

ಬೆಂಗಳೂರು: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವನ್ನು ರಾಜ್ಯ ಜನತೆ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದು, ಇಂದು (ಬುಧವಾ) ಎಲ್ಲೆಡೆ ಹೊಸತೊಡಕು ಸಂಭ್ರಮ ಮನೆ ಮಾಡಿದೆ.
ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು ಆಚರಿಸಲಾಗುತ್ತದೆ. ಈ ಹಬ್ಬದಂದು ಜನರು ಕುಟುಂಬ ಸಮೇತರಾಗಿ ಮಾಂಸಾಹಾರ ಸೇವಿಸುವುದು ಸಂಪ್ರದಾಯವಾಗಿದೆ. ಹೊಸ ತೊಡಕು ಮತ್ತು ರಂಜಾನ್ ಹಿನ್ನೆಲೆಯಲ್ಲಿ ಮಾಂಸಕ್ಕೆ ಭಾರಿ ಬೇಡಿಕೆ ಶುರುವಾಗಿದೆ. ಇದರಂತೆ ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ.
ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಭಾರೀ ಬೇಡಿಕೆ ಬಂದಿದೆ. ವಿಶೇಷವಾಗಿ ಇಂದು, ಗುಡ್ಡೆ ಮಾಂಸ ತಿನ್ನುವುದು ವಾಡಿಕೆ. ಸಾಮಾನ್ಯವಾಗಿ, ಕುರಿ ಮತ್ತು ಮೇಕೆಗಳನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡಲಾಗುತ್ತದೆ.
ಗುಡ್ಡೆ ಮಟನ್ ಮಾಂಸಕ್ಕೆ ಕೆಜಿಗೆ 1000-1200 ಆಗಿದ್ದು, ವರ್ಷಕ್ಕೊಮ್ಮೆ ಹಬ್ಬ ಬರುವುದರಿಂದ ಬೆಲೆ ಜಾಸ್ತಿ ಆದರೂ ಹಬ್ಬ ಮಾಡಲೇಬೇಕೆಂದು ಜನರು ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ 'ಪಾಪಣ್ಣ ಮಟನ್ ಸ್ಟಾಲ್' ಮುಂದೆ ಜನರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದು, ಮಾಂಸ ಖರೀದಿಗೆ ಮಾಡುತ್ತಿದ್ದಾರೆ.
ಹೊಸತೊಡುಕು ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೇ ಮಟನ್ ಸ್ಟಾಲ್ ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಬಂದು ಮಟನ್ ಖರೀದಿಗೆ ಮುಗಿಬಿದ್ದಿದ್ದಾರೆ.
ನೂಕುನುಗ್ಗಲು ತಪ್ಪಿಸಲು ಮಾಲೀಕರು ಬರೋಬ್ಬರಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಮಟನ್ ವಿತರಣೆ ಮಾಡುತ್ತಿದ್ದಾರೆ.
Advertisement