ನಿವೃತ್ತ ಪೊಲೀಸ್ ​ಮಹಾನಿರ್ದೇಶಕ ಓಂ ಪ್ರಕಾಶ್ ಹಾಗೂ ಅವರ ಪತ್ನಿ ಪಲ್ಲವಿ 
ರಾಜ್ಯ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪಲ್ಲವಿ ನ್ಯಾಯಾಂಗ ಬಂಧನ ವಿಸ್ತರಣೆ, ಉಚಿತ ಕಾನೂನು ನೆರವು

ಜೈಲಿನಿಂದ ವರ್ಚುವಲ್ ಆಗಿ ಹಾಜರಾದ ಸಮಯದಲ್ಲಿ, ಪಲ್ಲವಿ ಅವರ ಪರವಾಗಿ ವಾದಿಸಲು ವಕೀಲರಿಲ್ಲ ಎಂದು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಬೆಂಗಳೂರು: ಮಾಜಿ ಡಿಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೆಷನ್ಸ್ ನ್ಯಾಯಾಲಯ ವಿಸ್ತರಿಸಿದ್ದು, ಉಚಿತ ಕಾನೂನು ನೆರವು ನೀಡುವ ಮೂಲಕ ಅವರು ತಮ್ಮ ಪರವಾಗಿ ವಕೀಲರನ್ನು ಹೊಂದುವ ಅವಕಾಶ ನೀಡಿದೆ.

ಜೈಲಿನಿಂದ ವರ್ಚುವಲ್ ಆಗಿ ಹಾಜರಾದ ಸಮಯದಲ್ಲಿ, ಪಲ್ಲವಿ ಅವರ ಪರವಾಗಿ ವಾದಿಸಲು ವಕೀಲರಿಲ್ಲ ಎಂದು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ನ್ಯಾಯಾಧೀಶರು ಅದರ ಬಗ್ಗೆ ಆಕೆಯನ್ನು ಕೇಳಿದಾಗ, ವಕೀಲರನ್ನು ನೇಮಿಸಿಕೊಳ್ಳಲು ತಾನು ಶಕ್ತಳಲ್ಲ ಎಂದು ಪೀಠಕ್ಕೆ ತಿಳಿಸಿದರು.

ನಂತರ ನ್ಯಾಯಾಲಯವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಮೂಲಕ ಪಲ್ಲವಿಗೆ ಕಾನೂನು ಸಹಾಯವನ್ನು ಒದಗಿಸುವುದಾಗಿ ಹೇಳಿತು ಮತ್ತು ಅವರು ಇದಕ್ಕೆ ಸಮ್ಮತಿ ಸೂಚಿಸಿದರು.

ಪ್ರಕರಣದ ಬೆಳವಣಿಗೆಗಳ ಕುರಿತು ಪಲ್ಲವಿ ಅವರಿಗೆ ಮಾಹಿತಿ ನೀಡಲು ಮತ್ತು ಅವರೊಂದಿಗೆ ಸಮಾಲೋಚಿಸಲು ವಕೀಲರನ್ನು ನೇಮಿಸಲು DLSA ಗೆ ನಿರ್ದೇಶಿಸಿತು.

ಇದಲ್ಲದೆ, ವಾಸ್ತವಿಕ ದೂರುದಾರರ ಪರವಾಗಿ ವಾದಿಸುತ್ತಿರುವ ವಕೀಲ ವಿನಯ್ ಕುಮಾರ್ ಸಿಂಗ್, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 338(2) ರ ಅಡಿಯಲ್ಲಿ ಅರ್ಜಿಯೊಂದಿಗೆ ವಕಾಲತ್‌ ಸಲ್ಲಿಸಿ, ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಲು ನ್ಯಾಯಾಲಯದ ಅನುಮತಿ ಕೇಳಿದರು.

ನ್ಯಾಯಾಲಯವು ಈ ಅರ್ಜಿಯನ್ನು ಅಂಗೀಕರಿಸಿತು, ಪ್ರಕರಣದ ವಿಚಾರಣೆಯ ಸಮಯದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರ ಜೊತೆಗೆ ಕೆಲಸ ಮಾಡಲು ಅವರಿಗೆ ಅವಕಾಶ ನೀಡಿತು.

ಪಲ್ಲವಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮುಂದಿನ ವಿಚಾರಣೆಯವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿತು.

ಏಪ್ರಿಲ್ 20 ರಂದು, 68 ವರ್ಷದ ಐಪಿಎಸ್ ಅಧಿಕಾರಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ಸಾವಿಗೀಡಾಗಿದ್ದರು. ಅವರ ಮಗ ಕಾರ್ತಿಕೇಶ್ ಸಲ್ಲಿಸಿದ ದೂರಿನ ಮೇರೆಗೆ ಅವರ ಪತ್ನಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Vladimir Putin ಭೇಟಿ ಮುನ್ನ ಭಾರತ-ರಷ್ಯಾ ಒಪ್ಪಂದಕ್ಕೆ ಸಹಿ: ಡಿ. 4ರಂದು ದೆಹಲಿಯಲ್ಲಿ 23ನೇ ಶೃಂಗಸಭೆ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

SCROLL FOR NEXT