರಾಗಿ ಅವರನ್ನು ವಜಾಗೊಳಿಸಿದೆ. ಇದನ್ನು ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಅನ್ಸಾರ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ