ಸಾಂದರ್ಭಿಕ ಚಿತ್ರ 
ರಾಜ್ಯ

ಬಿ.ಟಿ. ಲಲಿತಾ ನಾಯಕ್, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದರು.

ಬೆಂಗಳೂರು: ರಾಜ್ಯ ಸರ್ಕಾರ ಬುಧವಾರ ಸಂಜೆ  2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳ ಒಟ್ಟು 69 ಗಣ್ಯರನ್ನು ಗೌರವಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದರು.

ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 69 ಗಣ್ಯರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ನವೆಂಬರ್‌ 1ರಂದು ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಸಾಧಕರ ಪಟ್ಟಿ

ಚಲನಚಿತ್ರ-ಕಿರುತೆರೆ

  • ಹೇಮಾ ಚೌಧರಿ

  • ಎಂಎಸ್ ನರಸಿಂಹಮೂರ್ತಿ

ಜಾನಪದ ಕ್ಷೇತ್ರ

  • ಇಮಾಮಸಾಬ ಎಂ. ವಲ್ಲೆಪನವರ

  • ಅಶ್ವ ರಾಮಣ್ಣ

  • ಕುಮಾರಯ್ಯ

  • ವೀರಭದ್ರಯ್ಯ

  • ನರಸಿಂಹಲು (ಅಂಧ ಕಲಾವಿದ)

  • ಬಸವರಾಜ ಸಂಗಪ್ಪ ಹಾರಿವಾಳ

  • ಎಸ್.ಜಿ. ಲಕ್ಷ್ಮೀದೇವಮ್ಮ

  • ಪಿಚ್ಚಳ್ಳಿ ಶ್ರೀನಿವಾಸ

  • ಲೋಕಯ್ಯ ಶೇರ (ಭೂತಾರಾಧನೆ)

ಸಂಗೀತ ಕ್ಷೇತ್ರ

  • ಪಿ ರಾಜಗೋಪಾಲ

  • ಎಎನ್​ ಸದಾಶಿವಪ್ಪ

ನೃತ್ಯ: ವಿದುಷಿ ಲಲಿತಾ ರಾವ್,

ಆಡಳಿತ ಕ್ಷೇತ್ರ: ಎಸ್​ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)

ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ, ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ

ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.

ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್​ಆರ್​ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು,

ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್ ಪರಿಸರ: ಆಲ್ಮಿತ್ರಾ ಪಟೇಲ್

ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ

ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ

ಸಾಹಿತ್ಯ ಕ್ಷೇತ್ರ: ಮಾಜಿ ಸಚಿವೆ ಬಿ.ಟಿ. ಲಿಲಿತಾ ನಾಯಕ್, ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್

ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)

ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್ ಸಹಕಾರ: ವಿರೂಪಾಕ್ಷಪ್ಪ ನೇಕಾರ ಬಯಲಾಟ: ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ

ಯಕ್ಷಗಾನ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್‌., ಹನುಮಾನದಾಸ ವ. ಪವಾರ.

ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್‌. ಉಮಾದೇವಿ ನ್ಯಾಯಾಂಗ: ಬಾಲನ್ ಚಿತ್ರಕಲೆ: ಪ್ರಭು ಹರಸೂರು ಕರಕುಶಲ: ಚಂದ್ರಶೇಖರ ಸಿರಿವಂತೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ, PIL ವಜಾಗೊಳಿಸಿದ ಹೈಕೋರ್ಟ್!

ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಪ್ರಕರಣ: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಕಾಲ ಮುಗಿದಿದೆ- ಟ್ರಂಪ್

ಗ್ರೇಟರ್ ಬೆಂಗಳೂರು ಚುನಾವಣೆಗೆ ಭದ್ರ ಬುನಾದಿ ಹಾಕುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್!

Asia Cup 2025: ಪ್ರೀತಿ ಇಲ್ಲದ ಮೇಲೆ ಯಾವ ಹ್ಯಾಂಡ್ ಶೇಕ್.. ಡ್ರೆಸ್ಸಿಂಗ್ ರೂಮ್ ಕಡೆ ಭಾರತೀಯರು! ಪಾಕ್ ಆಟಗಾರರಿಗೆ ಹೆಜ್ಜೆ ಹೆಜ್ಜೆಗೂ ನಿರಾಸೆ! Video

ರಾಜಕೀಯದಿಂದ ನಿವೃತ್ತಿಯಾಗಲ್ಲ, ಸಂಸತ್ತಿಗೂ ವೀಲ್‌ಚೇರ್‌ನಲ್ಲಿ ಹೋಗುತ್ತೇನೆ: ಎಚ್.ಡಿ ದೇವೇಗೌಡ

SCROLL FOR NEXT