ಸಂಗ್ರಹ ಚಿತ್ರ 
ರಾಜ್ಯ

ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು: ಸಾಲು-ಸಾಲು ಅವಾಂತರ, ಸಮಸ್ಯೆಗಳ ಸರಮಾಲೆ..!

ಏಪ್ರಿಲ್ 3 ರಂದು ನಗರದಲ್ಲಿ 7.2 ಮಿಮೀ ಮಳೆಯಾಗಿದ್ದು, ಹಲವು ಸಮಸ್ಯೆಗಳು ಸೃಷ್ಟಿಯಾಗಿದೆ. ಈ ಪರಿಸ್ಥಿತಿ ಸರ್ಕಾರ ತಪ್ಪಾದ ಆದ್ಯತೆಗಳನ್ನು ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಬೆಂಗಳೂರು: ಬಿಸಿಲಿನ ತಾಪಮಾನದಿಂದ ನಿಗಿ ನಿಗಿ ಕೆಂಡದಂತಿದ್ದ ಬೆಂಗಳೂರಿನಲ್ಲಿ ವರುಣನ ಕೃಪೆಯಿಂದ ಭೂಮಿ ತಂಪಾಗಿದೆ. ಆದರೆ, ಒಂದೇ ಮಳೆಗೆ ನಗರದಲ್ಲಿ ಸಾಲು ಸಾಲು ಸಮಸ್ಯೆಗಳು ಎದುರಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡು ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವುದು ವರದಿಯಾಗಿದೆ.

ಏಪ್ರಿಲ್ 3 ರಂದು ನಗರದಲ್ಲಿ 7.2 ಮಿಮೀ ಮಳೆಯಾಗಿದ್ದು, ಇದರಿಂದ ಹಲವು ಸಮಸ್ಯೆಗಳು ಎದುರಾಗಿದೆ. ಇದು ಸರ್ಕಾರ ತಪ್ಪಾದ ಆದ್ಯತೆಗಳನ್ನು ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಬಿಬಿಎಂಪಿ ಬಜೆಟ್ ನಲ್ಲಿ ಸ್ಕೈಡೆಕ್, ಸುರಂಗ ರಸ್ತೆಗಳು ಮತ್ತು ಡಬಲ್ ಡೆಕ್ಕರ್ ಫ್ಲೈಓವರ್‌ಗಳಂತಹ ಬೃಹತ್ ಯೋಜನೆಗಳನ್ನು ಪಟ್ಟಿ ಮಾಡಲಾಗಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೆ, ಕೆಲವೇ ಲಕ್ಷ ರೂಪಾಯಿ ವೆಚ್ಚದಲ್ಲಿ ಸರಿಪಡಿಸಬಹುದಾದ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ. ಬಜೆಟ್ ನಲ್ಲಿ ಚರಂಡಿ, ರಾಜಕಾಲುವೆ, ಮಳೆನೀರು ಕೊಯ್ಲು ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ.

ಕಳಪೆ ನಿರ್ವಹಣೆಯಿಂದ ಮರ ಹಾಗೂ ಮರದ ಕೊಂಬೆಗಳು ಧರೆಗುರುಳುತ್ತಿವೆ. ಮರಗಳ ಸಮೀಕ್ಷೆ ನಡೆಸಿ, ಕೊಂಬೆಗಳನ್ನು ಕತ್ತರಿಸಬೇಕಿತ್ತು. ಅದರೆ ಮಾಡಿಲ್ಲ. ಪಾದಚಾರಿ ಮಾರ್ಗ ಹಾಗೂ ರಸ್ತೆಗಳಿಗೆ ಕಾಂಕ್ರೀಟ್ ಹಾಕುವಾಗ ಬೇರುಗಳಿಗೆ ಗಾಳಿಯಾಡಲು ಜಾಗ ಬಿಡುತ್ತಿಲ್ಲ. ಇದರಿಂದ ಮರಗಳು ಬೀಳುತ್ತಿವೆ. IISc, EMPRI ಮತ್ತು BPAC ಯಿಂದ ಅನೇಕ ಕ್ರಿಯಾ ಯೋಜನೆ ವರದಿಗಳನ್ನು ಸಿದ್ಧಪಡಿಸಲಾಗಿದೆ. ಇದು ಕೇವಲ ಕಾಗದಗಳ ಮೇಲಷ್ಟೇ ಇದೆ, ವಾಸ್ತವತೆಯಿಲ್ಲ. ಸಣ್ಣ ಪ್ರಮಾಣದ ಮಳೆಯು ಸಹ ನಿರ್ವಾಹಕರ ತಾತ್ಕಾಲಿಕ ಯೋಜನೆಯನ್ನು ಬಹಿರಂಗಪಡಿಸುತ್ತದೆ ”ಎಂದು ಪ್ರೊ.ಟಿ.ವಿ.ರಾಮಚಂದ್ರ ಅವರು ಹೇಳಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಅಧಿಕಾರಿಯೊಬ್ಬರು ಮಾತನಾಡಿ, ತಾಂತ್ರಿಕ ಪರಿಹಾರಗಳು ಮತ್ತು ಸಮಯಕ್ಕೆ ಸರಿಯಾದ ಎಚ್ಚರಿಕೆಗಳು ಬಂದ ನಂತರವೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಸಮಸ್ಯೆ ಎದುರಾದಾಗ ನಾಗರೀಕ ಸಂಸ್ಥೆಗಳು ತ್ವರಿತ ಪರಿಹಾರಗಳನ್ನು ಹುಡುಕುತ್ತವೆ. ಆದರೆ ನೀರಿನ ನೈಸರ್ಗಿಕ ಹರಿವು ಅಡಚಣೆಯಾದರೆ ಅವುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಹವಾಮಾನ ಕ್ರಿಯಾ ಯೋಜನೆ ಪರಿಹಾರಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಐಐಎಸ್‌ಸಿಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಪ್ರಾಧ್ಯಾಪಕ ಮತ್ತು ಸಂಚಾಲಕ ಆಶಿಶ್ ವರ್ಮಾ ಅವರು ಮಾತನಾಡಿ, ಚರಂಡಿಗಳ ಮೇಲೆ ರಸ್ತೆಗಳನ್ನು ನಿರ್ಮಿಸುವುದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಗಳ ಉಲ್ಲಂಘನೆಯಾಗಿದೆ. ಜಲಮೂಲಗಳ ಉದ್ದಕ್ಕೂ ಬಫರ್ ವಲಯಗಳನ್ನು ನಿರ್ವಹಿಸಬೇಕು. ರಸ್ತೆ ಗಾತ್ರ ಹೆಚ್ಚಾದಂತೆ ನೀರು ನಿರ್ವಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಬಿಟುಮೆನ್ ರಸ್ತೆಗಳಿಗೆ ಹೋಲಿಸಿದರೆ ಕಾಂಕ್ರೀಟ್ ರಸ್ತೆಗಳು ಕಳಪೆಯಾಗಿದೆ. ರಸ್ತೆಗಳು ಎರಡೂ ಬದಿಗಳಲ್ಲಿ ಇಳಿಜಾರುಗಳನ್ನು ಹೊಂದಿರಬೇಕು. ಸ್ವಚ್ಛವಾದ, ಮುಕ್ತವಾಗಿ ಹರಿಯುವ ಚರಂಡಿಗಳಿಗೆ ಸಂಪರ್ಕ ಕಲ್ಪಿಸಬೇಕು. ಆದರೆ, ಇಂತಹ ಚರಂಡಿಗಳೂ ಎಲ್ಲಿಯೂ ಕಂಡು ಬರುತ್ತಿಲ್ಲ. ನಗರದ ಸಮಸ್ಯೆ ಪರಿಹಾರಗಳು ಸರಳ ಮತ್ತು ಕಡಿಮೆ ವೆಚ್ಚದಲ್ಲಿರುತ್ತವೆ. ಆದರೆ, ಇದಕ್ಕೆ ಅನುಷ್ಠಾನದ ಇಚ್ಛಾಶಕ್ತಿ ಕೊರತೆಯಿದೆ. ಜಲಮೂಲಗಳ ನಿರ್ಮಾಣಕ್ಕೆ ಅನುಮತಿ ನೀಡಲು ಎಂಜಿನಿಯರ್‌ಗಳು ಜವಾಬ್ದಾರರಾಗಬೇಕು ಎಂದು ಹೇಳಿದ್ದಾರೆ.

ಡಬ್ಲ್ಯುಆರ್‌ಐ ಇಂಡಿಯಾದ ಶ್ರೀನಿವಾಸ್ ಅಲವಿಲ್ಲಿ ಅವರು ಮಾತನಾಡಿ, ಚರಂಡಿಗಳಲ್ಲಿನ ಹೂಳು ಅಥವಾ ಅತಿಕ್ರಮಣದಿಂದ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ರಾಜಕಾಲುವೆಗಳು ಮತ್ತು ಕೆರೆಗಳನ್ನು ಸುಧಾರಿಸಬೇಕಾಗಿದೆ. ಇತ್ತೀಚೆಗೆ, ಬಿಬಿಎಂಪಿಯು ನಮ್ಮ ರಸ್ತೆ ಕೈಪಿಡಿಯನ್ನು ಪ್ರಕಟಿಸಿದೆ, ಇದರಲ್ಲಿ ಗುಂಡಿ ಮುಕ್ತ ರಸ್ತೆಗಳನ್ನು ಹೊಂಡ ಮುಕ್ತ ಮತ್ತು ಚರಂಡಿ ನಿರ್ವಹಣೆ ಕುರಿತು ಮಾರ್ಗಸೂಚಿ ಇದೆ. ಈ ಮಾರ್ಗಸೂಚಿಯು ನಾಗರೀಕ ಸಂಸ್ಥೆಗಳ ನಡುವನ ಸಮನ್ವಯವನ್ನು ಸುಧಾರಿಸುವುದನ್ನು ಸೂಚಿಸಿದೆ. ಇದನ್ನು ಕಾರ್ಯಗತಗೊಳಿಸಿದರೆ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಹೇಳಿದ್ದಾರೆ.

ನಾಗರಿಕ ಕಾರ್ಯಕರ್ತ ವಿವೇಕ್ ಮೆನನ್ ಅವರು ಮಾತನಾಡಿ, ಸಣ್ಣ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕಾಗಿ ಚರಂಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾಂಕ್ರೀಟ್ ಗಳಿಂದ ಚರಂಡಿಗಳ ನಿರ್ಮಾಣ ಮಾಡಿರುವುದು ಸಮಸ್ಯೆ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಯಾವುದೇ ಕ್ರಮಗಳಿಲ್ಲ. ಹಲವಾರು ಸರ್ಕಾರಿ ಸಂಸ್ಥೆಗಳಿದ್ದರೂ ದೂರದೃಷ್ಟಿ ಹೊಂದಿಲ್ಲ. ನಗರದ ಸಮಸ್ಯೆ ನಿವಾರಣೆಗೆ ಪರಿಹಾರವಿದೆ. ಆದರೆ, ಇದಕ್ಕೆ ಇಚ್ಛಾಶಕ್ತಿ ಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT