ಶುಂಠಿ ಬೆಳೆ 
ರಾಜ್ಯ

ಲಾಭವಿಲ್ಲದೆ ಕೈ ಸುಟ್ಟುಕೊಂಡ ರೈತರು: ಶುಂಠಿ ಕೃಷಿಗಾಗಿ ಕೇರಳ ಬೆಳೆಗಾರರಿಗೆ ಭೂಮಿ ಗುತ್ತಿಗೆ ನೀಡಲು ಧಾರವಾಡ ರೈತರು ಮುಂದು!

ಕೇರಳದ ವ್ಯಕ್ತಿಯೊಬ್ಬರು ಎಕರೆಗೆ 1.15 ಲಕ್ಷ ರೂಪಾಯಿ ನೀಡುವುದಾಗಿ ಅವರನ್ನು ಸಂಪರ್ಕಿಸಿದ್ದರು. ನಷ್ಟದ ಕಾರಣ ಈ ವರ್ಷ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ತಮ್ಮ ಜಮೀನನ್ನು ಗುತ್ತಿಗೆಗೆ ನೀಡಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ/ ಹಾವೇರಿ: ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿಯೂ ಶುಂಠಿಯನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾವಿರಾರು ಎಕರೆಯಲ್ಲಿ ಶುಂಠಿ ಕೃಷಿಯಿಂದ ರೈತರು ಹೆಚ್ಚಿನ ಲಾಭ ಗಳಿಸುತ್ತಿುವುದರಿಂದ, ಶುಂಠಿ ಕೃಷಿ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ರೈತರನ್ನು ಸೆಳೆಯುತ್ತಿದೆ.

ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟ ಮತ್ತು ಕೃಷಿ ವೆಚ್ಚ ಏರಿಕೆಯಿಂದಾಗಿ ಸಮಸ್ಯೆ ಎದುರಿಸುತ್ತಿರುವ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಕೇರಳದ ಶುಂಠಿ ಬೆಳೆಗಾರರಿಗೆ ತಮ್ಮ ಭೂಮಿಯನ್ನು ಗುತ್ತಿಗೆಗೆ ನೀಡಲು ನಿರ್ಧರಿಸಿದ್ದಾರೆ. ಪ್ರತಿ ಎಕರೆ ಭೂಮಿಗೆ 18 ತಿಂಗಳ ಗುತ್ತಿಗೆಗೆ 1.15-1.18 ಲಕ್ಷ ರೂ. ಕ್ಕೆ ಗುತ್ತಿಗೆ ನೀಡುತ್ತಿದ್ದಾರೆ. ಹೀಗಾಗಿ ಶುಂಠಿ ರೈತರೊಂದಿಗೆ ಗುತ್ತಿಗೆ ಸಹಿ ಮಾಡಲು ಗ್ರಾಮಸ್ಥರು ಸಾಲುಗಟ್ಟಿ ನಿಂತಿದ್ದಾರೆ.

ಮೂರು ಎಕರೆ ಜಮೀನನ್ನು ಎಕರೆಗೆ 1 ಲಕ್ಷ ರೂ.ನಂತೆ ಶುಂಠಿ ಕೃಷಿಕರಿಗೆ ಗುತ್ತಿಗೆ ನೀಡಿದ್ದಾರೆ ರೈತ ಬಸವರಾಜ ಕೊಣ್ಣೂರ. ‘ಕಳೆದ ವರ್ಷ ಮೆಕ್ಕೆಜೋಳ ಬೆಳೆಯಲು ಎಕರೆಗೆ ಸುಮಾರು 30 ಸಾವಿರ ಖರ್ಚು ಮಾಡಿದ್ದೆವು, ಸಾಮಾನ್ಯವಾಗಿ ಎಕರೆಗೆ 20 ಕ್ವಿಂಟಾಲ್ ಕೊಯ್ಲು ಮಾಡಿದ್ದೆವು, ಆದರೆ ಈ ಬಾರಿ ಕೇವಲ 5 ಕ್ವಿಂಟಾಲ್ ಬಂದಿದೆ ಎಂದಿದ್ದಾರೆ.

ಮತ್ತೋರ್ವ ರೈತ ಬಸವರಾಜ ಮುಂದಿನಮನಿ ಮಾತನಾಡಿ, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಜೋಳದ ಕೃಷಿಯಲ್ಲಿ ನಷ್ಟ ಉಂಟಾಗಿದೆ. ಕೇರಳದ ವ್ಯಕ್ತಿಯೊಬ್ಬರು ಎಕರೆಗೆ 1.15 ಲಕ್ಷ ರೂಪಾಯಿ ನೀಡುವುದಾಗಿ ಅವರನ್ನು ಸಂಪರ್ಕಿಸಿದ್ದರು. ನಷ್ಟದ ಕಾರಣ ಈ ವರ್ಷ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ತಮ್ಮ ಜಮೀನನ್ನು ಗುತ್ತಿಗೆಗೆ ನೀಡಿದೆ ಎಂದು ಹೇಳಿದ್ದಾರೆ. ಅವನ ಹೆಸರು ಅಜಯ್ ಮತ್ತು 18 ತಿಂಗಳು ನಮ್ಮ ಭೂಮಿಯನ್ನು ಗುತ್ತಿಗೆ ಪಡೆದಿದ್ದಾನೆ, ಅವನು ಕೇರಳದ ಯಾವ ಭಾಗದವನು, ಶುಂಠಿ ಕೃಷಿ ಮಾಡಿದರೆ ಭೂಮಿಗೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ವಿವರಿಸಿದ್ದಾರೆ.

ಅನೇಕರು ಇಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ, ನನಗೆ ಹಣ ಬೇಕಿದ್ದು ಮುಂಗಡವಾಗಿ ಸಿಕ್ಕಿದೆ. ಒಂದು ಬೋರ್‌ವೆಲ್ ಇರಬೇಕು ಎಂಬುದು ಅವರ ಒಂದೇ ಷರತ್ತು. 2.14 ಲಕ್ಷ ರೂ.ನಲ್ಲಿ ಬೋರ್‌ವೆಲ್ ಕೊರೆಸಿದ್ದೇನೆ. ಈಗ 6.5 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ ಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಹುಬ್ಬಳ್ಳಿ ಸಮೀಪದ ತಿಮ್ಮಾಪುರ ಗ್ರಾಮದ ಮತ್ತೊಬ್ಬ ರೈತ ಬಸಪ್ಪ ಹೊರಪೇಟೆ ಎಂಬುವರು ತಮ್ಮ 16 ಎಕರೆ ಆಸ್ತಿಯನ್ನು ಗುತ್ತಿಗೆಗೆ ನೀಡಿದ್ದಾರೆ. ಕಳೆದ ವರ್ಷ ಎಕರೆಗೆ ಕನಿಷ್ಠ 5 ಸಾವಿರ ರೂ. ನಷ್ಟವಾಗಿದೆ. ಕಳೆದ ಎರಡು ವರ್ಷಗಳಿಂದ ಕೇರಳದ ಜನರು ನನ್ನ ಹಿಂಬಾಲಿಸಿದ್ದಾರೆ, ಕಳೆದ ವರ್ಷ ನಷ್ಟವನ್ನು ತುಂಬಲು ಸಾಧ್ಯವಾಗದ ಕಾರಣ ನಾನು ನನ್ನ ಜಮೀನನ್ನು ಗುತ್ತಿಗೆಗೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಗುತ್ತಿಗೆ ಪಡೆದವರು ಒಂದು ಎಕರೆಯಲ್ಲಿ ತಲಾ 60 ಕೆಜಿ ತೂಕದ ಕನಿಷ್ಠ 40 ಚೀಲ ಶುಂಠಿ ಕೃಷಿ ಮಾಡುತ್ತಾರೆ. ಅವರು ಎಕರೆಗೆ ಸುಮಾರು 50 ಚೀಲ ಕೋಳಿ ಗೊಬ್ಬರವನ್ನು ಹಾಕುತ್ತಾರೆ ಮತ್ತು ಶುಂಠಿ ಎಲೆ ರೋಗಕ್ಕೆ ಗುರಿಯಾಗುವುದರಿಂದ ಸಾಕಷ್ಟು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ ಎಂದಿದ್ದಾರೆ.

ಬೋರ್‌ವೆಲ್ ಇರುವ ಜಮೀನುಗಳಿಗೆ ಹೆಚ್ಚಿನ ಹಣ ನೀಡಲಾಗುತ್ತದೆ ಮತ್ತು ಬೋರ್‌ವೆಲ್ ಇಲ್ಲದಿದ್ದರೆ, ಗುತ್ತಿಗೆದಾರರು ತಾವೇ ಬೋರ್ ವೆಲ್ ಕೊರೆಸಿ ಗುತ್ತಿಗೆಯ ಹಣದಿಂದ ಕಡಿತಗೊಳಿಸುತ್ತಾರೆ. ಎಕರೆಗೆ 6 ಲಕ್ಷ ರೂಪಾಯಿ ಖರ್ಚು ಮಾಡಿ ಶುಂಠಿ ಬೆಳೆಯುತ್ತೇವೆ, 60 ಕೆಜಿ ತೂಕದ ಚೀಲಕ್ಕೆ 1,600 ರೂ. ಸಿಗುವ ನಿರೀಕ್ಷೆಯಿದೆ. ಆದರೆ ಚೀಲಕ್ಕೆ 2,100 ರೂ. ಸಿಕ್ಕರೆ ದೊಡ್ಡ ಲಾಭವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ.

ಉತ್ತರ ಕನ್ನಡದ ಮುಂಡಗೋಡ ತಾಲೂಕು, ಧಾರವಾಡ ತಾಲೂಕಿನ ಕಲಘಟಗಿ, ಹಾವೇರಿ ತಾಲೂಕಿನ ಹಾನಗಲ್ ಹಾಗೂ ಹೊರವಲಯದ ಕದಳ್ಳಿ, ನಿಟ್ಟೂರು, ತಿಮ್ಮಾಪುರ, ನೀರಲಗಾ, ತೀರ್ಥ, ಅಡವಿ ಸೋಮಾಪುರ, ಜಿಗಳ್ಳಿ, ಮಳಲಿ, ಹಿರೇಬೆಂಡಿಗೇರಿ, ಮಡ್ಲಿ, ಹೊನ್ನಾಪುರ ಮತ್ತಿತರ ಗ್ರಾಮಗಳಲ್ಲಿ ಸಾವಿರಾರು ಎಕರೆ ಗುತ್ತಿಗೆ ನೀಡಲಾಗಿದೆ.

ಶುಂಠಿಯನ್ನು ಹೆ್ಚು ಹೆಚ್ಚು ಬೆಳೆಯುವುದರಿಂದ ಕೃಷಿ ಭೂಮಿ ನಿಷ್ಪ್ರಯೋಜಕವಾಗುತ್ತದೆ ಎಂದು ಕೆಲವು ಕೃಷಿ ತಜ್ಞರು ತಮ್ಮ ಆತಂಕ ವ್ಯಕ್ತಪಡಿಸಿದರ. ಆದರೆ ಕೆಲವರು ಶುಂಠಿ ಕೃಷಿಯು ಮಣ್ಣನ್ನು ಸಮೃದ್ಧಗೊಳಿಸುತ್ತದೆ ಮತ್ತು ರೈತರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಶುಂಠಿ ಕೃಷಿ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದಿದ್ದಾರೆ,

ಶುಂಠಿ ಕೃಷಿಯಿಂ ಆರ್ಥಿಕವಾಗಿ ಲಾಭವಾಗುತ್ತಿಲ್ಲ. ಶೋಷಣೆ, ಜಮೀನು ನಿಷ್ಪ್ರಯೋಜಕವಾಗುವುದರ ಜತೆಗೆ ನೀರು ಕಲುಷಿತವಾಗುತ್ತಿದೆ ಎಂದು ಸಹಜ ಸಮೃದ್ಧ ನಿರ್ದೇಶಕ ಕೃಷ್ಣ ಪ್ರಸಾದ್ ಹೇಳಿದರು.

ತೋಟಗಾರಿಕಾ ಇಲಾಖೆ ಮಾಜಿ ಹೆಚ್ಚುವರಿ ನಿರ್ದೇಶಕ ಹಿತ್ತಲಮನಿ ಮಾತನಾಡಿ, ಕೀಟನಾಶಕಗಳ ನಿರಂತರ ಬಳಕೆಯಿಂದ ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪೋಷಕಾಂಶಗಳು ನಾಶವಾಗುತ್ತವೆ. ಇದು ದೀರ್ಘಾವಧಿ ಬೆಳೆಯಾಗಿದ್ದು, ಹೆಚ್ಚಿನ ನೀರು ಮತ್ತು ಆರೈಕೆಯ ಅಗತ್ಯವಿರುತ್ತದೆ, ಕೀಟನಾಶಕಗಳ ಬಳಕೆ ಹೆಚ್ಚು, ಬೆಳೆ ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ," ಎಂದು ಅವರು ಹೇಳಿದರು.

ಶುಂಠಿ ಕೃಷಿಯ ಕುರಿತು ಎಂಟು ವರ್ಷಗಳ ಅಧ್ಯಯನ ನಡೆಸಿರುವ ಧಾರವಾಡದ ಯುಎಎಸ್‌ನ ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿಯೊಬ್ಬರು ಮಾತನಾಡಿ. ಶುಂಠಿ ಕೃಷಿಯ ನಂತರ ಮಣ್ಣಿನ ಪೋಷಕಾಂಶವು ಸಮೃದ್ಧವಾಗಿದೆ ಎಂದು ನಮ್ಮ ಅಧ್ಯಯನವು ಕಂಡುಹಿಡಿದಿದೆ, ಏಕೆಂದರೆ ಈ ರೈತರು ಹೆಚ್ಚಿನ ಪೋಷಕಾಂಶ ಮತ್ತು ಹೊಲ ಗೊಬ್ಬರವನ್ನು ಬಳಸುತ್ತಾರೆ ಎಂದು ತಿಳಿಸಿದ್ದಾರೆ.

ಇಳುವರಿ ಸುಧಾರಣೆಯನ್ನು ತೋರಿಸುತ್ತದೆ. ಒಂದೇ ಒಂದು ಹಿನ್ನಡೆ ಏನೆಂದರೆ, ರಾಸಾಯನಿಕ ಅವಶೇಷಗಳು ಮಣ್ಣಿನಲ್ಲಿ ಉಳಿಯುತ್ತವೆ ಮತ್ತು ಹೆಚ್ಚಿನ ನೀರನ್ನು ಬಳಸುವುದರಿಂದ, ಹತ್ತಿರದ ತೊರೆಗಳು ಮತ್ತು ಜಲಮೂಲಗಳು ಕಲುಷಿತವಾಗುತ್ತವೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ವಿಜ್ಞಾನಿ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT