ಯುವತಿಯೊಂದಿಗೆ ಕಂಡಕ್ಟರ್ ಅನುಚಿತ ವರ್ತನೆ 
ರಾಜ್ಯ

ಚಲಿಸುತ್ತಿದ್ದ ಬಸ್ ನಲ್ಲಿ ಯುವತಿಯೊಂದಿಗೆ BMTC ಕಂಡಕ್ಟರ್ ಅನುಚಿತ ವರ್ತನೆ; Video ವೈರಲ್

ಬಿಎಂಟಿಸಿ ಕಂಡಕ್ಟರ್​ವೊಬ್ಬರು (BMTC Conductor) ಯುವತಿಯ ಸೀಟ್​​ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಮತ್ತೊಂದು ಕಿರುಕುಳ ಪ್ರಕರಣ ವರದಿಯಾಗಿದ್ದು, ಚಲಿಸುತ್ತಿದ್ದ ಬಸ್ ನಲ್ಲಿ ಸ್ವತಃ ಬಸ್ ನಿರ್ವಾಹಕ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಹೌದು.. ಬಿಎಂಟಿಸಿ ಕಂಡಕ್ಟರ್​ವೊಬ್ಬರು (BMTC Conductor) ಯುವತಿಯ ಸೀಟ್​​ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಬಸ್ ಸಂಖ್ಯೆ KA41D2500ಯ ಬಸ್ ನಲ್ಲಿ ನಿರ್ವಾಹಕ ಉದ್ದೇಶಪೂರ್ವಕವಾಗಿಯೇ ಯುವತಿ ಕುಳಿತಿದ್ದ ಸೀಟಿನ ಹ್ಯಾಂಡಲ್ ಮೇಲೆ ಕುಳಿತಿದ್ದಾರೆ.

ಬಸ್ ಚಲಿಸುತ್ತಿದ್ದಂತೆಯೇ ನಿರ್ವಾಹಕ ಕೂಡ ಹಿಂದಕ್ಕೆ-ಮುಂದಕ್ಕೆ ಚಲಿಸುತ್ತಿದ್ದು ಇದರಿಂದ ಸೀಟಿನಲ್ಲಿ ಕುಳಿತಿದ್ದ ಯುವತಿ ಸಂಕಷ್ಟ ಎದುರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಕುರಿತು @karnatakaportf ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ಕಂಡಕ್ಟರ್ ಗೆಂದೇ ಬಸ್ ನ ಮುಂಭಾಗದಲ್ಲಿ ಸೀಟ್ ಮೀಸಲಾಗಿರುತ್ತದೆ. ಅದಾಗ್ಯೂ ಕಂಡಕ್ಟರ್ ಯುವತಿ ಕುಳಿತಿದ್ದ ಸೀಟ್ ಮೇಲೆ ಕುಳಿತಿದ್ದಾರೆ.

ಕಂಡಕ್ಟರ್ ದಣಿದು ಸೀಟ್ ಹ್ಯಾಂಡಲ್ ಮೇಲೆ ಕುಳಿತಿದ್ದರೂ ಅವರಿಗೆ ಯುವತಿಯ ಸೀಟ್ ಆಗಬೇಕೆಂದೇನೂ ಇಲ್ಲ.. ಬೇರೆ ಸೀಟ್ ನಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇದು ಅವರ ಅವರ ನಡವಳಿಕೆಯನ್ನು ತೋರಿಸುತ್ತದೆ. ಇಂತಹವರ ವಿರುದ್ಧ ಸರಿಯಾದ ಕ್ರಮವಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ