ವಿದೇಶ

ಅಫ್ಘಾನಿಸ್ತಾನದ ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗಲೇ ಭೀಕರ ಸ್ಫೋಟ: 7 ವಿದ್ಯಾರ್ಥಿಗಳು ದುರ್ಮರಣ, 100 ಮಂದಿಗೆ ಗಾಯ

ಅಫ್ಘಾನಿಸ್ತಾನದ ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗಲೇ ಭೀಕರ ಸ್ಫೋಟ: 7 ವಿದ್ಯಾರ್ಥಿಗಳು ದುರ್ಮರಣ, 100 ಮಂದಿಗೆ ಗಾಯ
ಶಾಲೆಯ ಪಕ್ಕದಲ್ಲೇ ಸಂಗ್ರಹಿಸಿದ್ದ ಡೈನಮೈಟ್ ಸ್ಫೋಟಗೊಂಡು 7 ಮಕ್ಕಳು ಬಲಿ — Online Desk
Published On :

ಕುನಾರ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಪೂರ್ವ ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದ ಪ್ರೌಢಶಾಲೆಯೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ 7 ವಿದ್ಯಾರ್ಥಿಗಳು ಮೃತಪಟ್ಟಿದ್ದು, 97 ರಿಂದ 100 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಾಲೆಯಲ್ಲಿ ಪಾಠ ನಡೆಯುತ್ತಿದ್ದ ಸಮಯದಲ್ಲೇ ಈ ದುರ್ಘಟನೆ ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸ್ಫೋಟಕ್ಕೆ ಕಾರಣವೇನು?

ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖಾನಿ ಮತ್ತು ಕುನಾರ್ ಪ್ರಾಂತ್ಯದ ಅಧಿಕಾರಿಗಳ ಪ್ರಕಾರ, ಶಾಲೆಯ ಪಕ್ಕದಲ್ಲಿದ್ದ ವಸತಿ ಕಟ್ಟಡದಲ್ಲಿ ಗಣಿಗಾರಿಕೆ ಕಂಪನಿಗಳು ಹಾಗೂ ಕುನಾರ್-ನೂರಿಸ್ತಾನ್ ರಸ್ತೆ ಕಾಮಗಾರಿಗೆ ಬಳಸಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಡೈನಮೈಟ್‌ಗಳು ಸ್ಫೋಟಗೊಂಡಿದ್ದೇ ಪ್ರಾಥಮಿಕ ಕಾರಣ ಎಂದು ಆಡಳಿತ ದೃಢಪಡಿಸಿದೆ. ಇನ್ನು, ಸ್ಫೋಟದ ತೀವ್ರತೆಗೆ ಶಾಲೆಯ ಕನಿಷ್ಠ ಎರಡು ತರಗತಿ ಕೊಠಡಿಗಳ ಮೇಲ್ಛಾವಣಿಗಳು ಕುಸಿದು ಬಿದ್ದಿವೆ. ಇದರಿಂದಾಗಿ ತರಗತಿಯಲ್ಲಿದ್ದ ಮಕ್ಕಳು ಅವಶೇಷಗಳಡಿ ಸಿಲುಕಿ ಹೆಚ್ಚಿನ ಸಾವು-ನೋವು ಸಂಭವಿಸಿದೆ.

ಒಂದೇ ಬೆಡ್‌ನಲ್ಲಿ ನಾಲ್ಕೈದು ವಿದ್ಯಾರ್ಥಿಗಳಿಗೆ ಚಿಕಿತ್ಸೆ!

ಮುಂದುವರೆದು, ಕುನಾರ್ ಪ್ರಾಂತೀಯ ಆಸ್ಪತ್ರೆಯಲ್ಲಿ ಒಂದೇ ಹಾಸಿಗೆಯ ಮೇಲೆ ನಾಲ್ಕೈದು ಮಕ್ಕಳಿಗೆ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಗೊಂಡಿರುವ 97 ರಿಂದ 99 ಮಂದಿಯಲ್ಲಿ, ತೀವ್ರವಾಗಿ ಗಾಯಗೊಂಡಿರುವ ನಾಲ್ವರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಜಲಾಲಾಬಾದ್‌ನ ಪ್ರಾದೇಶಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಏತನ್ಮಧ್ಯೆ, ವಸತಿ ಪ್ರದೇಶದಲ್ಲಿ ಮತ್ತು ಶಾಲೆಯ ಪಕ್ಕದಲ್ಲಿ ಅಪಾಯಕಾರಿ ಸ್ಫೋಟಕಗಳನ್ನು ಹೇಗೆ ಮತ್ತು ಏಕೆ ಸಂಗ್ರಹಿಸಲಾಗಿತ್ತು ಎಂಬುದರ ಕುರಿತು ಪ್ರಾಂತೀಯ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.