ಸಾಂದರ್ಭಿಕ ಚಿತ್ರ online desk
ರಾಜ್ಯ

ಬೆಂಗಳೂರು: ಹಲಸೂರು ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ..!

ಗುರುದ್ವಾರದ ಶೌಚಾಲಯದಲ್ಲಿ ನಾಲ್ಕು ಆರ್​​ಡಿಎಕ್ಸ್ ಇರಿಸಲಾಗಿದ್ದು, ಅವುಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಬೆಂಗಳೂರು: ನಗರದ ಹಲಸೂರು ಕೆರೆ ಸಮೀಪವಿರುವ ಗುರುಸಿಂಗ್ ಸಭಾ ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

4 ದಿನಗಳ ಹಿಂದೆ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಬಂದಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

`De-Brahminize Dravidistan’ ಎಂಬ ಸಂಘಟನೆಯಿಂದ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ.

ಗುರುದ್ವಾರದ ಶೌಚಾಲಯದಲ್ಲಿ ನಾಲ್ಕು ಆರ್​​ಡಿಎಕ್ಸ್ ಇರಿಸಲಾಗಿದ್ದು, ಅವುಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.

ಇತ್ತೀಚೆಗೆ ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಅನಾಮಧೇಯ ವ್ಯಕ್ತಿಯಿಂದ ಇ-ಮೇಲ್ ಬಂದಿದ್ದು, ಈ ವಿಷಯ ತಿಳಿದು ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಬಾಂಬ್‌ಗಾಗಿ ಹುಡುಕಾಟ ನಡೆಸಿತ್ತು. ಆದರೆ, ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ ನಂತರ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು.

ಅದಕ್ಕೂ ಮುನ್ನ ಬೆಂಗಳೂರು ಹಾಗೂ ಕಲಬುರಗಿ ವಿಮಾನ ನಿಲ್ದಾಣಗಳಿಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಕಚೇರಿಗೆ ಹಾಗೂ ಹಲವು ಶಾಲೆಗಳಿಗೂ ಇಂತಹ ಹುಸಿ ಬಾಂಬ್‌ ಬೆದರಿಕೆಗಳು ಬಂದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT