ನವದೆಹಲಿ: ವಾಣಿಜ್ಯ ತೆರಿಗೆ ಸಂಗ್ರಹ ಗುರಿಯನ್ನು ತಲುಪುವಲ್ಲಿ ವಿಫಲರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ವಾಣಿಜ್ಯ ತೆರಿಗೆ ಸಂಗ್ರಹದ ಪ್ರಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವ ಸಿಎಂ, ಯಾವುದೇ ಸಂದರ್ಭದಲ್ಲೂ ಕಡಿಮೆ ಆಗಬಾರದು ಎಂದು ಒತ್ತಿ ಹೇಳಿದರು.
ರಾಜ್ಯ 2024-25ಕ್ಕೆ 1,10,000 ಕೋಟಿ ರೂ.ಗಳ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಜಿಎಸ್‌ಟಿ 44,783 ಕೋಟಿ ರೂ, ಕರ್ನಾಟಕ ಮಾರಾಟ ತೆರಿಗೆ 13,193 ಕೋಟಿ ರೂ. ಮತ್ತು ವೃತ್ತಿಪರ ತೆರಿಗೆ 797 ಕೋಟಿ ರೂ.ಗಳನ್ನು ಒಳಗೊಂಡಂತೆ ಒಟ್ಟು 58,773 ಕೋಟಿ ರೂ ತೆರಿಗೆ ಸಂಗ್ರಹ ಮಾಡಲಾಗಿದೆ.
ರಾಜ್ಯದ ಅಭಿವೃದ್ಧಿಗೆ ಗುರಿ ಸಾಧಿಸುವುದು ಅತ್ಯಗತ್ಯ’ ಎಂದ ಸಿದ್ದರಾಮಯ್ಯ, ಸಮನ್ವಯದ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ರಾಜ್ಯವು ಈವರೆಗೆ ಶೇ.53.5 ಗುರಿ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 5,957 ಕೋಟಿ ರೂ.ಗಳ ಸಂಗ್ರಹ ಹೆಚ್ಚಿದ್ದು, ಮಾರ್ಚ್ ವೇಳೆಗೆ ವಾರ್ಷಿಕ ಗುರಿ ತಲುಪಲು ಮುಂದಿನ 5 ತಿಂಗಳಲ್ಲಿ ತಿಂಗಳಿಗೆ 10,200 ಕೋಟಿ ಸಂಗ್ರಹಿಸಬೇಕಿದೆ.
‘ರಾಜ್ಯದ ಅಭಿವೃದ್ಧಿಗೆ ಗುರಿ ಸಾಧಿಸುವುದು ಅತ್ಯಗತ್ಯ’ ಎಂದ ಸಿದ್ದರಾಮಯ್ಯ, ಸಮನ್ವಯದ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದರು.
ಮಾಸಿಕ ಪರಿಶೀಲನೆ ನಡೆಸುವುದಾಗಿ ಘೋಷಿಸಿದ ಸಿಎಂ, ಯಾವುದೇ ಅಧಿಕಾರಿ ಗುರಿ ತಲುಪದಿದ್ದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪುನರುಚ್ಚರಿಸಿದರು.
ಕರಸಮಾಧಾನ ಯೋಜನೆಯಿಂದ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ನಂತರ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹವನ್ನು ಪರಿಶೀಲಿಸಿದ ಸಿದ್ದರಾಮಯ್ಯ, ಗೋವಾದಿಂದ ಅಕ್ರಮ ಮದ್ಯ ಸಾಗಾಟ ತಡೆಯಲು ಹಾಗೂ ಮಾರ್ಚ್‌ನ ಗುರಿ ತಲುಪಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚನೆ ನೀಡಿದರು.
2024-25ರಲ್ಲಿ ಅಬಕಾರಿ ತೆರಿಗೆ ಸಂಗ್ರಹ ಗುರಿ 38,525 ಕೋಟಿ ರೂಪಾಯಿಗಳಾಗಿವೆ. ಅಕ್ಟೋಬರ್ 28 ರವರೆಗೆ ಇಲಾಖೆ 20,237 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಗುರಿಯ ಶೇ.52.53 ರಷ್ಟು ಸಾಧನೆ ಮಾಡಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಸಂಗ್ರಹಣೆಗಳು Rs1,301.15 ಕೋಟಿ ಹೆಚ್ಚಾಗಿದೆ ಎಂದು ಸಿಎಂಒ ತಿಳಿಸಿದೆ.