ಕನ್ನಡಿಗರ ಕ್ಷಮೆ ಕೋರಿದ ಪರಭಾಷಿಕ  
ರಾಜ್ಯ

Hindi vs Kannada: 'ಬೆಂಗಳೂರಲ್ಲಿ ಇರ್ಬೇಕು ಅಂದ್ರೆ ಹಿಂದಿ ಮಾತಾಡು' ಎಂದಿದ್ದ ಹಿಂದಿವಾಲಾ ಕನ್ನಡದಲ್ಲೇ ಕ್ಷಮೆಯಾಚನೆ! Video

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಓರ್ವ ಆಟೋ ಚಾಲಕನಿಗೆ ಧಮ್ಕಿ ಹಾಕುತ್ತಿದ್ದರೆ ಅತ್ತ ಆಟೋ ಚಾಲಕನೂ ತಿರುಗೇಟು ನೀಡುತ್ತಿದ್ದಾನೆ.

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಹಿಂದಿ ಭಾಷಿಕ ಮತ್ತು ಕನ್ನಡಿಗ ಆಟೋ ಚಾಲಕನ ವಾಕ್ಸಮರಕ್ಕೆ ಸಂಬಂಧಿಸಿದಂತೆ ಕೊನೆಗೂ ಹಿಂದಿಭಾಷಿಕ ಕನ್ನಡದಲ್ಲೇ ಕ್ಷಮೆ ಯಾಚಿಸಿದ್ದಾನೆ.

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದ ಹಿಂದಿ ಭಾಷಿಕ ಇದೀಗ ಕನ್ನಡಿಗರ ಕ್ಷಮೆ ಕೋರಿದ್ದಾನೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿಂದಿ ಭಾಷಿಕ ಕನ್ನಡದಲ್ಲೇ ಮಾತನಾಡಿ ಕ್ಷಮೆಯಾಚಿಸಿದ್ದು, ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾನೆ.

'ಮೊದಲಿಗೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಕನ್ನಡ ಜನರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಈ ಸುಂದರ ನಗರದ ಭಾಗವಾಗಿದ್ದೇನೆ. ಈ ನಗರದ ಜೊತೆ ನನ್ನ ಸಾಕಷ್ಟು ಭಾವನಾತ್ಮಕ ಕ್ಷಣಗಳಿವೆ. ಬೆಂಗಳೂರು ನನಗೆ ಜೀವನ ಕೊಟ್ಟಿದೆ.

ಹೀಗಾಗಿ ಈ ನಗರದ ಬಗ್ಗೆ ಅತೀವ ಗೌರವವಿದೆ. ನಾನು ಇಲ್ಲಿದ್ದುಕೊಂಡೇ ಹೊರಗಿನ ದೇಶದ ಕಂಪನಿಗೆ ಕೆಲಸ ಮಾಡುತ್ತಿದ್ದೇನೆ, ಅಲ್ಲಿಂದಲೇ ನನಗೆ ಸಂಬಳ ಬರುತ್ತದೆ. ನನಗೆ ಈ ಬೆಂಗಳೂರು ತುಂಬಾ ಇಷ್ಟ. ಕನ್ನಡಿಗರಿಗೆ ನಾನಾಡಿರುವ ಮಾತುಗಳಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಈಗಾಗಲೇ ನಾನು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕ್ಷಮೆ ಕೋರಲು ನಿರ್ಧರಿಸಿದ್ದೇನೆ.

ಅಂದು ನಡೆದ ಒಂದೇ ಒಂದು ಸಣ್ಣ ಗಲಾಟೆ ವೇಳೆ ಆಕ್ರೋಶದಿಂದ ಆಟೋ ಚಾಲಕನೊಂದಿಗೆ ನಾನು ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಕ್ಷಮಿಸಿ' ಎಂದು ಹೇಳಿದ್ದಾನೆ.

ಆಟೋ ಚಾಲಕನ ಜೊತೆ ಜಟಾಪಟಿ

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಓರ್ವ ಆಟೋ ಚಾಲಕನಿಗೆ ಧಮ್ಕಿ ಹಾಕುತ್ತಿದ್ದರೆ ಅತ್ತ ಆಟೋ ಚಾಲಕನೂ ತಿರುಗೇಟು ನೀಡುತ್ತಿದ್ದಾನೆ. ಇದನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಮತ್ತೊಬ್ಬ ಮಹಿಳೆ ಹಿಂದಿ ಭಾಷಿಕ ಯುವಕನನ್ನು ಹಿಡಿದೆಳೆದು ಕರೆದೊಯ್ದಿದ್ದಾಳೆ.

ಮೂಲಗಳ ಪ್ರಕಾರ ಆಟೋ ಪ್ರಯಾಣದ ವೇಳೆ ಹಿಂದಿ ಭಾಷಿಕ ಮತ್ತು ಚಾಲಕನ ನಡುವೆ ಕಿರಿಕ್ ಆಗಿದ್ದು, ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಕಿ ಹಾಕಿದ್ದಕ್ಕೆ ಆಟೋ ಚಾಲಕ ‘ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ..’ ಎಂದು ತಿರುಗೇಟು ಕೊಡುತ್ತಾನೆ. ಇದನ್ನು ರೆಕಾರ್ಡ್‌ ಮಾಡಿಕೊಳ್ಳಲು ಕನ್ನಡಿಗ ಮುಂದಾದಾಗ, ರೆಕಾರ್ಡ್‌ ಬೇಕಾ ಮಾಡ್ಕೋ, ಕರ್ನಾಟಕ ನಮ್ದು, ಬೆಂಗಳೂರು ನಮ್ದು, ಇಲ್ಲಿ ಹಿಂದಿ ಮಾತಾಡು ಎಂದು ಅವಾಜ್‌ ಹಾಕಿದ್ದ.

ಆಟೋ ಚಾಲಕ ತಿರುಗೇಟು

ಇದಕ್ಕೆ ಸರಿಯಾಗಿ ಬೆವರಳಿಸಿರುವ ಕನ್ನಡಿಗ, ಲೋ ನೀನು ಎಲ್ಲಿಂದಲೋ ಬೆಂಗಳೂರಿಗೆ ಬಂದಿರೋದು, ನೀನು ಮೊದಲು ಕನ್ನಡದಲ್ಲಿ ಮಾತಾಡು ಎಂದು ಹೇಳಿದ್ದಾನೆ. ಆದರೂ ಸುಮ್ಮನಾಗದ ಹಿಂದಿವಾಲ ನೀನು ಹಿಂದಿ ಮಾತಾಡು, ಹಿಂದಿಯಲ್ಲೇ ಮಾತಾಡು ಎನ್ನುತ್ತಾ ಕೂಗಾಡಿದ್ದಾನೆ. ಕೊನೆಗೆ ಅವನೊಂದಿಗೆ ಇದ್ದ ಯುವತಿ ಆತನನ್ನು ಪಕ್ಕಕ್ಕೆ ಎಳೆದೊಯ್ದಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT