ಮಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಬೋಳಿಯಾರ್‌ನಲ್ಲಿ ಅನಾಮಿಕ ತೋರಿದ ಸಮಾಧಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿತು. ಅದರ ಜೊತೆಗೆ ಇನ್ನೂ ನಾಲ್ಕು ಸ್ಥಳಗಳಲ್ಲಿ ನೆಲ ಅಗೆಯಲಾಯಿತು.
ಈ ಸ್ಥಳದಲ್ಲಿ ಅಪ್ರಾಪ್ತ ಶಾಲಾ ಬಾಲಕಿಶವವನ್ನು ಸ್ಕೂಲ್ ಬ್ಯಾಗ್ ಜೊತೆ ಹೂಳಲಾಗಿತ್ತು ಎಂದು ಸಾಕ್ಷೀದಾರನ ಹೇಳಿಕೆ ಹಿನ್ನೆಲೆಯಲ್ಲಿಈ ಸ್ಥಳದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಿದರು. ಆದರೆ ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
2010 ರಲ್ಲಿ ಕಲ್ಲೇರಿಯ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿ 12 ರಿಂದ 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ಶವವಾಗಿ ಬಿದ್ದಿರುವುದು ಕಂಡುಬಂದ ಒಂದು ಘಟನೆ ನನ್ನನ್ನು ಕಾಡುತ್ತಿದೆ. ಅವಳು ಶಾಲಾ ಸಮವಸ್ತ್ರ ಧರಿಸಿದ್ದಳು, ಆದರೆ ಅವಳ ಸ್ಕರ್ಟ್ ಮತ್ತು ಒಳ ಉಡುಪು ಕಾಣೆಯಾಗಿತ್ತು. ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿದ ಗುರುತುಗಳಿದ್ದವು. ಒಂದು ಗುಂಡಿಯನ್ನು ಅಗೆದು ಅವಳ ಶಾಲಾ ಬ್ಯಾಗ್‌ನೊಂದಿಗೆ ಹೂಳಲು ನನ್ನನ್ನು ಕೇಳಲಾಯಿತು ಎಂದು ಸಾಕ್ಷೀದಾರ ತಿಳಿಸಿದ್ದ.
ಶುಕ್ರವಾರ, ಎಸ್‌ಐಟಿ ಆತನನ್ನು ಸ್ಥಳಕ್ಕೆ ಕರೆದೊಯ್ದಾಗ,ಆತ ಸ್ಥಳದ ಬಗ್ಗೆ ಗೊಂದಲಕ್ಕೊಳಗಾಗಿದ್ದ ಹೀಗಾಗಿ ಅಧಿಕಾರಿಗಳನ್ನು ಬೋಳಿಯಾರ್‌ನಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಬೇಕೆಂದು ಹೇಳಿದ ನಂತರ, ಅಲ್ಲಿ ಅವರು ಸೈಟ್ ಸಂಖ್ಯೆ 15 ಎಂದು ಗುರುತಿಸಲಾದ ಸ್ಥಳವನ್ನು ಅಗೆದರು, ಇದು ಸೈಟ್ 15 ಎ ಎಂದು ಗುರುತಿಸಲಾದ ಸ್ಥಳವಾಗಿತ್ತು.
ಅದರ ಜೊತೆಗೆ ಇನ್ನೂ ಎರಡು ಗುರುತು ಮಾಡದ ಸ್ಥಳಗಳನ್ನು ಅಗೆದರು, ಆದರೆ ಯಾವುದೇ ಮಾನವ ಅವಶೇಷಗಳ ಕುರುಹುಗಳು ಇರಲಿಲ್ಲ. ಶಾಲಾ ಬಾಲಕಿಯ ಶವವನ್ನು ಕಾನೂನು ಕಾರ್ಯವಿಧಾನಗಳ ಪ್ರಕಾರ ಸಮಾಧಿ ಮಾಡಲಾಗಿದೆ ಎಂದು ದೂರುದಾರರು ಈಗ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ, 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಸೈಟ್ ಸಂಖ್ಯೆ 6 ರಲ್ಲಿ ಮಾತ್ರ ಮಾನವ ಅವಶೇಷಗಳು ಕಂಡುಬಂದಿವೆ. ಸೈಟ್ ಸಂಖ್ಯೆ 13 ಅನ್ನು ಇನ್ನೂ ಹೊರತೆಗೆಯಲಾಗಿಲ್ಲ.
ದೂರುದಾರನೊಂದಿಗೆ ಕೆಲಸ ಮಾಡಿದ್ದಾರೆ ಎಂದು ಹೆಸರಿಸಲಾದ ತಮಿಳುನಾಡಿನ ಐದು ಮಾಜಿ ನೈರ್ಮಲ್ಯ ಕಾರ್ಮಿಕರ ಹೇಳಿಕೆಗಳನ್ನು SIT ದಾಖಲಿಸಿದೆ. ಆದರೆ ದೂರು ದಾರನ ಹೇಳಿಕೆಗಳನ್ನು ಅವರೆಲ್ಲಾ ವಿರೋಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ತನಿಖಾ ತಂಡಕ್ಕೆ (SIT) ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ, ಇದರಿಂದ FIR ಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. "ಭಾರತೀಯ ನಾಗರಿಕ ಭದ್ರತಾ ಸಂಹಿತೆ (BNSS), 2023 ರ ಸೆಕ್ಷನ್ 2(1)(u) ಅಡಿಯಲ್ಲಿ, ಜುಲೈ 19 ರಂದು ರಚಿಸಲಾದ ವಿಶೇಷ ತನಿಖಾ ತಂಡ (SIT)ವನ್ನು 'ಪೊಲೀಸ್ ಠಾಣೆ' ಎಂದು ಘೋಷಿಸಲಾಗಿದೆ. ಈ ವಿಶೇಷ ತಂಡಕ್ಕೆ ನೇಮಕಗೊಂಡ ಪೊಲೀಸ್ ಇನ್ಸ್‌ಪೆಕ್ಟರ್/ಮೇಲಿನ ಶ್ರೇಣಿಯ ಅಧಿಕಾರಿಯನ್ನು ಭಾರತೀಯ ನಾಗರಿಕ ಭದ್ರತಾ ಸಂಹಿತೆ (BNSS), 2023 ರ ಸೆಕ್ಷನ್ 2(1)(r) ಅಡಿಯಲ್ಲಿ ನೀಡಲಾದ ಅಧಿಕಾರಗಳ ಆಧಾರದ ಮೇಲೆ ಸ್ಟೇಷನ್-ಹೌಸ್ ಅಧಿಕಾರಿ ಎಂದು ಇಲ್ಲಿ ಘೋಷಿಸಲಾಗಿದೆ. ತನಿಖಾ ಕ್ರಮಗಳನ್ನು ಅನುಸರಿಸಲು ಮತ್ತು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲು SIT ಗೆ ಸೂಚಿಸಲಾಗಿದೆ," ಎಂದು ಆಗಸ್ಟ್ 6 ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.