ಬಂಧನ (ಸಾಂಕೇತಿಕ ಚಿತ್ರ) 
ರಾಜ್ಯ

RBIನಲ್ಲಿ ನಕಲಿ ಕರೆನ್ಸಿ ವಿನಿಮಯಕ್ಕೆ ಯತ್ನ: ಐವರ ಬಂಧನ

ಆರೋಪಿಗಳಿಂದ ಮುದ್ರಣ ಯಂತ್ರ, ಕರೆನ್ಸಿ ಪೇಪರ್ಸ್ ಮತ್ತು ರೂ.54 ಲಕ್ಷ ಮೌಲ್ಯದ ಎರಡು ಸಾವಿರ ರುಪಾಯಿ ಮುಖಬೆಲೆಯ ನಕಲಿ ನೋಟುಗಳು ಹಾಗೂ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ಬೆಂಗಳೂರು: 2000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಬದಲಾವಣೆಗೆ ಯತ್ನಿಸಿದ ಐವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಎ.ಕೆ.ಅಫೈಲ್ ಹುಸೇನ್ (29), ಪ್ರಸೀತ್ (47), ಮೊಹಮ್ಮದ್ ಆಫ್ಘಾಸ್ (34), ನೂರುದ್ದೀನ್ ಅಲಿಯಾಸ್ ಅನ್ವರ್ (34) ಹಾಗೂ ಪ್ರಿಯೇಶ್ (34) ಎಂದು ಗುರ್ತಿಸಲಾಗಿದೆ.

ಆರೋಪಿಗಳಿಂದ ಮುದ್ರಣ ಯಂತ್ರ, ಕರೆನ್ಸಿ ಪೇಪರ್ಸ್ ಮತ್ತು ರೂ.54 ಲಕ್ಷ ಮೌಲ್ಯದ ಎರಡು ಸಾವಿರ ರುಪಾಯಿ ಮುಖಬೆಲೆಯ ನಕಲಿ ನೋಟುಗಳು ಹಾಗೂ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ಸೆಪ್ಟೆಂಬರ್ 9 ರಂದು ಬಳ್ಳಾರಿಯ ಸಿರುಗುಪ್ಪದ ಅಫ್ಜಲ್ ಹುಸೇನ್ (29) ಬೆಂಗಳೂರಿನ ಆರ್‌ಬಿಐನ ಪ್ರಾದೇಶಿಕ ಕಚೇರಿಗೆ 2,000 ರೂ.ಗಳ 1,234 ನೋಟುಗಳೊಂದಿಗೆ ಭೇಟಿ ನೀಡಿದ್ದು, 24.68 ಲಕ್ಷ ರೂ.ಗಳ ಮೊತ್ತವನ್ನು 500 ರೂ ನೋಟುಗಳಿಗೆ ಬದಲಾಯಿಸಲು ಮುಂದಾಗಿದ್ದರು. ಈ ವೇಳೆ ನೋಟುಗಳ ಪರಿಶೀಲಿಸಿದ ಬ್ಯಾಂಕ್ ಅಧಿಕಾರಿಗಳಿಗೆ ನಕಲಿ ನೋಟುಗಳು ಎಂಬುದು ತಿಳಿದುಬಂದಿದೆ ಕೂಡಲೇ ಅಫ್ಜಲ್ ನನ್ನು ಮುಂದಿನ ತನಿಖೆಗಾಗಿ ನಕಲಿ ನೋಟುಗಳ ಸಮೇತ ಹಲಸೂರು ಗೇಟ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲಸೂರು ಗೇಟ್ ಪೊಲೀಸರು ನಕಲಿ ನೋಟುಗಳ ಬಳಕೆ (ಬಿಎನ್‌ಎಸ್ 179) ಮತ್ತು ನಕಲಿ ನೋಟುಗಳನ್ನು ಹೊಂದಿರುವ (ಬಿಎನ್‌ಎಸ್ 180) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT