ಗದಗ: ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಪ್ರಾರಂಭಿಸಿದ ಆಪರೇಷನ್ ಸಿಂದೂರ್ ಮಿಲಿಟರಿ ಕಾರ್ಯಾಚರಣೆ ಗದಗ ಜಿಲ್ಲೆಯಲ್ಲಿ ಜನಪ್ರಿಯ ಸೀರೆಗಳ ಸಾಲಿಗೆ ಸ್ಫೂರ್ತಿ ನೀಡಿದೆ.
ಆಪರೇಷನ್ ಸಿಂದೂರ್ ಅನ್ನು ಸೀರೆಯ ಮೇಲೆ ಗೌರವಿಸುವ ಕಲ್ಪನೆಯು ಗಜೇಂದ್ರಗಡದ ನೇಕಾರ ತೇಜಪ್ಪ ಚಿನ್ನೂರ್ ಅವರ ಕನಸಿನ ಕೂಸು, ಇಂದು ಅನೇಕರು ಈ ಸೀರೆಯನ್ನು ಕೊಂಡುಕೊಳ್ಳಲು ಅವರ ವಿಳಾಸ ಹುಡುಕಿಕೊಂಡು ಬರುತ್ತಿದ್ದಾರೆ.
ಈ ಸೀರೆಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, “ಆಪರೇಷನ್ ಸಿಂಧೂರ” ಎಂದು ದಪ್ಪವಾಗಿ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಸೀರೆಯ ರೇಷ್ಮೆ ಬಾರ್ಡರ್ನಲ್ಲಿ ತ್ರಿವರ್ಣ ಧ್ವಜದ ಕಲರ್ನಲ್ಲಿ ಮೂರು ಯುದ್ಧ ವಿಮಾನಗಳನ್ನು ಕಸೂತಿ ಮಾಡಲಾಗಿದೆ.ತೇಜಪ್ಪ ಚಿನ್ನೂರ್- ನೇಕಾರ
ಈ ಸೀರೆಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, “ಆಪರೇಷನ್ ಸಿಂಧೂರ” ಎಂದು ದಪ್ಪವಾಗಿ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಸೀರೆಯ ರೇಷ್ಮೆ ಬಾರ್ಡರ್ನಲ್ಲಿ ತ್ರಿವರ್ಣ ಧ್ವಜದ ಕಲರ್ನಲ್ಲಿ ಮೂರು ಯುದ್ಧ ವಿಮಾನಗಳನ್ನು ಕಸೂತಿ ಮಾಡಲಾಗಿದೆ. ಗಜೇಂದ್ರಗಡ ಶುದ್ಧ ಹತ್ತಿ ನೂಲಿನಿಂದ ತಯಾರಿಸಲ್ಪಡುವ ಪಟ್ಟೇದಂಚಿನ ಸೀರೆಗಳಿಗೆ ಹೆಸರುವಾಸಿ. ಈ ವರ್ಷ ಅವುಗಳಿಗೆ ಜಿಐ ಟ್ಯಾಗ್ ಕೂಡ ಸಿಕ್ಕಿದೆ. ಪ್ರಸ್ತುತ, ಇಲ್ಲಿ ಸುಮಾರು 400 ಕೈಮಗ್ಗಗಳಿದ್ದು, ಅವುಗಳಲ್ಲಿ ಸುಮಾರು 200 ಕೈಮಗ್ಗಗಳಿಂದ ಈ ಪಟ್ಟೇದಂಚಿನ ಸೀರೆಗಳನ್ನು ನೇಯಲಾಗುತ್ತದೆ.
ಇನ್ನು ಈ ಹೊಸ ಬಗೆಯ ಆಪರೇಷನ್ ಸಿಂಧೂರ ಸೀರೆಗಳು ಸಹ ಇದೇ ವಿಧಕ್ಕೆ ಸೇರಿವೆ. ಇವುಗಳನ್ನು ಶುದ್ಧ ಹತ್ತಿಯಿಂದ ಮತ್ತು ರೇಷ್ಮೆ ಬಾರ್ಡರ್ನೊಂದಿಗೆ ತಯಾರಿಸಲಾಗುತ್ತದೆ. ಸೀರೆಯ ಒಂದು ಬದಿಯನ್ನು ಬಲಪಡಿಸಲು, ದಾರಗಳನ್ನು ತುಂಡುಗಳಾಗಿ ಕತ್ತರಿಸಲಾಗುತ್ತದೆ. ಬಳಿಕ ವಾರ್ಪ್ ತಯಾರಿಸಲಾಗುತ್ತದೆ. ಕೈಮಗ್ಗದಿಂದ ಸೀರೆಯಲ್ಲಿ ಸಾಂಪ್ರದಾಯಿಕ ವಿನ್ಯಾಸಗಳನ್ನು ರಚಿಸಲಾಗುತ್ತದೆ.
ಇನ್ನೊಂದು ವೈಶಿಷ್ಟ್ಯವೆಂದರೆ ಕನ್ನಡ ಭಾಷೆಯಲ್ಲಿ "ಕನ್ನಡ" ಎಂಬ ಪದವನ್ನು ನೇಯಲಾಗಿದೆ," ಎಂದು ಮತ್ತೊಬ್ಬ ನೇಕಾರ ಅಶೋಕ್ ಲಡ್ವಾ ಹೇಳಿದರು. ಪಟ್ಟೆ ಅಂಚಿನ ರೇಷ್ಮೆ ಸೀರೆಗಳ ಬೆಲೆ 2,000 ರಿಂದ 5,000 ರೂ.ಗಳವರೆಗೆ ಇರುತ್ತದೆ, ಆದರೆ ಆಪರೇಷನ್ ಸಿಂಧೂರ್ ಸೀರೆಗಳು ವಿಶೇಷವಾಗಿ ಗುಣಮಟ್ಟವನ್ನು ಅವಲಂಬಿಸಿ 4,000 ರೂ.ಗಳಿಂದ ಪ್ರಾರಂಭವಾಗಿ, 10,000 ರೂ.ಗಳವರೆಗೆ ಇರುತ್ತದೆ ಎಂದಿದ್ದಾರೆ.
40 ವರ್ಷಗಳಿಂದ, ತೇಜಪ್ಪ ಚಿನ್ನೂರ್ ಕೈಮಗ್ಗ ನೇಯ್ಗೆ ಕಲೆಯನ್ನು ಮುಂದುವರೆಸಿದ್ದಾರೆ, ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘವನ್ನು ಸಹ ಸ್ಥಾಪಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ನಡೆಯುವ 11 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ 20,000 ರೂ. ಬಹುಮಾನ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು.