ಸ್ಥಳೀಯರ ಪ್ರತಿಭಟನೆ TNIE
ರಾಜ್ಯ

ಗುಂಡಿ ಬಿದ್ದ ರಸ್ತೆ, ದುರ್ವಾಸನೆ ಬಗ್ಗೆ ನಿವಾಸಿಗಳ ಪ್ರತಿಭಟನೆ: ಇದು 'ಪ್ರಚಾರದ ಗೀಳು' ಎಂದ BBMP

ಬಾಬುಸಾಬ್ ಪಾಳ್ಯ ಮುಖ್ಯರಸ್ತೆಗೆ ಸಂಪರ್ಕಿಸುವ ಅಗರ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಘೋಷಣೆಗಳನ್ನು ಕೂಗಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು.

ಬೆಂಗಳೂರು: ಹೊರಮಾವು ನೂರಾರು ನಿವಾಸಿಗಳು ಗುಂಡಿ ಬಿದ್ದ ರಸ್ತೆಗಳು ಹಾಗೂ ದುರ್ವಾಸನೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಾಬುಸಾಬ್ ಪಾಳ್ಯ ಮುಖ್ಯರಸ್ತೆಗೆ ಸಂಪರ್ಕಿಸುವ ಅಗರ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಘೋಷಣೆಗಳನ್ನು ಕೂಗಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು. ನಿವಾಸಿಗಳ ಪ್ರತಿಭಟನೆ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಇದೊಂದು 'ಪ್ರಚಾರದ ಗೀಳು' ಎಂದು ಕರೆದಿದ್ದಾರೆ.

ವಾರ್ಡ್‌ನ ಹಿರಿಯ ನಿವಾಸಿಯೂ ಆಗಿರುವ ವರ್ಕಿ ಥಾಮಸ್ ಮಾತನಾಡಿ, ಹೊರಮಾವು ಪ್ರಕೃತಿ ಟೌನ್‌ಶಿಪ್‌ನಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಆರು ಶಾಲೆಗಳು ಮತ್ತು ಅನೇಕ ಅಪಾರ್ಟ್‌ಮೆಂಟ್‌ಗಳಿವೆ. ಬಿಬಿಎಂಪಿಯು ಚರಂಡಿಗಳನ್ನು ನಿರ್ವಿುಸದೇ ಇರುವುದರಿಂದ ಕೊಳಚೆ ನೀರು ರಸ್ತೆಗಳ ಮೇಲೆ ನಿಂತು ದುರ್ವಾಸನೆ ಬೀರುತ್ತಿದ್ದು ಜನ ಸಂಚಾರಕ್ಕೂ ತೊಂದರೆಯಾಗಿದೆ.

ಒಂದೂವರೆ ವರ್ಷದಿಂದ ಸಮಸ್ಯೆ ಬಗೆಹರಿದಿಲ್ಲ. ಕಳೆದ ವಾರ ಯಲಹಂಕ, ಹೆಬ್ಬಾಳದಲ್ಲಿ ಮಳೆ ಸುರಿದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಗಳು ಹಾಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು ಬಿಬಿಎಂಪಿ ಪ್ರಮುಖ ರಸ್ತೆಗಳು ಕಾರ್ಯಪಾಲಕ ಇಂಜಿನಿಯರ್ ಭಾಗ್ಯಮ್ಮ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸ್ಥಳಕ್ಕಾಗಮಿಸಿದ್ದು, ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನೆ ನಡೆಸುತ್ತಿರುವವರಿಗೆ ಪ್ರಚಾರದ ಗೀಳು ಎಂದು ಕರೆದರು ಎಂದು ಥಾಮಸ್ ಹೇಳಿದ್ದಾರೆ.

ಪಾಲಿಕೆಯವರಿಗೆ ನಾಚಿಕೆ ಆಗಲೆಂದು ನಿವಾಸಿಗಳು ರಸ್ತೆಯಲ್ಲಿ ನಿಂತಿರುವ ನೀರಿನಲ್ಲಿ ಪೇಪರ್ ಬೋಟ್ ಗಳನ್ನು ಹಾಕಿದ್ದರು. ದುರ್ವಾಸನೆ ಎಂದು ಘೋಷಣೆಗಳನ್ನು ಕೂಗಿದರು. ಸಾರ್ವಜನಿಕ ಬೋರ್‌ವೆಲ್‌ನಿಂದ ನೀರನ್ನು ಅಕ್ರಮವಾಗಿ ಬಳಸುವುದು ಸೇರಿದಂತೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಮಾನತುಗೊಂಡ ಎಇ ರಮೇಶ್‌ಗೆ ಅರಿವಿದ್ದರೂ ಅವರು ಎಲ್ಲ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT