ಚಿಕ್ಕಬಳ್ಳಾಪುರ: ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿ ಗೇಟ್ ಬಳಿ ನಡೆದಿದೆ.
ಮೃತರನ್ನು ಅವಲಗುರ್ಕಿ ಗ್ರಾಮದ 17 ವರ್ಷದ ನಿತೀಶ್, 17 ವರ್ಷದ ನಿತಿನ್ ಹಾಗೂ ವೈಭವ್ ಎಂದು ತಿಳಿದುಬಂದಿದೆ. ಟ್ಯೂಷನ್ ಮುಗಿಸಿಕೊಂಡು ಒಂದೇ ಬೈಕಿನಲ್ಲಿ ಮೂವರು ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಬಿಜಿಎಸ್ ಶಾಲೆಯಲ್ಲಿ ನಿತೀಶ್ ಹಾಗೂ ನಿತಿನ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ವೈಭವ್ ಗುಡ್ ಶೆರ್ಡ್ ಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದನು. ಅಪಘಾತ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.