ಮುಳ್ಳಯ್ಯನಗಿರಿ 
ರಾಜ್ಯ

GSI: ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಶ್ರೇಣಿ Danger zones ಪಟ್ಟಿಗೆ ಸೇರ್ಪಡೆ

ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಕಾರಣಗಳನ್ನು ಗುರುತಿಸಲು ಜಿಎಸ್ಐ ಸಮೀಕ್ಷೆ ನಡೆಸಿತು. ಈ ಸಂಬಂಧ ಮುಂಜಾಗ್ರತಾ ಕ್ರಮಕ್ಕೆ ಶಿಫಾರಸು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಜೊತೆಗೆ ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ಪರ್ವತದ ಶ್ರೇಣಿಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಅಪಾಯಕಾರಿ ವಲಯಗಳ ಪಟ್ಟಿಗೆ ಸೇರಿಸಿದೆ.

ಇತ್ತೀಚೆಗೆ, ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಕಾರಣಗಳನ್ನು ಗುರುತಿಸಲು ಜಿಎಸ್ಐ ಸಮೀಕ್ಷೆ ನಡೆಸಿತು. ಈ ಸಂಬಂಧ ಮುಂಜಾಗ್ರತಾ ಕ್ರಮಕ್ಕೆ ಶಿಫಾರಸು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.

ಕೇರಳದ ವಯನಾಡ್ ಪ್ರದೇಶದಲ್ಲಿ ಸಂಭವಿಸಿದ ದುರಂತದ ನಂತರ, ರಾಜ್ಯ ಸರ್ಕಾರವು ಭೂಕುಸಿತ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಗಳ ಪಟ್ಟಿಯನ್ನು ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಡಳಿತ 77 ಅನಾಹುತ ಪೀಡಿತ ಸ್ಥಳಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು.

ಚಂದ್ರದ್ರೋಣ ಪರ್ವತ ಶ್ರೇಣಿ

ಆಗಸ್ಟ್‌ನಲ್ಲಿ ಜಿಎಸ್‌ಐ ತಂಡವು ಮುಳ್ಳಯ್ಯನಗಿರಿ, ದತ್ತ ಪೀಠ ಮತ್ತು ಚಂದ್ರದ್ರೋಣ ಬೆಟ್ಟ ಶ್ರೇಣಿಗಳಿಗೆ ಭೇಟಿ ನೀಡಿ, ಭೂಕುಸಿತ ಮತ್ತು ಪ್ರವಾಹದ ಕಾರಣಗಳನ್ನು ಅಧ್ಯಯನ ಮಾಡಿತು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ "ಬುದ್ಧಿಹೀನ ಮತ್ತು ಅವೈಜ್ಞಾನಿಕ" ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಭೂಕುಸಿತಕ್ಕೆ ಕಾರಣವೆಂದು ವರದಿ ಹೇಳಿದೆ. ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಬೇಕು ಎಂದು ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT