ರಜತ್ ಕಿಶನ್ 
ರಾಜ್ಯ

ಧರ್ಮಸ್ಥಳ ಗಲಾಟೆ: ನಿನ್ನೆ ಏನಾಯ್ತು? ಎಳೆ ಎಳೆಯಾಗಿ ಬಿಚ್ಚಿಟ್ಟ Biggboss ಮಾಜಿ ಸ್ಪರ್ಧಿ ರಜತ್ ಕಿಶನ್!

ಧರ್ಮಸ್ಥಳದ ನೇತ್ರಾವತಿಯ ಪಾಂಗಳದ ಬಳಿ ಯೂಟ್ಯೂಬರ್ಸ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.

ಮಂಗಳೂರು: ಧರ್ಮಸ್ಥಳದ ನೇತ್ರಾವತಿಯ ಪಾಂಗಳದ ಬಳಿ ಯೂಟ್ಯೂಬರ್ಸ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಇನ್ನು ನಿನ್ನೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಧರ್ಮಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿತ್ತು. ಇನ್ನು ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿರುವ ರಜತ್ ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳೋಕೆ ಮಾತ್ರ. ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ ಜೊತೆ ಮಾತನಾಡುತ್ತಿದ್ದಾಗಲೇ ಅಲ್ಲಿಗೆ ಬಂದ ಗುಂಪೊಂದು ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ. ಗುಂಪು ಯೂಟ್ಯೂಬರ್ಸ್​ಗೆ ಕಾಲಿನಿಂದ ಒದ್ದು, ಕೋಲಲ್ಲಿ ಮತ್ತು ಕಲ್ಲಲ್ಲಿ ಹೊಡ್ದಿದ್ದಾರೆ. 30ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದರಿಂದ ಏನು ಮಾಡಕ್ಕಾಗದ ಸ್ಥಿತಿಯಲ್ಲಿ ನಿಂತುಕೊಂಡಿದ್ದೇವು ಎಂದು ರಜತ್​ ಕಿಶನ್​ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ನನಗೆ ಈಗ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಿಶನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನತೆಗೆ ಕರೆ-Video

'ದೊರೆ ಮಾಡಿದ್ರೆ ಶಿಕ್ಷೆ ಇಲ್ವ'; ಕೆಎನ್ ರಾಜಣ್ಣ ಆಕ್ರೋಶ

19ನೇ ವಯಸ್ಸಿಗೆ 180 ಅಪ್ರಾಪ್ತ ಬಾಲಕಿಯರ ಜೊತೆ ಸೆಕ್ಸ್; 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ Viral, ತನ್ವೀರ್ ಅಹ್ಮದ್ ಯಾರು?

'TCSನಲ್ಲಿ ಲವ್ ಜಿಹಾದ್, ಲೈಂಗಿಕ ಕಿರುಕುಳ' ಪ್ರಕರಣ: HR ನಿದಾ ಖಾನ್ 'ಮಾಸ್ಟರ್ ಮೈಂಡ್'; ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ!

ಚೀನಾ ನಿಜಕ್ಕೂ ಇರಾನ್‌ಗೆ ಮಿಲಿಟರಿ ನೆರವು ನೀಡುತ್ತಿದೆಯೇ?

SCROLL FOR NEXT