ಬೆಂಗಳೂರು ದಂಪತಿಯ ಪರಿಸರ ಸ್ನೇಹಿ ಮನೆ 
ರಾಜ್ಯ

ಬೆಂಗಳೂರು ದಂಪತಿಯ ಪರಿಸರ ಸ್ನೇಹಿ 'Breathing House'; ನೆಟ್ಟಿಗರು ಫಿದಾ, ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡ Video!

ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ಥಳೀಯ ದಂಪತಿಯ ಆಕರ್ಷಕ ಪರಿಸರ ಸ್ನೇಹಿ ಮನೆಯೊಂದರ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಕಂಟೆಂಟ್ ಕ್ರಿಯೆಟರ್ ಪ್ರಿಯಂ ಸಾರಸತ್ವ್ ತೋರಿಸಿರುವ ಈ ಉಸಿರಿನ ಮನೆ("breathing house) ವಿಡಿಯೋ ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.

ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ತದ ನಂತರ ಮನೆ ಒಳಗಡೆ ನೈಸರ್ಗಿಕ ಕೊಳ (natural pond) "ಉಸಿರಾಡುವ" ಮಣ್ಣಿನ ಗೋಡೆಗಳು ವಿಶೇಷ ಅನುಭವ ನೀಡುತ್ತವೆ. ತಾಪಮಾನವನ್ನು ಸಮತೋಲನಗೊಳಿಸಲು ನೆರವಾಗುವಂತೆ ಈ ಗೋಡೆಗಳನ್ನು ಕಟ್ಟಲಾಗಿದೆ.

ಡೈನಿಂಗ್ ಹಾಲ್ ನಲ್ಲಿ ರಾಜಸ್ಥಾನದಿಂದ ತರಲಾದ 150 ವರ್ಷಗಳಷ್ಟು ಹಳೆಯದಾದ ಬಾಗಿಲು ಇದೆ. ಹಿತಕರ ವಾತಾವರಣ ಹೆಚ್ಚಿಸಲು ಛಾವಣಿಯ ಮೇಲೆ ಮಣ್ಣಿನ ಮಡಕೆಗಳನ್ನು ತಲೆಕೆಳಗಾಗಿ ಜೋಡಿಸಲಾಗಿದೆ. ಧ್ಯಾನ್ಯಕ್ಕೆ ಅನುಕೂಲಕರವಾಗುವಂತೆ ಸಾಂಪ್ರಾದಾಯಿಕ ಅಂಶಗಳೊಂದಿಗೆ ಸರಳವಾಗಿ ಮನೆ ಕಟ್ಟಲಾಗಿದ್ದು, ಇದಕ್ಕೆ ಸತ್ಯ ಚಿತ್ತ' ಅಥವಾ 'ನಿಜವಾದ ಪ್ರಜ್ಞೆ' ಎಂದು ಹೆಸರು ಇಡಲಾಗಿದೆ.

ಮಹಡಿ ಮೇಲೆ ಸ್ಕೈಲೈಟ್‌, ರಾಟೆ ವ್ಯವಸ್ಥೆ ಇದ್ದು, ಕುಟುಂಬ ಸದಸ್ಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾದ ಕೊಠಡಿಗಳಿವೆ. ವಾಣಿಜ್ಯೋದ್ಯಮಿ ಮತ್ತು ಐಟಿ ವೃತ್ತಿಪರರು ಆಗಿರುವ ದಂಪತಿ, ತಮ್ಮ ಮನಗೆ ಬೇಕಾದ ಎಲ್ಲಾ ಆಧುನಿಕ ಸೌಕರ್ಯಗಳನ್ನು ಒದಗಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಮನೆಯನ್ನು ಶ್ಲಾಘಿಸಿದ್ದಾರೆ. ಇದು ಅದ್ಭುತ ಪರಿಕಲ್ಪನೆ ಮತ್ತು ಪ್ರಕೃತಿ ಮತ್ತು ತಂತ್ರಜ್ಞಾನದ ಅದ್ಭುತ ಸಂಯೋಜನೆಯಾಗಿದೆ ಎಂದಿದ್ದಾರೆ. ಮತ್ತೆ ಕೆಲವರುಮನೆಯಲ್ಲಿ ಕಂಡುಬರುವ ಸಂಪ್ರದಾಯ ಮತ್ತು ಆಧುನಿಕತೆಯ ಸಾಮರಸ್ಯದ ಮಿಶ್ರಣವನ್ನು ಮೆಚ್ಚಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT