ಜ್ಞಾನಭಾರತಿ ಕ್ಯಾಂಪಸ್  
ರಾಜ್ಯ

Skydeck ಯೋಜನೆಗೆ ಜ್ಞಾನಭಾರತಿ ಕ್ಯಾಂಪಸ್ ಆಯ್ಕೆ ಮಾಡಿದ BBMP: ಭೂಮಿ ಹಸ್ತಾಂತರಕ್ಕೆ ಆಸಕ್ತಿ ತೋರದ ಬೆಂಗಳೂರು ವಿವಿ!

ಈ ಸ್ಥಳದಲ್ಲಿ ಸ್ಕೈಡೆಕ್ ನಿರ್ಮಿಸಲು ಆಗಸ್ಟ್ 2024 ರಲ್ಲಿ ಪ್ರಸ್ತಾಪಿಸಲಾಗಿತ್ತು, ಆದರೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಳವಳ ಉಲ್ಲೇಖಿಸಿ ನಂತರ ಕೈಬಿಡಲಾಯಿತು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾದ ಸ್ಕೈಡೆಕ್ ಪ್ರಾಜೆಕ್ಟ್ ನಿರ್ಮಾಣಕ್ಕೆ ಹಲವು ಸ್ಥಳಗಳನ್ನು ಗುರುತಿಸಿ ನಂತರ ಬದಲಾಯಸಲಾಯಿತು.

ಈಗ ಬೆಂಗಳೂರು-ಮೈಸೂರು ರಸ್ತೆಯ ಪ್ರವಾಸೋದ್ಯಮವನ್ನು ಸುಧಾರಿಸುವ ಉದ್ದೇಶದಿಂದ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ.

ಈ ಸ್ಥಳವನ್ನು ಆಗಸ್ಟ್ 2024 ರಲ್ಲಿ ಪ್ರಸ್ತಾಪಿಸಲಾಗಿತ್ತು, ಆದರೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಕಳವಳ ಉಲ್ಲೇಖಿಸಿ ನಂತರ ಕೈಬಿಡಲಾಯಿತು. ಆದಾಗ್ಯೂ, ಈಗ ಬಿಬಿಎಂಪಿ ಅಂತಿಮಗೊಳಿಸಿ ಒಂದು ಹೆಜ್ಜೆ ಮುಂದೆ ಹೋಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಜ್ಞಾನಭಾರತಿ ಆವರಣದಲ್ಲಿ 15 ಎಕರೆ ಭೂಮಿಯನ್ನು ಪಡೆಯಲು ಶಿಕ್ಷಣ ಇಲಾಖೆಗೆ ಪತ್ರ ಬರೆದು ಸಭೆಗಳನ್ನು ನಡೆಸಿದ್ದಾರೆ, ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಶಿವಕುಮಾರ್ ಅವರ ಕನಸನ್ನು ನನಸಾಗಿಸಲು ಇಲಾಖೆಯು ಬೆಂಗಳೂರು ವಿಶ್ವವಿದ್ಯಾಲಯ (ಬಿಯು)ಕ್ಕೆ ಹಲವಾರು ಪ್ರಸ್ತಾವನೆ ಸಲ್ಲಿಸಿದೆ.

ಇತ್ತೀಚೆಗೆ ಅನುಮೋದಿಸಲಾದ ಬಿಬಿಎಂಪಿ ಬಜೆಟ್‌ನಲ್ಲಿ, ಸ್ಕೈಡೆಕ್ ಯೋಜನೆಗೆ 400 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು, ಅದರಲ್ಲಿ 50 ಕೋಟಿ ರೂ.ಗಳು ಆರಂಭಿಕ ಕಾಮಗಾರಿಗಳು ಮತ್ತು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಮೀಸಲಿರಿಸಲಾಗಿತ್ತು. ಆದರೆ ಭೂಮಿ ಹಸ್ತಾಂತರಿಸಲು ಬೆಂಗಳೂರು ವಿವಿ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಬಿಯು ಕ್ಯಾಂಪಸ್‌ನಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಸ್ಕೈಡೆಕ್ ನಿರ್ಮಿಸಲಾಗುವುದು. ಸುಮಾರು 10 ದಿನಗಳ ಹಿಂದೆ ಮತ್ತು ಕಳೆದ ಶನಿವಾರವೂ ಈ ಬಗ್ಗೆ ಪತ್ರ ಬರೆಯಲಾಗಿತ್ತು. ನಾವು ಉನ್ನತ ಶಿಕ್ಷಣ ಕಾರ್ಯದರ್ಶಿಗೂ ತಿಳಿಸಿದ್ದೇವೆ. ಕೆಲವು ಆಯ್ಕೆಗಳನ್ನು ಸೂಚಿಸಲಾಗಿದೆ, ಅವುಗಳಲ್ಲಿ ಬಿಲ್ಡ್ ಆಪರೇಟ್ ಅಂಡ್ ಟ್ರಾನ್ಸ್‌ಫರ್ (ಬಿಒಟಿ) ಮಾದರಿ, ಅಥವಾ ಪಾಲಿಕೆಗೆ ಭೂಮಿ ನೀಡುವುದಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಲಿಖಿತ ಸಂವಹನ ಬಂದಿಲ್ಲ ಎಂದು ಬಿಯು ಉಪಕುಲಪತಿ ಡಾ. ಜಯಕರ ಶೆಟ್ಟಿ ಎಂ ಹೇಳಿದರು, ಆದರೆ ಪತ್ರ ಬಂದಾಗ, ಅದನ್ನು ಸಿಂಡಿಕೇಟ್‌ನಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.

ಬಿಬಿಎಂಪಿಗೆ ಭೂಮಿಯನ್ನು ಹಸ್ತಾಂತರಿಸಲು ಬೆಂಗಳೂರು ವಿವಿ ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. "ವಿಶ್ವವಿದ್ಯಾನಿಲಯದ 242 ಎಕರೆ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. (ಸ್ಕೈಡೆಕ್‌ಗಾಗಿ) ಗುರುತಿಸಲಾದ ಪ್ರದೇಶವು ಮೂರು ವರ್ಷಗಳ ಹಿಂದೆ ಮೊಕದ್ದಮೆಯಲ್ಲಿತ್ತು, ಮತ್ತು ನಂತರ ಅದನ್ನು ಯೋಗ ಕೇಂದ್ರದ ನಿರ್ಮಾಣಕ್ಕಾಗಿ ಮೀಸಲಿಟ್ಟಿತ್ತು, ಇದಕ್ಕೂ ಸಹ ವಿರೋಧ ವ್ಯಕ್ತವಾಯಿತು.

ಈ ಭೂಮಿ ವೃಷಭಾವತಿ ಕಣಿವೆ ಮತ್ತು ರಾಜಕಾಲುವೆ ಬಫರ್ ವಲಯದ ಅಡಿಯಲ್ಲಿ ಬರುತ್ತದೆ, ಆದರೆ NGT ನಿರ್ದೇಶನಗಳ ಪ್ರಕಾರ, 500 ಮೀಟರ್ ಬಫರ್ ವಲಯವನ್ನು ನಿರ್ವಹಿಸಬೇಕು ಎಂದು ಹಿರಿಯ ಅಧ್ಯಾಪಕ ಸದಸ್ಯರು ತಿಳಿಸಿದ್ದಾರೆ.

ತಜ್ಞರು, ವಿದ್ಯಾರ್ಥಿಗಳು, ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಈ ಪ್ರದೇಶದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದು 400 ಎಕರೆಗಳಷ್ಟು ವಿಸ್ತಾರವಾದ ತೆಲಂಗಾಣದ ಕಾಂಚ ಗಚಿಬೌಲಿ ಅರಣ್ಯ ಭೂಮಿಯಂತೆ ಇರುತ್ತದೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದರೂ, ಅಲ್ಲಿ 50 ಎಕರೆ ಅರಣ್ಯ ಭೂಮಿ ನಾಶವಾಯಿತು.

ನಿವೃತ್ತ ಬಿಯು ಪ್ರೊಫೆಸರ್ ಟಿಜೆ ರೇಣುಕಾ ಪ್ರಸಾದ್ ಅವರು ಗುರುತಿಸಲಾದ ಭೂಮಿ ಬಯೋಪಾರ್ಕ್ ಎಂದು ಹೇಳಿದರು. ಇದನ್ನು ಮೊದಲು 2002-03ರಲ್ಲಿ ಪ್ರಸಿದ್ಧ ಪರಿಸರವಾದಿ ಮತ್ತು ಮಾಜಿ ಅರಣ್ಯ ಅಧಿಕಾರಿ ಎಎನ್ ಯಲ್ಲಪ್ಪ ರೆಡ್ಡಿ ರಚಿಸಿದರು. ಇಲ್ಲಿ ಕೆಂಪು ಸೀಡರ್, ರುದ್ರಕಾಶ, ತೇಗ ಮತ್ತು ಬಿದಿರಿನ ಸಮೂಹಗಳು ಸೇರಿದಂತೆ ವಿವಿಧ ರೀತಿಯ ಮರ ಪ್ರಭೇದಗಳು ಕಂಡುಬರುತ್ತವೆ.

ಸ್ಥಳದ ಬಳಿ ಆರ್ಕಿಡೇರಿಯಂ, ಔಷಧೀಯ ಸಸ್ಯ ಉದ್ಯಾನವನ ಮತ್ತು ಶ್ರೀಗಂಧದ ಮರದ ಉದ್ಯಾನವನವೂ ಇದೆ. ನವಿಲುಗಳು ಸೇರಿದಂತೆ 175 ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಕಲ್ಯಾಣಿಗಳು, ಬಾವಿಗಳು ಮತ್ತು ಮಳೆನೀರು ಕೊಯ್ಲು ಇರುವುದರಿಂದ, 200 ಅಡಿ ಆಳದಲ್ಲಿಯೂ ಅಂತರ್ಜಲ ಕಂಡುಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಪಕ್ಷಿ ತಜ್ಞ ಮತ್ತು ಪರಿಸರವಾದಿ ಎಂಬಿ ಕೃಷ್ಣ ಮಾತನಾಡಿ, ಬಿಯು ಕ್ಯಾಂಪಸ್ ಪಶ್ಚಿಮ ಬೆಂಗಳೂರಿನಲ್ಲಿ ಒಂದು ಪ್ರಮುಖವಾದ ಸ್ಥಳವಾಗಿದ್ದು, ಅದನ್ನು ರಕ್ಷಿಸಬೇಕು ಎಂದು ಹೇಳಿದರು. ಈಗಾಗಲೇ, ರಸ್ತೆ ಮತ್ತು ಮೂಲಸೌಕರ್ಯ ಕಾಮಗಾರಿಗಳಿಗಾಗಿ ದೊಡ್ಡ ಭಾಗಗಳು ಕಳೆದುಹೋಗಿವೆ ಮತ್ತು ಇದರಿಂದಾಗಿ ಮತ್ತೊಂದು ವಿನಾಶವಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT