ನ್ಯಾಮತಿಯಲ್ಲಿ 13 ಕೋಟಿ ರೂ. ದರೋಡೆ ನಡೆಸಿದ ಆರು ಮಂದಿ  
ರಾಜ್ಯ

ಸಿನಿಮಾ ಶೈಲಿಯಲ್ಲಿ ಹಣ ದರೋಡೆ: 8ನೇ ಕ್ಲಾಸಿಗೆ ಶಾಲೆ ಬಿಟ್ಟವ 13 ಕೋಟಿ ರೂಪಾಯಿ ಲೂಟಿ ಮಾಡಿ ಗ್ಯಾಂಗ್ ನೊಂದಿಗೆ ಪರಾರಿಯಾದ ಕಥೆ!

13 ಕೋಟಿ ರೂಪಾಯಿ ಮೌಲ್ಯದ 17.7 ಕಿಲೋಗ್ರಾಂಗಳಷ್ಟು ಗಿರವಿ ಇಟ್ಟ ಚಿನ್ನ ಒಳಗೊಂಡ ದರೋಡೆ ಪ್ರಕರಣ ಅಕ್ಟೋಬರ್ 28, 2024 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ನಡೆಯಿತು.

ಬೆಂಗಳೂರು: ಆತನಿಗೆ ಕೇವಲ 30 ವರ್ಷ ವಯಸ್ಸಾಗಿತ್ತು, 8 ನೇ ತರಗತಿಗೆ ಓದನ್ನು ನಿಲ್ಲಿಸಿದ್ದ. ಆದರೂ ಈ ವಿಜಯಕುಮಾರ, ಕರ್ನಾಟಕದಲ್ಲಿ ನಡೆದ ಅತಿದೊಡ್ಡ ಮತ್ತು ಅತ್ಯಂತ ಧೈರ್ಯಶಾಲಿ ಎಂದೇ ಹೇಳಬಹುದಾದ ಬ್ಯಾಂಕ್ ದರೋಡೆಯನ್ನು ಯೋಜಿಸಿದ್ದನು. ತನ್ನ ಐದು ಜನರ ತಂಡದೊಂದಿಗೆ ಅದನ್ನು ಎಷ್ಟು ಪೂರ್ವಯೋಜನೆ ಮಾಡಿಕೊಳ್ಳುತ್ತಿದ್ದನು ಎಂದರೆ ಅವರನ್ನು ಬಂಧಿಸಲು ಪೊಲೀಸರು ಐದು ತಿಂಗಳು ದೇಶಾದ್ಯಂತ ಬೆನ್ನಟ್ಟಬೇಕಾಯಿತು.

13 ಕೋಟಿ ರೂಪಾಯಿ ಮೌಲ್ಯದ 17.7 ಕಿಲೋಗ್ರಾಂಗಳಷ್ಟು ಗಿರವಿ ಇಟ್ಟ ಚಿನ್ನ ಒಳಗೊಂಡ ದರೋಡೆ ಪ್ರಕರಣ ಅಕ್ಟೋಬರ್ 28, 2024 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ನಡೆಯಿತು. ಇತ್ತೀಚೆಗೆ, ರಾಜ್ಯ ಪೊಲೀಸರು ಪ್ರಮುಖ ಆರೋಪಿ ವಿಜಯಕುಮಾರ್ ಸೇರಿದಂತೆ ಅಜಯ್‌ಕುಮಾರ್ (28), ಅಭಿಷೇಕ (23), ಚಂದ್ರು (23), ಮಂಜುನಾಥ್ (32) ಮತ್ತು ಪರಮಾನಂದ (30) ಅವರನ್ನು ಬಂಧಿಸಿ, ಕದ್ದ ಚಿನ್ನವನ್ನು ಸುಮಾರು 410 ಕಿ.ಮೀ ದೂರದಲ್ಲಿ ಮಧುರೈ ಜಿಲ್ಲೆಯ ಉಸಲಂಪಟ್ಟಿ ಪಟ್ಟಣದ ಬಾವಿಯಿಂದ ವಶಪಡಿಸಿಕೊಂಡರು.

ಇದು 1993 ರ ಹಿಟ್ ಚಿತ್ರ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ "ಜಂಟಲ್‌ಮ್ಯಾನ್" ನ "ಉಸಲಂಪಟ್ಟಿ ಪೆನ್ಕುಟ್ಟಿ" ಹಾಡಿನಲ್ಲಿ ಕಾಣಿಸಿಕೊಂಡ ಅದೇ "ಉಸಲಂಪಟ್ಟಿ"ಯನ್ನು ಹೋಲುತ್ತದೆ. ಆ ಚಿತ್ರದಲ್ಲಿ ದರೋಡೆ ಮಾಡಿದ ನಾಯಕನಿಗೆ ದೊಡ್ಡ ಉದ್ದೇಶವಿತ್ತು. ಬಡತನ ಮತ್ತು ವಂಚಿತತೆಯಿಂದ ಬೇಸತ್ತು ತನ್ನ ಮೆಗಾ ದರೋಡೆಯನ್ನು ಯೋಜಿಸಿದ್ದಾಗಿ ವಿಜಯ್ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದನು.

ಅತಿ ಬುದ್ಧಿವಂತ ಸ್ವೀಟ್ ಶಾಪ್ ಮಾಲೀಕ

ಆರೋಪಿಗಳಲ್ಲಿ ಮೂವರು ಸಂಬಂಧಿಕರು. ವಿಜಯ್ ಮತ್ತು ಅಜಯ್ ಸಹೋದರರು ಮತ್ತು ಪರಮಾನಂದ ಅವರ ಸೋದರ ಮಾವ. ಮೂಲತಃ ತಮಿಳುನಾಡಿನವರು, ನ್ಯಾಮತಿಯಲ್ಲಿ ಸಿಹಿತಿಂಡಿ ಅಂಗಡಿಯನ್ನು ಹೊಂದಿದ್ದಾರೆ. ಇತರ ಮೂವರು ಆರೋಪಿಗಳಾದ ಅಭಿಷೇಕ, ಚಂದ್ರು ಮತ್ತು ಮಂಜು ನ್ಯಾಮತಿಯವರು.

ವಿಜಯ್ ಹೆಚ್ಚು ಶಿಕ್ಷಣ ಹೊಂದಿಲ್ಲದಿದ್ದರೂ ಅತಿ ಬುದ್ಧಿವಂತನಾಗಿದ್ದಾನೆ. ನನ್ನ 28 ವರ್ಷಗಳ ವೃತ್ತಿಜೀವನದಲ್ಲಿ ಇಷ್ಟೊಂದು ಬುದ್ಧಿವಂತ ಅಪರಾಧಿಯನ್ನು ನಾನು ಮೊದಲ ಬಾರಿಗೆ ನೋಡಿದೆ. ವಿಜಯ್ ಚೆನ್ನಾಗಿ ಯೋಜಿತ ಮತ್ತು ಸಂಘಟಿತ ಬ್ಯಾಂಕ್ ದರೋಡೆಯನ್ನು ನಡೆಸಿದ್ದಾನೆ ಎಂದು ದಾವಣಗೆರೆಯ ಇನ್ಸ್‌ಪೆಕ್ಟರ್-ಜನರಲ್ ಆಫ್ ಪೊಲೀಸ್ (ಐಜಿಪಿ) ರವಿಕಾಂತೇ ಗೌಡ ಹೇಳುತ್ತಾರೆ.

ಕದ್ದ ಸೊತ್ತನ್ನು ಮಧುರೈನ ಉಸಲಂಪಟ್ಟಿಯಲ್ಲಿರುವ ಬಾವಿಯಲ್ಲಿ ಮೆಣಸಿನಪುಡಿಯಲ್ಲಿ ಮರೆಮಾಚಿದ್ದರು. ಅದು ಬೇಸಿಗೆಯಲ್ಲಿ ಒಣಗುವುದಿಲ್ಲ ಕೊನೆಯದಾಗಿ ಲೂಟಿಯನ್ನು ಬಹಿರಂಗಪಡಿಸುತ್ತದೆ ಎಂದು ಗೊತ್ತಿತ್ತು. ಚಿನ್ನವನ್ನು ಎಲ್ಲಿ ಮರೆಮಾಡಿದ್ದಾರೆಂದು ವಿಜಯ್‌ಗೆ ಮಾತ್ರ ತಿಳಿದಿತ್ತು. ಇತರ ಐದು ಆರೋಪಿಗಳು ಅವನನ್ನು ಕುರುಡಾಗಿ ನಂಬಿದರು. ಕದ್ದ ಚಿನ್ನದಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿದ ನಂತರ ಅವನು ಅವರಿಗೆ ತಲಾ 1 ಲಕ್ಷ ರೂಪಾಯಿಗಳನ್ನು ಪಾವತಿಸಿದನು, ಅದನ್ನು ಬಳಸಿಕೊಂಡು ಮಧುರೈನ ಉಸಲಂಪಟ್ಟಿಯಲ್ಲಿ ತನಗಾಗಿ ಒಂದು ಮನೆ ಮತ್ತು ನಿವೇಶನವನ್ನು ಸಹ ಖರೀದಿಸಿದನು ಎಂದು ಐಜಿಪಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT