ಡಾ ಎಸ್ ಪರಮೇಶ್ವರ್ 
ರಾಜ್ಯ

ಧರ್ಮಸ್ಥಳ ಪ್ರಕರಣ: SIT ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಸೂಚನೆಗಳನ್ನು ನೀಡುವುದಿಲ್ಲ- ಡಾ. ಜಿ ಪರಮೇಶ್ವರ್

ಎಸ್ ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗೆ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಫ್ ಎಸ್ ಎಲ್ ಗೆ ಈಗಾಗಲೇ ಒಂದಿಷ್ಟು ಸ್ಯಾಂಪಲ್ ನೀಡಲಾಗಿದೆ.

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ವಿರೋಧ ಪಕ್ಷ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್ ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗೆ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಫ್ ಎಸ್ ಎಲ್ ಗೆ ಈಗಾಗಲೇ ಒಂದಿಷ್ಟು ಸ್ಯಾಂಪಲ್ ನೀಡಲಾಗಿದೆ. ಅದರ ವರದಿ ಏನಿರುತ್ತೆ ಗೊತ್ತಿಲ್ಲ ನಾವು ಊಹಾಪೋಹ ಮಾಡಿ ಮಾತನಾಡಲು ಬರುವುದಿಲ್ಲ ಎಂದರು.

ವಿಪಕ್ಷಗಳು ಬೇಗ ತನಿಖೆ ಮುಗಿಸಿ ಎಂದರೆ ಆಗುವುದಿಲ್ಲ ಸಮಯ ನಿಗದಿ ಮಾಡಿ ತನಿಖೆ ಮಾಡಿ ಎಂದರೆ ಆಗುವುದಿಲ್ಲ ತನಿಖೆ ಬೇಗ ಮುಗಿಸಿ ಎಂದು ಎಸ್ ಐಟಿಗೆ ಹೇಳಲು ಆಗುವುದಿಲ್ಲ . ನಾವು ಎಸ್ ಐಟಿಗೆ ಯಾವುದೇ ನಿರ್ದೇಶನ ಕೊಡಲ್ಲ ಈ ಪ್ರಕರಣ ಎಲ್ಲಿವರೆಗೆ ಹೋಗುತ್ತೆ ಗೊತ್ತಿಲ್ಲ ತಾರ್ಕಿಕ ಅಂತ್ಯ ಆಗಬೇಕು ಅಲ್ಲಿವರೆಗೆ ತನಿಖೆ ಮಾಡತ್ತಾರೆ ಎಂದರು.

ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ, ಅದು ಪೂರ್ಣಗೊಳ್ಳುವವರೆಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ, ನಾವು ಮಧ್ಯಪ್ರವೇಶಿಸುವುದಿಲ್ಲ ಅಥವಾ ಅವರಿಗೆ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ತನಿಖೆ ಶೀಘ್ರದಲ್ಲೇ ಪೂರ್ಣಗೊಂಡರೆ, ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುತ್ತದೆ. ಪ್ರಕರಣವು ತಾರ್ಕಿಕ ಅಂತ್ಯವನ್ನು ತಲುಪುವವರೆಗೆ ಅವರು ತನಿಖೆ ನಡೆಸುತ್ತಾರೆ ಎಂದರು.

ಒಂದು ವಾರದಲ್ಲಿ ಅದನ್ನು ಮುಗಿಸಿ ವರದಿಯನ್ನು ನೀಡಿ" ಎಂದು ನೀವು ಹೇಳಬಹುದಾದ ರೀತಿಯ ವಿಷಯವಲ್ಲ ಇದು. ನಾವು ಸಮಯದ ಚೌಕಟ್ಟನ್ನು ನಿಗದಿಪಡಿಸಲು ಸಾಧ್ಯವಿಲ್ಲ... ಧರ್ಮಸ್ಥಳದ ಧರ್ಮಾಧಿಕಾರಿಯಿಂದ ಹಿಡಿದು ಉಳಿದವರೆಲ್ಲರೂ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎರಡನೇ ಬಾರಿಗೆ ಭೇಟಿ: ಸತೀಶ್ ಜಾರಕಿಹೊಳಿ ಬಳಿ ಬೆಂಬಲ ಕೇಳಿದ್ರಾ ಡಿಕೆ ಶಿವಕುಮಾರ್!

ರಾಹುಲ್ ಗಾಂಧಿ ಅಥವಾ ಖರ್ಗೆ ಅಲ್ಲ; ಪುಟಿನ್ ಜೊತೆಗಿನ ಭೋಜನಕೂಟಕ್ಕೆ ಕಾಂಗ್ರೆಸ್ ನ ಈ ನಾಯಕನಿಗೆ ಮಾತ್ರ ಆಹ್ವಾನ!

ಅಬಕಾರಿ ಇಲಾಖೆಗೆ 43,000 ಕೋಟಿ ರೂ ತೆರಿಗೆ ಸಂಗ್ರಹದ ಗುರಿ! ವಾಣಿಜ್ಯ ಇಲಾಖೆಗೆ 'ಟಾರ್ಗೆಟ್' ಎಷ್ಟು?

‘ಡೆವಿಲ್': ನಾಳೆ ಮಧ್ಯಾಹ್ನ 1:05 ರಿಂದ ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ ! ಈಗಿನಿಂದಲೇ ಅಭಿಮಾನಿಗಳ ಭರ್ಜರಿ ಸಿದ್ಧತೆ, Video

ಪಾಕಿಸ್ತಾದ 'ನ್ಯೂಕ್ಲಿಯರ್ ಬಟನ್' ಈಗ ಅಸಿಮ್ ಮುನೀರ್ ಕೈಯಲ್ಲಿ! ಭಾರತದ ವಿರುದ್ಧ ಸೇಡಿಗೆ ಮುಂದಾಗ್ತಾರಾ?

SCROLL FOR NEXT