ಬಸನಗೌಡ ಪಾಟೀಲ್ ಯತ್ನಾಳ್  
ರಾಜ್ಯ

ಮುನಿರತ್ನಗೆ ಸಂಬಂಧಪಟ್ಟ ಆಡಿಯೊ ನಕಲಿಯೋ, ಅಸಲಿಯೋ ಎಂದು ತನಿಖೆಯಾಗಬೇಕು: ಬಸನಗೌಡ ಪಾಟೀಲ್ ಯತ್ನಾಳ್

ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿವೆ ಎಂದು ನಾನು ಕೇಳುತ್ತೇನೆ.

ವಿಜಯಪುರ: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆಡಿಯೊದಲ್ಲಿ ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನು ಇತ್ತೀಚೆಗೆ ಸೃಷ್ಟಿಸುವವರು ಹೆಚ್ಚಾಗಿದ್ದಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆಡಿಯೊ ಕುರಿತು ತನಿಖೆ ನಡೆಯಬೇಕು ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಕಾಂಗ್ರೆಸ್​ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಮುಸ್ಲಿಮರ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಇದೆ, ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿವೆ ಎಂದು ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ.

ರಾತ್ರಿ ಪೇಮೆಂಟ್ ಆಯ್ತು ಅಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ. ಇಂತಹ ಸಂಘಟನೆಗಳಿಂದ ದಲಿತ ಸಮುದಾಯ ಉದ್ಧಾರ ಆಗುವುದಿಲ್ಲ. ದಲಿತರು ಹೊಸ ನಾಯಕತ್ವದ ಚಿಂತನೆ ಮಾಡಬೇಕು. ಅಂಬೇಡ್ಕರ್​​ ಅವರ ನಿಜವಾದ ಅನುಯಾಯಿ ಆಗಿದ್ದರೆ ಕಾಂಗ್ರೆಸ್​ನಲ್ಲಿರಲ್ಲ. ಡಾ.ಅಂಬೇಡ್ಕರ್ ಬಗ್ಗೆ ದಲಿತ ಮುಖಂಡರು ಮೊದಲು ಓದಿಕೊಳ್ಳಲಿ. ಕಾಂಗ್ರೆಸ್​ಗೆ ಎಂದೂ ಸೇರಬೇಡಿ ಅಂತಾ ಅಂಬೇಡ್ಕರ್ ಕರೆ ಕೊಟ್ಟಿದ್ದರು. ಕಾಂಗ್ರೆಸ್​ನಲ್ಲಿರುವ ದಲಿತ ಮುಖಂಡರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರೆಲ್ಲ ಕಮರ್ಷಿಯಲ್ ಎಂದರು.

ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ಕೇಸ್ ದಾಖಲಿಸುವ ವಿಚಾರವಾಗಿ ಮಾತನಾಡಿದ್ದು, ಕೇಸ್ ಮಾಡಲಿ ಬಿಡಿ, ನಾನು ಯಾರಿಗೂ ಅಂಜಲ್ಲ. ನಮ್ಮ ಪಕ್ಷದ ಮಹಾನಾಯಕರಿಗೆ ಅಂಜಿಲ್ಲ, ಇವರ್ಯಾರು ಎಂದು ಗುಡುಗಿದ್ದಾರೆ. ಯಾವ ಮಹಾ ನಾಯಕರಿಗೂ ನಾನು ಅಂಜುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ