ನಟ ಉಪೇಂದ್ರ ಕುಟುಂಬದಲ್ಲಿ ಮದುವೆ ಸಂಭ್ರಮ; ಸಂಜನಾ ಜೊತೆ ಹಸೆಮಣೆ ಏರಿದ ನಿರಂಜನ್ ಸುಧೀಂದ್ರ-Video

ನಿರಂಜನ್ ಸುಧೀಂದ್ರ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ಅವರ ಕುಟುಂಬದ ಕುಡಿಯಾಗಿರುವ ಅವರು ಸಿನಿಮಾರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸುವ ಪ್ರಯತ್ನದಲ್ಲಿದ್ದಾರೆ.
Actor Niranjan Sudhindra Marries Sanjana
ಸಂಜನಾ ಜೊತೆ ಹಸೆಮಣೆ ಏರಿದ ನಿರಂಜನ್ ಸುಧೀಂದ್ರ
Updated on: 

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.

ಉಪೇಂದ್ರ ಅವರ ಸೋದರಳಿಯ, ನಟ ನಿರಂಜನ್ ಸುಧೀಂದ್ರ ಅವರು ಸಂಜನಾ ಬಿ ರಾಜ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಸಮಾರಂಭ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿದೆ.

ನಿರಂಜನ್ ಸುಧೀಂದ್ರ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ಅವರ ಕುಟುಂಬದ ಕುಡಿಯಾಗಿರುವ ಅವರು ಸಿನಿಮಾರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ನಿರಂಜನ್ ಮತ್ತು ಸಂಜನಾ ಅವರ ಮದುವೆಯ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಮುಂದೆ ನಿಂತು ಶಾಸ್ತ್ರಗಳನ್ನು ನೆರವೇರಿಸಿ, ನವಜೋಡಿಗೆ ದುಬಾರಿ ಒಡವೆಗಳನ್ನು ಉಡುಗೊರೆಯಾಗಿ ನೀಡಿದರು.

Actor Niranjan Sudhindra Marries Sanjana
ಉಪೇಂದ್ರ ಪುತ್ರನ ಮೊದಲ ಸಿನಿಮಾದಿಂದ ನಿರ್ದೇಶಕ ಔಟ್: ಪುರುಷೋತ್ತಮ್ ಕೈಬಿಟ್ಟ ಹಿನ್ನೆಲೆ ಬಿಚ್ಚಿಟ್ಟ ಪ್ರಿಯಾಂಕಾ ಉಪೇಂದ್ರ; ಹೇಳಿದ್ದೇನು?

ನಿರಂಜನ್​ ಮದುವೆಗೆ ತಾರೆಗಳ ದಂಡು

ಈ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾದರು. ಹಿರಿಯ ನಟಿ ಬಿ.ಸರೋಜಾದೇವಿ, ನಟಿಯರಾದ ಮಾಲಾಶ್ರೀ, ಸುಧಾರಾಣಿ, ಮಾಳವಿಕಾ ಅವಿನಾಶ್, ಅಶ್ವಿನಿ ಪುನೀತ್​ ರಾಜ್​​ ಸೇರಿದಂತೆ ಸ್ಯಾಂಡಲ್​ವುಡ್​ ಮತ್ತು ಕಿರುತೆರೆ ನಟ-ನಟಿಯರು ಆಗಮಿಸಿದ್ದಾರೆ.

ಅಂದಹಾಗೆ ನಿರಂಜನ್​ ಅವರು, ಉಪೇಂದ್ರ ಸಹೋದರ ಸುಧೀಂದ್ರ - ವೀಣಾ ದಂಪತಿಯ ಪುತ್ರನಾಗಿದ್ದಾರೆ. ಇದಾಗಲೇ ಕೆಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಸೆಕೆಂಡ್ ಹಾಫ್’, ‘ಸೀತಾ ಪಯಣಂ’ ಮುಂತಾದ ಸಿನಿಮಾಗಳಲ್ಲಿ ನಟ ನಿರಂಜನ್ ಸುಧೀಂದ್ರ ಮಿಂಚಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X