ಬಿಬಿಎಂಪಿ 
ರಾಜ್ಯ

ಬೆಂಗಳೂರಿಗರಿಗೆ ಮತ್ತೊಂದು ಶಾಕ್? ಪಾರ್ಕಿಂಗ್ ಸ್ಥಳದ ತೆರಿಗೆ ಹೆಚ್ಚಳ; ಕರಡು ಅಧಿಸೂಚನೆ ಪ್ರಕಟ

ವಸತಿ ಮತ್ತು ವಸತಿಯೇತರ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳ ಆಸ್ತಿ ತೆರಿಗೆ ಪರಿಷ್ಕರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು ಏಳು ದಿನ ಅವಕಾಶ ನೀಡಲಾಗಿದೆ.

ಬೆಂಗಳೂರು: ಹಾಲು, ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ವಸತಿ ಮತ್ತು ವಸತಿಯೇತರ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳ ಆಸ್ತಿ ತೆರಿಗೆ ಪರಿಷ್ಕರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ ಮತ್ತು ಈ ಅಧಿಸೂಚನೆ ಪ್ರಕಟವಾದ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಅಧಿಸೂಚನೆಯ ಪ್ರಕಾರ, ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 2 ರೂ.) ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.

ಹಿರಿಯ ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಪಾಲಿಕೆಗೆ ಗರಿಷ್ಠ 50 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಆದರೆ ಎಲ್ಲಾ ಪಾರ್ಕಿಂಗ್ ಪ್ರದೇಶದ ಸ್ಲಾಟ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಪಾರ್ಕಿಂಗ್ ಪ್ರದೇಶಗಳ ತೆರಿಗೆ ದರಗಳು ವಲಯವಾರು ಲೆಕ್ಕಾಚಾರವನ್ನು ಆಧರಿಸಿದ್ದವು ಮತ್ತು ಇದು ಅಸಮಾನತೆಗೆ ಕಾರಣವಾಗಿ ಪಾರ್ಕಿಂಗ್ ಸ್ಥಳಗಳ ಮೇಲೆ ಸುಮಾರು ಶೇ. 50 ರಷ್ಟು ತೆರಿಗೆ ಪಾವತಿಸಬೇಕಾಗಿತ್ತು. ಈಗ ಏಕರೂಪ ಮತ್ತು ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ನಿಯಮದ ಪ್ರಕಾರ, ವಲಯಗಳ ಆಧಾರದ ಮೇಲೆ ವಾಹನ ಪಾರ್ಕಿಂಗ್ ಸ್ಥಳಕ್ಕೆ ತೆರಿಗೆ ವಿಧಿಸಲಾಗುತ್ತಿದ್ದು, ವಲಯ ಎ ಯಲ್ಲಿ ವಾರ್ಷಿಕವಾಗಿ 1,875 ರೂಪಾಯಿ ತೆರಿಗೆ ಇದ್ದರೆ, ವಲಯ ಎಫ್‌ನಲ್ಲಿ 750 ರೂಪಾಯಿ ಇತ್ತು. ಆದರೆ, ಮಾಲ್‌ಗಳಿಗೆ ಇದು ತುಂಬಾ ಹೆಚ್ಚಿತ್ತು. ಮಾಲ್‌ಗಳು ಪ್ರತಿ ವಾಹನ ನಿಲುಗಡೆಗೆ 8 ರೂಪಾಯಿ ತೆರಿಗೆ ಕಟ್ಟುತ್ತಿದ್ದವು. ಈಗ ಅದು 3 ರೂಪಾಯಿಗೆ ಇಳಿಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿಯ ಉನ್ನತ ಕಂದಾಯ ಅಧಿಕಾರಿಗಳ ಪ್ರಕಾರ, ಪಾರ್ಕಿಂಗ್ ಪ್ರದೇಶಗಳಿಗೆ ಏಕರೂಪ ಮತ್ತು ಪ್ರಮಾಣೀಕೃತ ತೆರಿಗೆ ವ್ಯವಸ್ಥೆಯನ್ನು ತರಬೇಕಾಗಿರುವುದರಿಂದ, ವಸತಿಯೇತರ ಪ್ರದೇಶಗಳಲ್ಲಿ ಪಾರ್ಕಿಂಗ್ ಸ್ಥಳಗಳಿಗೆ ಪ್ರತಿ ಚದರ ಅಡಿಗೆ 13 ರೂ.ಗಳ ಹಿಂದಿನ ದರವನ್ನು ಪರಿಷ್ಕರಿಸಬೇಕಾಗಿದೆ. ಈ ವ್ಯವಸ್ಥೆಯು ಏಕರೂಪತೆಯನ್ನು ತರುತ್ತದೆ ಮತ್ತು ದೀರ್ಘಾವಧಿಯಲ್ಲಿ, ಇದು ಪಾಲಿಕೆ ಹಾಗೂ ಆಸ್ತಿ ಮಾಲೀಕರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT