ಸಗೀರ್ ಅಹ್ಮದ್ 
ರಾಜ್ಯ

ಚಿಕ್ಕಮಗಳೂರು: ಕಾಂಗ್ರೆಸ್ ಮಾಜಿ ಸಚಿವ ಸಗೀರ್ ಅಹ್ಮದ್ ಪತ್ನಿಯ ಹೆಸರಲ್ಲಿದ್ದ 32 ಎಕರೆ ಭೂಮಿ ಸರ್ಕಾರದ ವಶಕ್ಕೆ!

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನ ಶೋಲಾ ಅರಣ್ಯದಲ್ಲಿ ಸಗೀರ್ ಅಹ್ಮದ್ ಪತ್ನಿ ಫಾತಿಮಾಭಿ ಹೆಸರನಲ್ಲಿದ್ದ 32.21 ಎಕರೆ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.

ಚಿಕ್ಕಮಗಳೂರು: ಅಕ್ರಮವಾಗಿ ಖರೀದಿಸಿದ್ದ 32 ಎಕರೆ ಜಮೀನನ್ನು ವಶಕ್ಕೆ ಪಡೆಯುವ ಮೂಲಕ ಕಾಂಗ್ರೆಸ್‌ನ ಮಾಜಿ ಸಚಿವ ಸಗೀರ್ ಅಹ್ಮದ್ ಕುಟುಂಬಕ್ಕೆ ಸರ್ಕಾರ ಬಿಗ್ ಶಾಕ್​ ನೀಡಿದೆ.

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನ ಶೋಲಾ ಅರಣ್ಯದಲ್ಲಿ ಸಗೀರ್ ಅಹ್ಮದ್ ಪತ್ನಿ ಫಾತಿಮಾಭಿ ಹೆಸರನಲ್ಲಿದ್ದ 32.21 ಎಕರೆ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಆಸ್ತಿಯ ಮೇಲಿದ್ದ ಸಗೀರ್ ಕುಟುಂಬದ ಹಕ್ಕನ್ನು ರದ್ದುಪಡಿಸಿ, ಸರ್ಕಾರಿ ಜಮೀನು ಎಂದು ಆದೇಶ ಹೊರಡಿಸಿದ್ದಾರೆ.

ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್ 5ರಲ್ಲಿ ಫಾತಿಮಾಭಿ ಅವರ ಹೆಸರಿನಲ್ಲಿದ್ದ ಬಂಡಿದಾರಿ, ಕಾಲುದಾರಿ ಮೇಲಿನ ಹಕ್ಕನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಈ ಜಮೀನು ಬೇರೆಯವರಿಗೆ ಮಂಜೂರಾಗಿತ್ತು. ಆದರೆ 1978ರಲ್ಲಿ ಸಗೀರ್ ತಮ್ಮ ಪತ್ನಿ ಫಾತಿಮಾಭಿ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಲಾದ್ದರು. ಆದರೆ ಈ ಮಂಜೂರಾತಿಯೇ ಅಕ್ರಮ ಎಂದು ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೆ ಭೂಮಿ‌ ವಶಪಡಿಸಿಕೊಂಡಿರುವುದಾಗಿ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ಬಳಿಯಿರುವ ಸಗೀರ್ ಅಹ್ಮದ್ ಮನೆಯ ಬಾಗಿಲಿಗೆ ಜಿಲ್ಲಾಡಳಿತ ನೋಟಿಸ್ ಅಂಟಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT