ಸಂಗ್ರಹ ಚಿತ್ರ 
ರಾಜ್ಯ

ಜಾತಿ ಗಣತಿ ಕ್ಲೈಮ್ಯಾಕ್ಸ್‌: ಇಂದು ಮಹತ್ವದ ಸಚಿವ ಸಂಪುಟ ಸಭೆ; ಎಲ್ಲರ ಚಿತ್ತ ಸರ್ಕಾರದತ್ತ; ಸಂಪುಟ ಉಪಸಮಿತಿ/ತಜ್ಞರ ಸಮಿತಿ ರಚನೆ ಸಾಧ್ಯತೆ!

ಜಾತಿಗಣತಿ ವರದಿ ಕುರಿತು ಪ್ರಸ್ತುತದ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿದರೆ, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುರಕ್ಷಿತ ರೀತಿಯಲ್ಲಿ ವರ್ತಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಜನಗಣತಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (SES-2015) ಯಿಂದ ಉಂಟಾದ ಜಾತಿ ಗೊಂದಲವನ್ನು ಪರಿಹರಿಸುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಸರ್ಕಾರದ ನಿರ್ಣಯದ ಕುರಿತು ತೀವ್ರ ಕುತೂಹಲ ನಿರ್ಮಾಣವಾಗಿದೆ.

ಜಾತಿಗಣತಿ ವರದಿ ಕುರಿತು ಪ್ರಸ್ತುತದ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿದರೆ, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುರಕ್ಷಿತ ರೀತಿಯಲ್ಲಿ ವರ್ತಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದರಂತೆ ವರದಿಯನ್ನು ಅಧ್ಯಯನ ಮಾಡಲು ಸಚಿವ ಸಂಪುಟವು ಉಪ ಸಮಿತಿಯನ್ನು ಅಥವಾ ನಿವೃತ್ತ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಲ್ಲದೆ, ವರದಿ ಕುರಿತು ಚರ್ಚಿಯಲು ವಿಶೇಷ ಅಧಿವೇಶನವನ್ನೂ ಕರೆಯಬಹುದು ಎಂದು ಮೂಲಗಳು ತಿಳಿಸಿವೆ.

ಹಿಂದುಳಿದ ವರ್ಗಗಳ ಮೀಸಲಾತಿ ಪುನರ್ರಚಿಸಲು ಆಯೋಗದ ಶಿಫಾರಸುಗಳ ಬಗ್ಗೆಯೂ ಸಂಪುಟವು ಚರ್ಚಿಸುವ ಸಾಧ್ಯತೆಯಿದೆ, ಇಂದು ಸಂಜೆ 4ಕ್ಕೆ ವಿಶೇಷ ಸಚಿವ ಸಂಪುಟ ಸಭ ನಡೆಯಲಿದ್ದು, ಯಾವ ತೀರ್ಮಾನ ಹೊರಬೀಳಬಹುದು ಎಂಬ ಕುರಿತು ತೀವ್ರ ಕುತೂಹಲ ನಿರ್ಮಾಣವಾಗಿದೆ.

ಜಾತಿ ಗಣತಿ ವರದಿಯಮುಖ್ಯಾಂಶಗಳ ಸಂಕ್ಷಿಪ್ತ ವರದಿ ಕಳೆದ ವಾರವೇ ಸಚಿವರ ಕೈ ಸೇರಿದ್ದು, ವರದಿ ಅಧ್ಯಯನ ನಡೆಸಿ ಗುರುವಾರದ ಸಂಪುಟ ಸಭೆಯಲ್ಲಿ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ವರದಿಯ ಮುಖ್ಯಾಂಶಗಳು ಬಹಿರಂಗಗೊಂಡು ಸಮುದಾಯಗಳ ಮುಖಂಡರ ಅವಗಾಹನೆಗೂ ಲಭ್ಯವಾದವು.

ಇಷ್ಟಾಗುತ್ತಿದ್ದಂತೆಯೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ಈ ವರದಿ ಪರ ಪ್ರಬಲ ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ ಸಮುದಾಯದ ಮುಖಂಡರು ಹಾಗೂ ಶಾಸಕರು ತಮ್ಮ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮುದಾಯದ ಹಿತ ಕಾಪಾಡಲು ಸಚಿವ ಸಂಪುಟ ಸಭೆಯಲ್ಲಿ ಯಾವ ರೀತಿ ವಾದ ಮಂಡಿಸಬೇಕು ಎಂಬ ಮಾಹಿತಿಯನ್ನು ಈಗಾಗಲೇ ಸಚಿವರಿಗೆ ನೀಡಿದ್ದಾರೆ.

ಏನಾಗಬಹುದು?

  • ವರದಿ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡಬಹುದು

  • ರಾಜಕೀಯೇತರ ಅಧ್ಯಯನ ನಡೆಸಬೇಕೆಂದಾದರೆ ಹಿರಿಯ ಅಧಿಕಾರಿಗಳು ಅಥವಾ ವಿಷಯ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಬಹುದು

  • ಯಾವುದೇ ಸಮಿತಿ ರಚನೆಯಾದರೂ ವರದಿ ನೀಡಲು 3 ರಿಂದ 6 ತಿಂಗಳ ಕಾಲಾವಕಾಶವನ್ನು ನೀಡಬಹುದು

  • ಜನಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆಯಬೇಕೆಂಬ ಒತ್ತಾಯ ಹೆಚ್ಚಾದರೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಸಂಪುಟ ನಿರ್ಧರಿಸಬಹುದು.

  • ವರದಿಯನ್ನು ಅಪ್ಡೇಟ್ ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಬಹುದು

  • ವರದಿ ಬಗ್ಗೆ ಜಾತಿವಾರು ಇರುವ ಆಕ್ಷೇಪಣೆ ಆಲಿಸಲು ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷರಿಗೆ ಸೂಚಿಸಬಹುದು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dasara Holidays extended: ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ; ಜಾತಿ ಗಣತಿ ಅವಧಿ ವಿಸ್ತರಣೆ!

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್, Youtube ವಿಡಿಯೋ ಡಿಲೀಟ್!

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

ಡಿಕೆಶಿಯ 'ಸುರಂಗದ ಹುಚ್ಚಿ'ನಿಂದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ- ಆರ್. ಅಶೋಕ್

SCROLL FOR NEXT