ಅಸ್ಥಿಪಂಜರ ಸಂಗ್ರಹ ಕಾರ್ಯದಲ್ಲಿ ಸಿಬ್ಬಂದಿ 
ರಾಜ್ಯ

Dharmasthala Case: 6ನೇ ದಿನ ನೂರಾರು ಮೂಳೆ, ತಲೆ ಬುರುಡೆ ಪತ್ತೆ; ಕೌತುಕ ಹೆಚ್ಚಿಸಿದ ದೂರುದಾರನ ನಡೆ! Video

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಆರನೇ ದಿನದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ.

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಉತ್ಖನನ ವೇಳೆ ಸುಮಾರು 100 ಮೂಳೆಗಳು ಮತ್ತು ತಲೆಬುರುಡೆ ಪತ್ತೆಯಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಆರನೇ ದಿನದಲ್ಲಿ ಈ ಅವಶೇಷಗಳು ಪತ್ತೆಯಾಗಿದ್ದು, ತಲೆಬುರುಡೆ, ಬೆನ್ನುಮೂಳೆಯ ಮೂಳೆಗಳು ಸೇರಿದಂತೆ ಸುಮಾರು 100 ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೂರುದಾರ ತೋರಿಸಿದ 11ನೇ ಸ್ಥಳದಿಂದ ಸುಮಾರು 100 ಮೀಟರ್ ಅಂತರದಲ್ಲಿ ಈ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್ ಐಟಿ ಮೂಲಗಳು ಹೇಳಿವೆ. ಪತ್ತೆಯಾದ ಅಸ್ಥಿಪಂಜರದ ಭಾಗಗಳು ಇಬ್ಬರು ವ್ಯಕ್ತಿಗಳಿಗೆ ಸೇರಿರಬಹುದು ಎನ್ನಲಾಗಿದೆ. ಉದ್ದವಾದ ಬೆನ್ನುಮೂಳೆಯ ಪಟ್ಟಿ ಕೂಡ ಕಂಡುಬಂದಿದೆ. ತಜ್ಞರ ತಂಡ ವೈಜ್ಞಾನಿಕವಾಗಿ ಇವುಗಳನ್ನು ಸಂಗ್ರಹಿಸಿದೆ.

ಗಂಟು ಹಾಕಿದ ಸೀರೆ ಪತ್ತೆ:

ಅದೇ ಸ್ಥಳದಲ್ಲಿ ಗಂಟು ಹಾಕಿದ ಸೀರೆಯೂ ಪತ್ತೆಯಾಗಿದೆ. ಮರದ ಮೇಲೆ ಆರು ಅಡಿ ಎತ್ತರದಲ್ಲಿ ಸೀರೆ ಕಟ್ಟಲಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಬೆಳಗ್ಗೆ 11.30ರ ಸುಮಾರಿಗೆ ಅರಣ್ಯ ಪ್ರವೇಶಿಸಿದ ಎಸ್‌ಐಟಿ ತಂಡ ಮಧ್ಯಾಹ್ನದ ಭೋಜನಕ್ಕೂ ವಿರಾಮ ತೆಗೆದುಕೊಳ್ಳದೆ ಸಂಜೆ 6.15ರವರೆಗೂ ಶೋಧ ಕಾರ್ಯ ನಡೆಸಿತು. ಅಸ್ಥಿ ಪಂಜರದ ಅವಶೇಷಗಳನ್ನು ಮೂರು ಬಕೆಟ್‌ಗಳು ಮತ್ತು ಎರಡು ಪಿವಿಸಿ ಪೈಪ್‌ಗಳಲ್ಲಿ ಮುಚ್ಚಿಕೊಂಡು ಕಾಡಿನಿಂದ ಹೊರಗೆ ತರಲಾಯಿತು.

ಕುತೂಹಲ ಮೂಡಿಸಿದ ದೂರುದಾರನ ನಡೆ: ದೂರುದಾರ ಈ ಹಿಂದೆ ಧರ್ಮಸ್ಥಳ ಸ್ನಾನಘಟ್ಟದ ಬಳಿ ಮತ್ತು ಅರಣ್ಯದೊಳಗೆ 13 ಶವ ಹೂತಿಟ್ಟ ಸಂಭವನೀಯ ಜಾಗಗಳನ್ನು ಗುರುತಿಸಿದ್ದರು. ಇವುಗಳಲ್ಲಿ 10 ಜಾಗಗಳಲ್ಲಿ ಇಲ್ಲಿಯವರೆಗೆ ಉತ್ಖನನ ಮಾಡಲಾಗಿದೆ. ಸೋಮವಾರ 11ನೇ ಜಾಗದಲ್ಲಿ ಜಾಗ ಅಗೆಯುವಿಕೆಗೆ ನಿರ್ಧರಿಸಲಾಗಿತ್ತು. ಆದರೆ, ದೂರುದಾರ ಅದರ ಬದಲಾಗಿ ಹತ್ತಿರದ ಬೇರೆ ಸ್ಥಳದಲ್ಲಿ ಅಗೆಯಲು ಮನವಿ ಮಾಡಿದರು. ಇದಕ್ಕಾಗಿ ಸುಮಾರು 20 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಸ್ಥಳಕ್ಕೆ ಮಿನಿ ಅರ್ಥ್ ಮೂವರ್ಸ್ ಯಂತ್ರ ಕರೆಸಲಾಗಿತ್ತು. ಅದರಲ್ಲಿ ಅರಣ್ಯ ಪ್ರದೇಶದಲ್ಲಿ ಅದನ್ನು ಬಳಸಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿ: ನವರಾತ್ರಿ ವೇಳೆ ಮಹಿಳೆಯೊಬ್ಬರ ಸಂಭ್ರಮಕ್ಕೆ ಯೋಜನೆ ಕಾರಣವಾಗಿರುವುದು ಸಾರ್ಥಕ ತರಿಸಿದೆ ಎಂದ ಸಿಎಂ

SCROLL FOR NEXT