ಸಿಎಂ ಸಿದ್ದರಾಮಯ್ಯ 
ರಾಜ್ಯ

ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿರೋಧಿಸಿಲ್ಲ, ಸಚಿವರು ಏರು ಧ್ವನಿಯಲ್ಲೂ ಮಾತಾಡಿಲ್ಲ: ಸಿಎಂ

ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: 'ಜಾತಿ ಗಣತಿ' ಎಂದು ಜನಪ್ರಿಯವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚಿಸಲು ಗುರುವಾರ ಸಂಜೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಯಾರೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

"ನಿನ್ನೆ, ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಯಿತು. ಚರ್ಚೆ ಅಪೂರ್ಣವಾಗಿದೆ ಮತ್ತು ಅದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಯಾರೂ ಅದನ್ನು ವಿರೋಧಿಸಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದರು ಎಂಬ ಮಾಧ್ಯಮ ವರದಿ ಸುಳ್ಳು" ಎಂದು ಹೇಳಿದರು.

ಇನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಸಂಪುಟ ಸಭೆಯಲ್ಲಿ ಯಾವುದೇ ಆಕ್ರಮಣಕಾರಿ ವಾದಗಳನ್ನು ತಳ್ಳಿಹಾಕಿದ್ದಾರೆ.

"ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ ಅಷ್ಟೇ. ಏರು ಧ್ವನಿ ಅಥವಾ ವಾಗ್ವಾದ, ಅಂತಹದ್ದೇನೂ ನಡೆದಿಲ್ಲ. ಸಲಹೆಗಳನ್ನು ನೀಡಲಾಯಿತು. ಅದನ್ನು ಹೊರತುಪಡಿಸಿ ಯಾವುದೇ ನಿರ್ಧರ ಕೈಗೊಂಡಿಲ್ಲ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಫೈರಿಂಗ್, ಘರ್ಷಣೆ: 'ಸಾವನ್ನಪ್ಪಿದ ವ್ಯಕ್ತಿಗೆ ತಗುಲಿದ ಗುಂಡು ಪೊಲೀಸರ ಬಂದೂಕಿನದ್ದಲ್ಲ..' ಎಸ್‌ಪಿ ವರ್ಗಾವಣೆಗೆ ಕಾರಣ ಕೊಟ್ಟ G Parameshwara

Ranjitha Murder: ಆರೋಪಿ ರಫೀಕ್ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ! ಮುತಾಲಿಕ್ ಆಕ್ರೋಶ, ಯಲ್ಲಾಪುರ ಬಂದ್ ಕರೆ!

ತಲೆ ಮೇಲೆ ಹೈ ಟೆನ್ಷನ್ ವೈರ್: ಕೂದಲೆಳೆ ಅಂತರದಲ್ಲಿ ಆಂಧ್ರ ಡಿಸಿಎಂ ಪಾರು, ಪುನರ್ಜನ್ಮ ಎಂದ Pawan Kalyan, Video Viral

ಬಳ್ಳಾರಿ ಫೈರಿಂಗ್: ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ

ಆಗ Navy Seal.. ಈಗ ಡೆಲ್ಟಾ ಫೋರ್ಸ್: Venezuela ಅಧ್ಯಕ್ಷರ ಹೆಡೆಮುರಿ ಕಟ್ಟಿದ ಅಮೆರಿಕದ ಸೀಕ್ರೆಟ್ ಸೇನೆ! Video

SCROLL FOR NEXT