ಬಿಜೆಪಿ ಅಭ್ಯರ್ಥಿ ಪ್ರೇಮಾ 
ರಾಜ್ಯ

ಕಡಬ ಪಟ್ಟಣ ಪಂಚಾಯಿತಿ ಚುನಾವಣೆ: ಒಂದೇ ಒಂದು ಮತ ಪಡೆಯದ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಭರ್ಜರಿ ಗೆಲುವು!

ವಾರ್ಡ್ ಸಂಖ್ಯೆ 1 ರ ಮತದಾರರಲ್ಲದ ಪ್ರೇಮಾ, ಅವರು ವಾಸಿಸುವ ವಾರ್ಡ್ ಸಂಖ್ಯೆ 6 ರಲ್ಲೂ ಕಣದಲ್ಲಿದ್ದರು. ಆದರೆ, ಅಲ್ಲಿಯೂ 177 ಮತಗಳನ್ನು ಗಳಿಸಿ ಕಾಂಗ್ರೆಸ್‌ನ ನೀಲಾವತಿ ಶಿವರಾಮ್ ಎಂ.ಎಸ್. ವಿರುದ್ಧ ಸೋತರು.

ಮಂಗಳೂರು: ಕರಾವಳಿ ಕರ್ನಾಟಕವನ್ನು ಸಾಮಾನ್ಯವಾಗಿ ಬಿಜೆಪಿಯ ಭದ್ರಕೋಟೆಯೆಂದೇ ಹೇಳಲಾಗುತ್ತದೆ. ಆದರೆ, ಇದೀಗ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಬಿಜೆಪಿ ಅಭ್ಯರ್ಥಿಯೊಬ್ಬರು ಒಂದೇ ಒಂದು ಮತವನ್ನು ಪಡೆಯದೆ ಅಪರೂಪದ ಮತ್ತು ಅವಮಾನಕರ ಸೋಲು ಕಂಡಿದ್ದಾರೆ. ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ.

ವಾರ್ಡ್ ಸಂಖ್ಯೆ 1 (ಕಳಾರ) ರ ಬಿಜೆಪಿ ಅಭ್ಯರ್ಥಿ ಪ್ರೇಮಾ, ವಾರ್ಡ್‌ನಲ್ಲಿನ 418 ಮತಗಳ ಪೈಕಿ ಒಂದೇ ಒಂದು ಮತವನ್ನು ಪಡೆಯಲು ವಿಫಲರಾಗಿದ್ದಾರೆ. ಈ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬೀನ್ 201 ಮತಗಳನ್ನು ಪಡೆದು, ಸ್ವತಂತ್ರ ಅಭ್ಯರ್ಥಿ ಜೈನಾಬಿ ಆಡಮ್ ಅವರನ್ನು 62 ಮತಗಳ ಅಂತರದಿಂದ ಸೋಲಿಸಿ ಗೆದ್ದರು. ಕಣದಲ್ಲಿದ್ದ ಎಸ್‌ಡಿಪಿಐ ಅಭ್ಯರ್ಥಿ 74 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಬಿಸಿಎ (ಮಹಿಳೆ) ಗಾಗಿ ಮೀಸಲಾಗಿರುವ ಈ ವಾರ್ಡ್‌ನಲ್ಲಿ ನಾಲ್ಕು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.

ವಾರ್ಡ್ ಸಂಖ್ಯೆ 1 ರ ಮತದಾರರಲ್ಲದ ಪ್ರೇಮಾ, ಅವರು ವಾಸಿಸುವ ವಾರ್ಡ್ ಸಂಖ್ಯೆ 6 ರಲ್ಲೂ ಕಣದಲ್ಲಿದ್ದರು. ಆದರೆ, ಅಲ್ಲಿಯೂ 177 ಮತಗಳನ್ನು ಗಳಿಸಿ ಕಾಂಗ್ರೆಸ್‌ನ ನೀಲಾವತಿ ಶಿವರಾಮ್ ಎಂ.ಎಸ್. ವಿರುದ್ಧ ಸೋತರು. ನೀಲಾವತಿ 314 ಮತಗಳನ್ನು ಗಳಿಸಿ ಗೆದ್ದು ಬೀಗಿದ್ದಾರೆ.

ವಾರ್ಡ್ ಸಂಖ್ಯೆ 1 ರಲ್ಲಿ ತಮ್ಮ ಅಭ್ಯರ್ಥಿಗೆ ಶೂನ್ಯ ಮತಗಳು ಬಂದ ನಂತರ ಬಿಜೆಪಿ ನಾಯಕರು, ಈ ಪ್ರದೇಶವು ಮುಸ್ಲಿಂ ಬಹುಸಂಖ್ಯಾತರನ್ನು ಒಳಗೊಂಡಿರುವುದರಿಂದ ಅಲ್ಲಿ ಬಿಜೆಪಿಗೆ ಸಾಮಾನ್ಯವಾಗಿ ಕಡಿಮೆ ಬೆಂಬಲವಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಮಾಪಾ ಅವರು, ಸ್ಥಳೀಯ ಪಕ್ಷದ ಘಟಕವು ನಾಮಪತ್ರ ಸಲ್ಲಿಸಿದ ನಂತರ ತಮ್ಮ ಅಭ್ಯರ್ಥಿಯ ಬದಲು ಸ್ವತಂತ್ರ ಅಭ್ಯರ್ಥಿ ಜೈನಾಬಿ ಆಡಮ್ ಅವರನ್ನು ಬೆಂಬಲಿಸಲು ನಿರ್ಧರಿಸಿತ್ತು. ಏಕೆಂದರೆ, ಆ ವಾರ್ಡ್‌ನಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಬೂತ್ ಅಧ್ಯಕ್ಷರು ಮತ್ತು ಪ್ರೇಮಾ ಅವರ ಇಬ್ಬರು ಪ್ರತಿಪಾದಕರು ಸಹ ಅವರ ವಿರುದ್ಧವೇ ಮತ ಚಲಾಯಿಸಿದಂತೆ ತೋರುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು.

'ಈ ಮುಜುಗರಕ್ಕೆ ಬಿಜೆಪಿ ನಾಯಕತ್ವವೇ ಕಾರಣ. ತಮನ್ನಾ ಜಬೀನ್ ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗುವುದನ್ನು ತಡೆಯಲು ಅವರು ಹೊರಗಿನವರನ್ನು ಕಣಕ್ಕಿಳಿಸಿದರು ಮತ್ತು ನಂತರ ಆಡಮ್‌ ಅವರಿಗೆ ಬೆಂಬಲ ನೀಡಿದರು. ಇದರಿಂದಲೇ ಈ ರೀತಿಯ ಫಲಿತಾಂಶ ಬಂದಿತು. ಪಕ್ಷವು ಆಡಮ್ ಅವರನ್ನೇ ತನ್ನ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಬಹುದಿತ್ತು' ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂಎಸ್ ಮೊಹಮ್ಮದ್ ಆರೋಪಿಸಿದರು.

ಇತ್ತ ವಾರ್ಡ್ ಸಂಖ್ಯೆ 3ರಲ್ಲಿ ಬಿಜೆಪಿ ಅಡಿಯಲ್ಲಿಯೇ ಕಣಕ್ಕಿಳಿದಿದ್ದ ಮುಸ್ಲಿಂ ಅಭ್ಯರ್ಥಿ ಆಡಮ್ ಕುಂದೋಳಿ ಕೇವಲ 75 ಮತಗಳನ್ನು ಗಳಿಸಿ ಕಾಂಗ್ರೆಸ್ ವಿರುದ್ಧ ಸೋತರು.

ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿದ ನಂತರ ಕಡಬ ಪಟ್ಟಣ ಪಂಚಾಯಿತಿಗೆ ನಡೆದ ಮೊದಲ ಚುನಾವಣೆ ಇದಾಗಿದೆ. 13 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 5 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT