ಬೆಂಗಳೂರು ಟ್ರಾಫಿಕ್ ಪೊಲೀಸರು (ಸಂಗ್ರಹ ಚಿತ್ರ) 
ರಾಜ್ಯ

Bengaluru Traffic Police ಭರ್ಜರಿ ಕಾರ್ಯಾಚರಣೆ: ಒಂದೇ ದಿನ 477 ನಿಯಮ ಉಲ್ಲಂಘನೆ ಪ್ರಕರಣ ದಾಖಲು!

ವಿಶೇಷ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗ ಸಂಚಾರ ಪೊಲೀಸರು ಟ್ರಿಪಲ್ ರೈಡಿಂಗ್ ಮತ್ತು ನೋ-ಎಂಟ್ರಿಯಂತಹ ಸಂಚಾರ ಉಲ್ಲಂಘನೆಗಳನ್ನು ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲೇ ಇತ್ಯರ್ಥಪಡಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ, ಅಪಘಾತ ನಿಯಂತ್ರಣದ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಮಂಗಳವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಒಂದೇ ದಿನ 477 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.

ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗ ಸಂಚಾರ ಪೊಲೀಸರು ಟ್ರಿಪಲ್ ರೈಡಿಂಗ್ ಮತ್ತು ನೋ-ಎಂಟ್ರಿಯಂತಹ ಸಂಚಾರ ಉಲ್ಲಂಘನೆಗಳನ್ನು ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲೇ ದಂಡ ವಸೂಲಿ ಮಾಡಿ ಇತ್ಯರ್ಥಪಡಿಸಿದ್ದಾರೆ.

ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು 477 ಪ್ರಕರಣಗಳು ದಾಖಲಿಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಯು ಟ್ರಿಪಲ್ ರೈಡಿಂಗ್, ನೋ-ಎಂಟ್ರಿ ಮತ್ತು ಫುಟ್‌ಪಾತ್ ಪಾರ್ಕಿಂಗ್ ಸೇರಿದಂತೆ ಇತರೆ ಗಂಭೀರ ನಿಯಮ ಉಲ್ಲಂಘನೆಗಳ ಮೇಲೆ ಕೇಂದ್ರೀಕರಿಸಲಾಗಿತ್ತು.

ಈ ವೇಳೆ 60 ಟ್ರಿಪಲ್ ರೈಡಿಂಗ್ ಪ್ರಕರಣಗಳು, 338 ನೋಎಂಟ್ರಿ ಉಲ್ಲಂಘನೆ ಅಥವಾ ಏಕಮುಖ ಉಲ್ಲಂಘನೆಯ ಪ್ರಕರಣಗಳು, 62 ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ಮತ್ತು 17 ಡಬಲ್ ಪಾರ್ಕಿಂಗ್ ಪ್ರಕರಣಗಳನ್ನು ಒಳಗೊಂಡಿದೆ. ಈ ಕಾರ್ಯಾಚರಣೆಗಳಿಂದ ಒಟ್ಟು 2,41,100 ರೂ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ, ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸಂಚಾರ ಪಶ್ಚಿಮ ವಿಭಾಗವು ಇದೇ ರೀತಿಯ ಕಾರ್ಯಾಚರಣೆಯಲ್ಲಿ ಈಗಾಗಲೇ 498 ಪ್ರಕರಣಗಳನ್ನು ದಾಖಲಿಸಿದೆ. ಆ ದಿನ ದಾಖಲಾದ ಉಲ್ಲಂಘನೆಗಳಲ್ಲಿ 401 ಏಕಮುಖ ಅಥವಾ ಪ್ರವೇಶ ನಿಷೇಧದ ಉಲ್ಲಂಘನೆಗಳು, 49 ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ಮತ್ತು 48 ಟ್ರಿಪಲ್ ರೈಡಿಂಗ್ ಪ್ರಕರಣಗಳು ಸೇರಿವೆ. ಈ ಕಾರ್ಯಾಚರಣೆಯಿಂದ 2,54,000 ರೂ ಗಮನಾರ್ಹ ದಂಡ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಪೂರ್ವ ಸಂಚಾರ ವಿಭಾಗವೂ ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 325 ಉಲ್ಲಂಘನೆಗಳನ್ನು ದಾಖಲಿಸಿದೆ. ಈ ಉಪಕ್ರಮದಿಂದ 1,62,500 ದಂಡ ವಸೂಲಿಯಾಗಿದೆ.

ಬೆಂಗಳೂರು ನಿರಂತರ ಟ್ರಾಫಿಕ್ ಸವಾಲುಗಳನ್ನು ಎದುರಿಸುತ್ತಿರುವ ಕಾರಣ, ಸಂಚಾರ ಪೊಲೀಸರು ಎಲ್ಲಾ ರಸ್ತೆ ಬಳಕೆದಾರರಿಗೆ ಸುರಕ್ಷತೆಗೆ ಆದ್ಯತೆ ನೀಡುವಂತೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತ ಚಾಲನಾ ವಾತಾವರಣವನ್ನು ಸೃಷ್ಟಿಸಲು ಸಂಚಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸುತ್ತಾರೆ. ಈ ವೇಗವನ್ನು ಉಳಿಸಿಕೊಳ್ಳಲು ಮತ್ತಷ್ಟು ಕಾರ್ಯಾಚರಣೆಗಳನ್ನು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT