ಡಾ ರಾಜ್ ಕುಮಾರ್ ಪುಣ್ಯತಿಥಿ  
ರಾಜ್ಯ

ಡಾ. ರಾಜ್ ಕುಮಾರ್ 19ನೇ ವರ್ಷದ ಪುಣ್ಯಸ್ಮರಣೆ: ಕುಟುಂಬಸ್ಥರಿಂದ ನಮನ

ಕೋಟ್ಯಂತರ ಅಭಿಮಾನಿಗಳಿಂದ ದೇವತಾ ಮನುಷ್ಯ ಎಂದು ಕರೆಸಿಕೊಂಡ ರಾಜ್​ಕುಮಾರ್​​ ಅಭಿಮಾನಿಗಳೆದೆಯಲ್ಲಿ ಸದಾ ಅಜರಾಮರ.

ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 19ನೇ ಪುಣ್ಯತಿಥಿ ಇಂದು ಏಪ್ರಿಲ್ 12ರಂದು ಆಗಿದ್ದು, ಕುಟುಂಬಸ್ಥರು, ಅಭಿಮಾನಿಗಳು ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸ್ಮಾರಕ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯಿಂದಲೇ ಕಂಠೀರವ ಸ್ಟುಡಿಯೊ ಬಳಿ ಸಾವಿರಾರು ಮಂದಿ ಹೋಗಿ ಡಾ ರಾಜ್ ಸಮಾಧಿಗೆ ಹೋಗಿ ನಮನ ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್ ಅವರ ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳು, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಜರಿದ್ದರು. ತಮ್ಮ ಸಿನಿಮಾಗಳು, ಗಾಯನ, ಅಭಿನಯ, ವ್ಯಕ್ತಿತ್ವದಿಂದ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಡಾ ರಾಜ್ ಕುಮಾರ್ ಹೆಸರಿನಲ್ಲಿ ಇಂದಿಗೂ ಅನೇಕ ಉತ್ತಮ ಕಾರ್ಯಗಳು ನಡೆಯುತ್ತಿವೆ.

ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ಕನ್ನಡ ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಕೋಟ್ಯಂತರ ಅಭಿಮಾನಿಗಳಿಂದ ದೇವತಾ ಮನುಷ್ಯ ಎಂದು ಕರೆಸಿಕೊಂಡ ರಾಜ್​ಕುಮಾರ್​​ ಅಭಿಮಾನಿಗಳೆದೆಯಲ್ಲಿ ಸದಾ ಅಜರಾಮರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT