ಸಿದ್ದರಾಮಯ್ಯ 
ರಾಜ್ಯ

ಉಗ್ರರನ್ನು ದೇಶದಲ್ಲಿ ಸಂಪೂರ್ಣ ಮಟ್ಟ ಹಾಕಬೇಕು, ಕೇಂದ್ರದ ಜೊತೆ ನಾವಿದ್ದೇವೆ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಪರವಾಗಿ ಭರತ್ ಅಂತಿಮ ಸಂಸ್ಕಾರದಲ್ಲಿ ರಾಮಲಿಂಗಾರೆಡ್ಡಿ ಭಾಗಿಯಾಗುತ್ತಾರೆ. ಮಂಜುನಾಥ್​ ಅಂತ್ಯಕ್ರಿಯೆಯಲ್ಲಿ ಮಧು ಬಂಗಾರಪ್ಪ ಭಾಗಿಯಾಗುತ್ತಾರೆ ಎಂದು ಹೇಳಿದರು.

ಬೆಂಗಳೂರು: ನಮ್ಮ ದೇಶದಲ್ಲಿ ಉಗ್ರ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು. ಕೇಂದ್ರ ಸರ್ಕಾರ ಎಲ್ಲಾ ಉಗ್ರರನ್ನು ನಾಶಪಡಿಸುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಜತೆ ನಾವೆಲ್ಲ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೊನ್ನೆ ಮಂಗಳವಾರ ಮಧ್ಯಾಹ್ನ ಪಹಲ್ಗಾಂನಲ್ಲಿ ಉಗ್ರ ದಾಳಿಯಲ್ಲಿ ಮೃತಪಟ್ಟ ಭರತ್​ ಭೂಷಣ್ ಅವರ ಪಾರ್ಥಿವ ಶರೀರದ​ ಅಂತಿಮ ದರ್ಶನ ಪಡೆದ ಬಳಿಕ ಬೆಂಗಳೂರಿನ ಮತ್ತಿಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಮಾನೀಯವಾದ ಕೃತ್ಯ ಇದು, ಮನುಷ್ಯರು ಮಾಡುವ ಕೆಲಸವಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಭರತ್​ ಭೂಷಣ್ ಅವರನ್ನು ಹಾಡಹಗಲೇ ಹೆಂಡತಿ, ಮಗುವಿನ ಕಣ್ಣೇದುರೇ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಸೈನಿಕರು ಉಗ್ರರಿಂದ ಹುತಾತ್ಮರಾದರು. ಈಗ ಮುಗ್ಧ ನಾಗರಿಕರು ಬಲಿಯಾಗಿದ್ದಾರೆ, ಇನ್ನೆಂದೂ ಇಂತಹ ಘಟನೆ ಜಮ್ಮು-ಕಾಶ್ಮೀರದಲ್ಲಾಗಲಿ, ದೇಶದ ಬೇರೆ ಯಾವ ಕಡೆಯಲ್ಲಾಗಲಿ ನಡೆಯಬಾರದು. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಉಗ್ರರು ಇರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಕೇಂದ್ರ ಗುಪ್ತಚರ ಇಲಾಖೆ ಸೂಕ್ತವಾಗಿ ಕೆಲಸ ಮಾಡಬೇಕು ಎಂದರು.

ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಭರತ್​ ಭೂಷಣ್, ಮಂಜುನಾಥ್​ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಿದ ಸಿದ್ದರಾಮಯ್ಯ, ಭರತ್​ ಭೂಷಣ್​, ಮಂಜುನಾಥ್ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನಡೆಸಲಾಗುವುದು, ಅದಕ್ಕೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರದ ಪರವಾಗಿ ಭರತ್ ಅಂತಿಮ ಸಂಸ್ಕಾರದಲ್ಲಿ ರಾಮಲಿಂಗಾರೆಡ್ಡಿ ಭಾಗಿಯಾಗುತ್ತಾರೆ. ಮಂಜುನಾಥ್​ ಅಂತ್ಯಕ್ರಿಯೆಯಲ್ಲಿ ಮಧು ಬಂಗಾರಪ್ಪ ಭಾಗಿಯಾಗುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಅಕ್ರಮದ ಹಾದಿ ಹಿಡಿಯದಿರಲಿ: ಗೃಹ ಸಚಿವ ಪರಮೇಶ್ವರರ "ಧ್ವಂಸ" ಹೇಳಿಕೆಗೆ ಪಿ. ಚಿದಂಬರಂ ಕಿಡಿ!

ಭಾರತದಲ್ಲಿ 11,718 ಕೋಟಿ ರೂ ವೆಚ್ಚದಲ್ಲಿ 'ಡಿಜಿಟಲ್ ಜನಗಣತಿ': ಕೇಂದ್ರ ಸಂಪುಟ ಅನುಮೋದನೆ!

ಡಿ.ಕೆ ಶಿವಕುಮಾರ್​​ರನ್ನು ಬಿಜೆಪಿಗೆ ಕರೆತರುವ ಪ್ರಯತ್ನವಾಗಿ ಪಕ್ಷದಿಂದ ನನ್ನ ಉಚ್ಚಾಟನೆ: ಯತ್ನಾಳ್ ಆರೋಪ

News headlines 12-12-2025 | ಗೃಹ ಲಕ್ಷ್ಮಿ ಹಣ: ಸದನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುಳ್ಳು ಮಾಹಿತಿ?: ಡ್ರಗ್ಸ್ ಮಾರುವವರು ವಾಸಿಸುವ ಬಾಡಿಗೆ ಕಟ್ಟಡ ಧ್ವಂಸ- ಗೃಹ ಸಚಿವ; ಮಾಜಿ ಸಚಿವ ಹೆಚ್.ಎಂ ರೇವಣ್ಣ ಪುತ್ರನ ಕಾರು ಅಪಘಾತ; ಬೈಕ್ ಸವಾರ ಸಾವು!

ಶೆಹಬಾಜ್ ಷರೀಫ್ ಗೆ 40 ನಿಮಿಷ ಕಾಯಿಸಿದ ಪುಟಿನ್: video ವೈರಲ್, 'ಬೆಗ್ಗರ್' ಗಳಿಗೆ ಟ್ರಂಪ್ ಕೂಡಾ ಹೀಗೆ ಮಾಡ್ತಾರೆ ಎಂದ ನೆಟ್ಟಿಗರು!

SCROLL FOR NEXT