ಸುಜಾತ ಭಟ್-ಜಯಂತ್ 
ರಾಜ್ಯ

ಸುಜಾತ ಭಟ್ ಹೇಳಿದ್ದು ಸತ್ಯವೆಂದು ನಂಬಿ ನಾವು ಮೋಸ ಹೋಗಿದ್ದೇವೆ: ಸಾಮಾಜಿಕ ಹೋರಾಟಗಾರ ಜಯಂತ್ ಅಳಲು!

ಧರ್ಮಸ್ಥಳ ಗ್ರಾಮದಲ್ಲಿ 2003ರಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ದೂರು ನೀಡದ್ದರು. ಅಲ್ಲದೆ ಇದೇ ವಿಚಾರವಾಗಿ ಹಲವು ಮಾಧ್ಯಮಗಳಲ್ಲಿ ಅಲವತ್ತುಕೊಂಡಿದ್ದರು.

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ 2003ರಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ದೂರು ನೀಡದ್ದರು. ಅಲ್ಲದೆ ಇದೇ ವಿಚಾರವಾಗಿ ಹಲವು ಮಾಧ್ಯಮಗಳಲ್ಲಿ ಅಲವತ್ತುಕೊಂಡಿದ್ದರು. ಅಲ್ಲದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಸುಜಾತ ಭಟ್ ಸುಳ್ಳು ಆರೋಪ ಮಾಡಿದ್ದರೆ ಮತ್ತೆ ಕೆಲವರು ಅವರ ಮಾತು ನಂಬಿ ಹೋರಾಟಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ಮಾತನಾಡಿರುವ, ಸಾಮಾಜಿಕ ಹೋರಾಟಗಾರ ಜಯಂತ್ ಇದೀಗ ಸುಜಾತ ಭಟ್ ಅವರ ಮಾತು ಕೇಳಿ ಸತ್ಯವೆಂದು ನಂಬಿ ನಾವು ಮೋಸ ಹೋಗಿದ್ದೇವೆ ಎಂದು ಹೇಳಿದ್ದಾರೆ.

ಸುಜಾತ ಭಟ್ ಅವರ ಮಾತುಗಳನ್ನು ನಾನು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸತ್ಯವೆಂದು ನಂಬಿದ್ದೆವು ಎಂದು ಹೇಳಿದರು. ಪಾಪ ವಯಸ್ಸಾದ ಮಹಿಳೆ ಅಂತ ನಾವು ಸಹಾಯಕ್ಕೆ ಮುಂದಾದೆವು. ಆದರೆ ಮಗಳ ವಿಷಯದಲ್ಲಿ ದಾಖಲೆಗಳನ್ನು ತಂದುಕೊಡಿ ಅಂದಾಗ ಅವರು ಉಡುಪಿ ಮತ್ತು ಎಲ್ಲೆಲ್ಲೋ ಸುತ್ತಿದರೇ ಹೊರತು ದಾಖಲೆ ಕೊಡಲಿಲ್ಲ ಎಂದು ಜಯಂತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!