Bengaluruನಲ್ಲಿ ಡ್ರಾಪ್ ಕೇಳಿ ಚಾಕು ಇರಿದ ದುಷ್ಕರ್ಮಿ! 
ರಾಜ್ಯ

ಅಪರಿಚಿತರಿಗೆ ಲಿಫ್ಟ್ ಕೊಡುವ ಮುನ್ನ ಎಚ್ಚರ: Bengaluruನಲ್ಲಿ ಡ್ರಾಪ್ ಕೇಳಿ ಚಾಕು ಇರಿದ ದುಷ್ಕರ್ಮಿ!

ಇರಿತಕ್ಕೊಳಗಾದ 38 ವರ್ಷದ ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಹನುಮಂತೇಗೌಡನಪಾಳ್ಯ ನಿವಾಸಿ ರೋಹಿತ್ ಗೌಡ (24) ಎಂಬಾತ ಈಶ್ವರ್ ಗೌಡಗೆ ಇರಿದಿದ್ದಾನೆ ಎನ್ನಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ಲಿಫ್ಟ್ ಕೊಟ್ಟ ಬೈಕ್ ಸವಾರನಿಗೇ ಇರಿದಿರುವ ಘಟನೆ ವರದಿಯಾಗಿದೆ.

ಇರಿತಕ್ಕೊಳಗಾದ 38 ವರ್ಷದ ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಹನುಮಂತೇಗೌಡನಪಾಳ್ಯ ನಿವಾಸಿ ರೋಹಿತ್ ಗೌಡ (24) ಎಂಬಾತ ಈಶ್ವರ್ ಗೌಡಗೆ ಇರಿದಿದ್ದಾನೆ ಎನ್ನಲಾಗಿದೆ.

ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಈಶ್ವರಗೌಡ ಕ್ರಿಕೆಟ್ ಟೂರ್ನಮೆಂಟ್ ವೇಳೆ ರೋಹಿತ್ ಗೌಡ ನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿಗಳು ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ನಿರುದ್ಯೋಗಿ ಎನ್ನಲಾದ ರೋಹಿತ್ ಗೌಡನನ್ನು ಘಟನೆ ನಡೆದ ಕೆಲ ಹೊತ್ತಿನಲ್ಲೇ ಬಂಧಿಸಲಾಗಿದೆ.

ಏನಿದು ಘಟನೆ?

ಬುಧವಾರ ರಾತ್ರಿ ಈಶ್ವರಗೌಡ ತನ್ನ ಸ್ನೇಹಿತನೊಂದಿಗೆ ಢಾಬಾವೊಂದಕ್ಕೆ ಊಟಕ್ಕೆ ಹೋಗಿದ್ದ. ಅವರು ಢಾಬಾದಿಂದ ಹೊರಬಂದ ನಂತರ, ಗೇಟ್‌ನಲ್ಲಿದ್ದ ಆರೋಪಿಗಳು ಡ್ರಾಪ್ ನೀಡುವಂತೆ ವಿನಂತಿಸಿದರು. ಈಶ್ವರ್ ಕೂಡ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಅವನು ಡ್ರಾಪ್ ನೀಡಲು ಒಪ್ಪಿದ. ಸ್ವಲ್ಪ ಹೊತ್ತು ಬೈಕ್ ಹಿಂದೆ ಕುಳಿತು ಸವಾರಿ ಮಾಡಿದ ರೋಹಿತ್, ತಾನು ತಂದಿದ್ದ ಚಾಕುವಿನಿಂದ ಸ್ಮಶಾನದ ಬಳಿ ನಿರ್ಜನ ಪ್ರದೇಶದಲ್ಲಿ ಈಶ್ವರ್ ಗೆ ಇರಿದಿದ್ದಾನೆ.

ಈ ವೇಳೆ ಈಶ್ವರ್ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಚಾಕು ಇರಿತದಿಂದ ಈಶ್ವರ್ ಗೆ ಗಾಯವಾಗಿದೆ. ಆದರೂ ರೋಹಿತ್‌ನಿಂದ ಹರಸಾಹಸ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಬಿಡದ ರೋಹಿತ್ ಆತನನ್ನು ಬೆನ್ನತ್ತಿ ಇರಿದಿದ್ದಾನೆ.

ಈ ವೇಳೆ ಈಶ್ವರ್ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸಹಾಯಕ್ಕಾಗಿ ತನ್ನ ಸಹೋದರನನ್ನು ಕರೆದನು. ಆತನ ಸಹೋದರ ಆತನನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗಾಗಲೇ ಆರೋಪಿ ರೋಹಿತ್ ಬೈಕ್ ನಲ್ಲಿ ಪರಾರಿಯಾಗಿದ್ದ.

“ಈ ಘಟನೆ ಗುರುವಾರ ಮುಂಜಾನೆ 1.15 ರಿಂದ 1.20 ರ ನಡುವೆ ಸಂಭವಿಸಿದೆ. ಈಶ್ವರ್ ಅವರನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಿದ ನಂತರ, ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಐಸಿಯುನಲ್ಲಿದ್ದ ಈಶ್ವರ್ ಅವರನ್ನು ಶುಕ್ರವಾರ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೋಹಿತ್‌ನಿಂದ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!