ಸಾಂದರ್ಭಿಕ ಚಿತ್ರ 
ರಾಜ್ಯ

ಉತ್ತರ ಕನ್ನಡ: ಅಪ್ಸರಕೊಂಡ ಸಮುದ್ರತೀರದಲ್ಲಿ ಅಪರೂಪದ ದೈತ್ಯ; ಮೊದಲ ಬಾರಿಗೆ ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲ ಪತ್ತೆ!

ಕರ್ನಾಟಕದಲ್ಲಿ ಮೊದಲ ಭಾರಿಗೆ ಸಮುದ್ರ ತೀರಕ್ಕೆ ಬಂದಿರುವ ಈ ಪ್ರಭೇದದ ತಿಮಿಂಗಲ ಸಮುದ್ರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಸುಮಾರು 4 ಮೀಟರ್ ಉದ್ದದ ಈ ತಿಮಿಂಗಿಲದ ದೇಹದ ಮೇಲೆ ಯಾವುದೇ ಗಾಯಗಳಿಲ್ಲ.

ಮಂಕಿ(ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಪ್ರಸ್ತಾವಿತ ಅಪ್ಸರಕೊಂಡ ಸಮುದ್ರ ಅಭಯಾರಣ್ಯದ ಬಳಿಯ ಮಂಕಿ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ಅತ್ಯಂತ ಅಪರೂಪದ ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲ (ಗ್ಲೋಬಿಸೆಫಾಲಾ ಮ್ಯಾಕ್ರೋರಿಂಚಸ್) ಪತ್ತೆಯಾಗಿದೆ.

ಕರ್ನಾಟಕದಲ್ಲಿ ಮೊದಲ ಭಾರಿಗೆ ಸಮುದ್ರ ತೀರಕ್ಕೆ ಬಂದಿರುವ ಈ ಪ್ರಭೇದದ ತಿಮಿಂಗಲ ಸಮುದ್ರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಸುಮಾರು 4 ಮೀಟರ್ ಉದ್ದದ ಈ ತಿಮಿಂಗಿಲದ ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಆದರೆ ಒಂದೇ ಒಂದು ತಿಮಿಂಗಿಲ ಸಿಕ್ಕಿಬಿದ್ದಿರುವುದು ಆಶ್ಚರ್ಯಕರವಾಗಿದ್ದು ಹತ್ತಿರದಲ್ಲಿ ಇತರ ತಿಮಿಂಗಿಲಗಳು ಇರುವ ಸಾಧ್ಯತೆಯಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮುದ್ರ ಜೀವಶಾಸ್ತ್ರದ ಮುಖ್ಯಸ್ಥ ಪ್ರೊ. ಶಿವಕುಮಾರ್ ಹರಗಿ ಹೇಳಿದರು.

ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲವನ್ನು ಭಾರತೀಯ ನೀರಿನಲ್ಲಿ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2016 ರಲ್ಲಿ ತಮಿಳುನಾಡಿನ ಮನಪಾಡ್‌ನಲ್ಲಿ ತೀರದಲ್ಲಿ ಈ ಜಾತಿಯ ತಿಮಿಂಗಲ ಪತ್ತೆಯಾಗಿತ್ತು. ಈ ವರ್ಷದ ಆರಂಭದಲ್ಲಿ, ಅದೇ ಜಾತಿಯ ತಿಮಿಂಗಿಲವನ್ನು ಕೇರಳದ ಕೋಝಿಕ್ಕೋಡ್ ಬಳಿಯ ಮೀನುಗಾರರು ರಕ್ಷಿಸಿದರ ಎಂದು ತಿಳಿಸಿದ್ದಾರೆ.

ಇದು ದೃಢವಾದ ದೇಹ, ಗುಂಡಗಿನ ತಲೆ, ಚಾಚಿಕೊಂಡಿರುವ ಮೇಲಿನ ತುಟಿ ಮತ್ತು ದೇಹದ ಉದ್ದದ ಆರನೇ ಒಂದು ಭಾಗದಷ್ಟು ಅಳತೆಯ ಫಾಲ್ಕೇಟ್ ಫ್ಲಿಪ್ಪರ್‌ಗಳನ್ನು ಹೊಂದಿದೆ ಎಂದು ಈ ಜಾತಿಯ ಬಗ್ಗೆ ಪ್ರೊಫೆಸರ್ ಹರಗಿ ವಿವರಿಸಿದ್ದಾರೆ.

ಇದರ ಬೆನ್ನಿನ ರೆಕ್ಕೆ ಅಗಲವಾಗಿದ್ದು ಕೆಳಕ್ಕೆ ಬಾಗಿದಂತಿದ್ದು, ಉಸಿರಾಟು ಮೂಗಿನ ನಾಳದ ಸಮೀಪದಲ್ಲಿರುತ್ತದೆ. ಈ ತಿಮಿಂಗಲವನ್ನು ಗುರುತಿಸುವ ಪ್ರಮುಖ ಲಕ್ಷಣ ಇದಾಗಿದೆ. ವಯಸ್ಕ ಗಂಡು ತಿಮಿಂಗಲಗಳು 9 ಮೀಟರ್ ವರೆಗೆ ಬೆಳೆದು 3 ಟನ್ ತೂಕವಿರುತ್ತವೆ, ಆದರೆ ಹೆಣ್ಣುಗಳು ಸುಮಾರು 6 ಮೀಟರ್ ಉದ್ದ ಮತ್ತು 1.5 ಟನ್ ತೂಕ ಇರುತ್ತವೆ ಎಂದಿದ್ದಾರೆ.

ಸಿಕ್ಕಿರುವ ಪೈಲಟ್ ತಿಮಿಂಗಿಲವು ಶ್ವಾಸಕೋಶದಲ್ಲಿ ಉಂಟಾದ ಊತದಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಕುಂದಾಪುರದ ರೀಫ್ ವಾಚ್‌ನ ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT