ರಸ್ತೆ ಮೇಲೆ ಪಾಕ್ ಧ್ವಜ ಅಂಟಿಸಿದ ಭಜರಂಗದಳ ಕಾರ್ಯಕರ್ತರು, ಧ್ವಜ ತೆಗೆದ ಮಹಿಳೆಯರು 
ರಾಜ್ಯ

Pahalgam Terror Attack: ರಸ್ತೆಗೆ ಪಾಕ್ ಧ್ವಜ ಅಂಟಿಸಿ ಬಜರಂಗದಳ ಕಾರ್ಯಕರ್ತರ ಆಕ್ರೋಶ; Flag ತೆಗೆದು 'ಪಾಕ್ ಪ್ರೇಮ' ಮೆರೆದ ಮಹಿಳೆಯರು! Video

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ ಅಮಾಯಕರ‌ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ವಿವಿಧೆಡೆ ಕಡೆ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಅಂಟಿಸುವ ಮುಖಾಂತರ ಬಜರಂಗ ದಳದ ಕಾರ್ಯಕರ್ತರೂ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ: 26 ಮಂದಿ ಹಿಂದೂ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿ ಕೃತ್ಯವನ್ನು ವಿರೋಧಿಸಿ ಕಲಬುರಗಿಯಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕಿಸ್ತಾನದ ಧ್ವಜವನ್ನು ತೆಗೆದು ರಕ್ಷಿಸುವ ಮೂಲಕ ಕೆಲ ಮಹಿಳೆಯರು ಪಾಕ್ ಪ್ರೇಮ ಮೆರೆದಿದ್ದಾರೆ.

ಹೌದು.. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ ಅಮಾಯಕರ‌ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ವಿವಿಧೆಡೆ ಕಡೆ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಅಂಟಿಸುವ ಮುಖಾಂತರ ಬಜರಂಗ ದಳದ ಕಾರ್ಯಕರ್ತರೂ ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ.

ಪೊಲೀಸರ ದೌಡು

ಇನ್ನು ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುಪ್ತಚರ ಇಲಾಖೆ ಸಿಬ್ಬಂದಿ, ಮತ್ತು ಬ್ರಹ್ಮಪುರ ಠಾಣೆಯ ಪೊಲೀಸರು ಅಂಟಿಸಿದ ಧ್ವಜವನ್ನು ತೆರವುಗೊಳಿಸಿದ್ದಾರೆ.

ಪಹಲ್ಗಾಮ್ ಪೈಶಾಚಿಕ ಕೃತ್ಯ ಖಂಡಿಸಿ, ನಗರದ ಜಗತ್ ವೃತ್ತ ಸೇರಿದಂತೆ ಇತರ ಪ್ರಮುಖ ರಸ್ತೆಗಳ ಮೇಲೆ ಪಾಕಿಸ್ತಾನ್ ಧ್ವಜದ ಸ್ಟಿಕರ್‍ಗಳನ್ನು ಅಂಟಿಸಿದ 6 ಜನ ಭಜರಂಗ ದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಅವರು ಮಾತನಾಡಿ, ಪ್ರತಿಭಟನೆ ಮಾಡುವದು ಪ್ರತಿಯೊಬ್ಬ ನಾಗರಿಕರ ಹಕ್ಕು. ಆದರೆ ಪಾಕಿಸ್ತಾನದ ಧ್ವಜ ನೆಲಕ್ಕೆ ಅಂಟಿಸುವ ಕುರಿತು ಭಜರಂಗದಳ ಸಂಘಟನೆಯವರು ಅನುಮತಿ ಪಡೆದಿರಲಿಲ್ಲ.

ಅಲ್ಲದೇ ಇದರಿಂದ ಸಾರ್ವಜನಿಕ ಸಂಚಾರಿ ವ್ಯವಸ್ಥೆಗೆ ತೊಂದರೆ ಯ ಸಾಧ್ಯತೆ ಹಾಗೂ ಮುಂಜಾಗ್ರತೆ ಕ್ರಮವಾಗಿ 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಉಗ್ರರ ದಾಳಿ‌ ಖಂಡನೀಯ. ಅದರ ವಿರುದ್ಧದ ಪ್ರತಿಭಟನೆಯನ್ನು ಕಾನೂನಿನ‌ ಚೌಕಟ್ಟಿನಲ್ಲಿ ನಡೆಸಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.

Flag ತೆಗೆದು 'ಪಾಕ್ ಪ್ರೇಮ' ಮೆರೆದ ಮಹಿಳೆಯರು!

ಇದೇ ವೇಳೆ ಭಜರಂಗದಳ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕ್ ಧ್ವಜಗಳನ್ನು ಇಬ್ಬರು ಬುರ್ಖಾಧಾರಿ ಮಹಿಳೆಯರು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳೆಯರ ಧ್ವಜ ತೆಗೆಯುವ ಮೂಲಕ ಪಾಕ್ ಪ್ರೇಮ ಮೆರೆದಿದ್ದಾರೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT