ಬಂಧನಕ್ಕೊಳಗಾಗಿರುವ ಶಾಸಕ ಮುನಿರತ್ನ online desk
ರಾಜ್ಯ

ಅತ್ಯಾಚಾರ ಪ್ರಕರಣ: BJP ಶಾಸಕ ಮುನಿರತ್ನ ಬೆಂಬಲಿಗರಿಂದ ಸಂತ್ರಸ್ತ ಮಹಿಳೆಗೆ ಬೆದರಿಕೆ, ಆಡಿಯೋ ವೈರಲ್..!

ಶಾಸಕ ಮುನಿರತ್ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು: ಘನ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚಲುವರಾಜು ಅವರಿಗೆ ಬೆದರಿಕೆ, ಜಾತಿ ನಿಂದನೆ ಮಾಡಿರುವ ಮತ್ತು ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಶಾಸಕರ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಪ್ರಕರಣದ ಸಾಕ್ಷಿಗಳಿಗೆ ಮುನಿರತ್ನ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಈ ಕುರಿತ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದರೆ ಮನೆಗೆ ಬೆಂಕಿ ಹಚ್ಚುತ್ತೆವೆ. ನಿಮ್ಮ ವಂಶವೇ ಇರದಂತೆ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕರ್ತೆ ಸುನಂದಮ್ಮ‌ ಎಂಬುವರಿಂದ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿ ಸುನಂದಮ್ಮ ಹಾಗೂ ಬೆಂಬಲಿಗರು, ಸಾಕ್ಷಿಯ ಮನೆಗೆ ಏಕಾಏಕಿ ನುಗ್ಗಿ ಸಂತ್ರಸ್ಥೆಯ ಮಗನಿಗೆ ಬೆದರಿಕೆ ಹಾಕಿದ್ದಾರೆ ಎಂದು ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ಥೆಯ ಮಗ ದೂರು ನೀಡಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಸಕ ಮುನಿರತ್ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೋವಿಡ್ ಸಮಯದಲ್ಲಿನ ಸಾಮಾಜಿಕ ಸೇವೆಯನ್ನು ಗುರುತಿಸಿ ಮುನಿರತ್ನ, ಮಹಿಳೆಗೆ ಕರೆ ಮಾಡಿದ್ದರು ಎಂದು ಹೇಳಲಾಗಿದೆ. ಅದರಂತೆ ಭೇಟಿಯಾದ ಸಂತ್ರಸ್ತೆ ಹಾಗೂ ಮುನಿರತ್ನ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್‌ ಮೂಲಕ ಮಾತನಾಡುತ್ತಿದ್ದರು. ದಿನ ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂತ್ರಸ್ತೆ ನಿರಾಕರಿಸಿದ್ದರಂತೆ. ಇದಾದ ಬಳಿಕ ಸಂತ್ರಸ್ತೆಯನ್ನು ಗೋದಾಮಿಗೆ ಕರೆಸಿಕೊಂಡು ನಿನ್ನ ನೋಡಿದರೆ ಮೈ ಜುಮ್‌ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾಗಿದ್ದರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕ, ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ, ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ.

ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಎಂದು ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನನ್ನು ಬಳಸಿಕೊಂಡರು ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ತೋರಿಸುತ್ತಾ, 2020 ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್‌ಗೂ ಬಳಕೆ ಮಾಡಿಕೊಂಡಿರುವುದಾಗಿ ಹಾಗೂ ಹೇಳಿದಂತೆ ಕೇಳಲಿಲ್ಲ ಎಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ. ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜೊತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮರ್ಯಾದೆ ಹಾಗು ಪ್ರಾಣಕ್ಕೆ ಹೆದರಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಐದು ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

ಇರಾನ್ ಮೇಲಿನ ದಾಳಿ ಐದು ದಿನ ತಾತ್ಕಾಲಿಕ ಸ್ಥಗಿತ: ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮಧ್ಯಸ್ಥಿಕೆ!

West Asia Crisis: ಮುಳುಗಿದ D-Street; 13.5 ಲಕ್ಷ ಕೋಟಿ ನಿರ್ನಾಮ!

Gold Rate: ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ; 40 ವರ್ಷಗಳಲ್ಲಿ ಇದೇ ಮೊದಲು!

ಇರಾನ್ ಯುದ್ಧ: ಅಮೆರಿಕ ಅಧ್ಯಕ್ಷ Donald Trump ಕದನ ವಿರಾಮ ಘೋಷಣೆ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಭಾರಿ ಇಳಿಕೆ..!

SCROLL FOR NEXT