ಅಂಗನವಾಡಿ ಕಾರ್ಯಕರ್ತೆರಿಂದ ಅನಿರ್ದಿಷ್ಟಾವಧಿ ಧರಣಿ 
ರಾಜ್ಯ

ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆರಿಂದ ಅನಿರ್ದಿಷ್ಟಾವಧಿ ಧರಣಿ..!

ನಗರದ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ಮಂಡ್ಯ ಮತ್ತು ಹುಬ್ಬಳ್ಳಿಯಲ್ಲಿ ಕೇಂದ್ಹರ ಸರ್ಕಾರದ ಸಚಿವರ ನಿವಾಸಗಳ ಎದುರು ಪ್ರತಿಭಟಿಸುವುದರೊಂದಿಗೆ ರಾಜ್ಯದ್ಯಂತ ಹೋರಾಟ ಆರಂಭಿಸಿದ್ದಾರೆ. ತುಮಕೂರಿನಲ್ಲೂ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಲಕ್ಷಾಂತರ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ಮಂಡ್ಯ ಮತ್ತು ಹುಬ್ಬಳ್ಳಿಯಲ್ಲಿ ಕೇಂದ್ಹರ ಸರ್ಕಾರದ ಸಚಿವರ ನಿವಾಸಗಳ ಎದುರು ಪ್ರತಿಭಟಿಸುವುದರೊಂದಿಗೆ ರಾಜ್ಯದ್ಯಂತ ಹೋರಾಟ ಆರಂಭಿಸಿದ್ದಾರೆ. ತುಮಕೂರಿನಲ್ಲೂ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಅಂಗನವಾಡಿ ಘಟಕ ವೆಚ್ಚ ಹೆಚ್ಚಳ ಮಾಡಿ, ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. ಆದರೆ, 2018ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2,700 ರೂ. ಸಹಾಯಕಿಯರಿಗೆ 1,350 ರೂ. ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ಕನಿಷ್ಠವೇತನವನ್ನೂ ನೀಡುತ್ತಿಲ್ಲ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೌತಿಕ ಗುರುತು ವ್ಯವಸ್ಥೆ (ಎಫ್‌ಆರ್‌ಎಸ್) ರದ್ದು ಮಾಡಬೇಕು. ಇಲ್ಲದಿದ್ದರೆ ಎಫ್‌ಆರ್‌ಎಸ್ ಇರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ವ್ಯವಸ್ಥೆ ಅಳವಡಿಸಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಗೆ ಬಳಸಬಾರದು. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ವ್ಯವಸ್ಥೆಯಿದೆ. ನಿಗದಿತ ವೇತನ ನೀಡಲಾಗುತ್ತಿದೆ. ಆದರೆ, ದೇಶಾದ್ಯಂತ 64 ಲಕ್ಷ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯ ನೀಡದಿರುವುದು ಖಂಡನೀಯ. ಅಲ್ಲದೆ, ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸದೇ ಶೋಷಣೆ ಮಾಡಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಅಧ್ಯಕ್ಷೆ ಎಸ್ ವರಲಕ್ಷ್ಮಿ ಅವರು ಮಾತನಾಡಿ, “ಈ ಮುಷ್ಕರ ನಡೆಸುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ನಮ್ಮ ಪ್ರತಿಭಟನೆಯಿಂದ ಅಂಗನವಾಡಿಗಳ ಕೇಂದ್ರಗಳು, ಮಧ್ಯಾಹ್ನದ ಊಟ ಮತ್ತು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ನಾನು ಒಪ್ಪುತ್ತೇನೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಆದರೆ, ಕಾರ್ಯಕರ್ತೆಯರು ಕೂಡ ವೇತನವಿಲ್ಲದ ಕಾರಣ ಬೆಲೆ ತೆರುತ್ತಿದ್ದಾರೆಂದು ಹೇಳಿದರು.

ವೇತನ, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳಲ್ಲಿ ನಮ್ಮನ್ನು ಸೇರ್ಪಡೆಗೊಳಿಸಬೇಕೆಂದು ನಾವು ಕೇಂದ್ರ ಸರ್ಕಾರ ಒತ್ತಾಯಿಸುತ್ತಿದ್ದೇವೆ. ಈ ಎಲ್ಲಾ ಕಾರ್ಮಿಕರನ್ನು ವಿವಿಧ ಯೋಜನೆಗಳ ಅಡಿಯಲ್ಲಿ ನೇಮಿಸಲಾಗಿದೆ, ಸರ್ಕಾರವು ಗೌರವಧನದ ಹೆಸರಿನಲ್ಲಿ ವೇತನವನ್ನು ಕಡಿಮೆ ನೀಡುತ್ತಿದೆ. ನಮ್ಮ ಕಾರ್ಯಕರ್ತೆಯರಿಗೂ ಸರ್ಕಾರ ಭವಿಷ್ಯ ನಿಧಿ ಮತ್ತು ಇಎಸ್‌ಐನಂತಹ ಎಲ್ಲಾ ಪ್ರಯೋಜನಗಳನ್ನು ಒದಗಿಸಬೇಕೆಂದು ಮತ್ತು ಉದ್ಯೋಗ ಭದ್ರತೆಯನ್ನು ಖಚಿತಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಮುಂದೆ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಲಿನಿ ಮೇಸ್ತ ಅವರು ಮಾತನಾಡಿ, "ಮಧ್ಯಾಹ್ನ ಊಟ, ಐಸಿಡಿಎಸ್ ಮತ್ತು ಆಶಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಬಜೆಟ್ ಹೆಚ್ಚಿಸಬೇಕು. ಮಧ್ಯಾಹ್ನ ಊಟದ ಕಾರ್ಯಕರ್ತರಿಗೆ 4,700 ರೂ. ವೇತನ ನೀಡಲಾಗುತ್ತಿದ್ದು, ಅದರಲ್ಲಿ 600 ರೂ. ಕೇಂದ್ರ ಸರ್ಕಾರ ಭರಿಸುತ್ತದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ. 2009 ರಿಂದ ಅವರ ವೇತನ ಏರಿಕೆಯಾಗಿಲ್ಲ. ಅದೇ ರೀತಿ, 2018 ರಿಂದ ಅಂಗನವಾಡಿ ಕಾರ್ಯಕರ್ತೆಯರ ವೇತನ ಏರಿಕೆಯಾಗಿಲ್ಲ. ಅವರ ವೇತನ 11,500 ರಿಂದ 12,000 ರೂ. ಆಗಿದ್ದು, ಇದರಲ್ಲಿ ಕೇಂದ್ರದ ಪಾಲು 2,700 ರೂ. ಸಹಾಯಕಿಯರ ವೇತನ 7,000 ರೂ. ಮತ್ತು ಕೇಂದ್ರ ಸರ್ಕಾರ 2,000 ರೂ. ನೀಡುತ್ತದೆ ಎಂದು ಹೇಳಿದರು.

ಸರ್ಕಾರದ ನೀತಿಗಳು ಈ ಕಾರ್ಮಿಕರ ಪರವಾಗಿಲ್ಲ, ಇದು ಅವರ ಉದ್ಯೋಗ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. 25,000 ಕ್ಕೂ ಹೆಚ್ಚು ಶಾಲೆಗಳನ್ನು ಕರ್ನಾಟಕ ಸಾರ್ವಜನಿಕ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿರುವುದರಿಂದ ಹಲವಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಾರೆಂದು ಕಳವಳ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಬಳ್ಳಾರಿಯಲ್ಲಿ ಮತ್ತೊಂದು ಕೃತ್ಯ: ಜನಾರ್ಧನ ರೆಡ್ಡಿ ‘ಮಾಡೆಲ್ ಹೌಸ್‌’ಗೆ ಬೆಂಕಿ, 'ಕೈ' ಶಾಸಕ ಭರತ್ ರೆಡ್ಡಿ ವಿರುದ್ಧ ಆರೋಪ

ಅರಣ್ಯಾಧಿಕಾರಿಗಳಿಂದ ಹುಲಿ ಶೋಧ ಕಾರ್ಯಾಚರಣೆ ಸ್ಥಗಿತ: ಮೈಸೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೆಚ್ಚಿದ ಆತಂಕ!

ಶಬರಿಮಲೆ ಚಿನ್ನ ಕಳ್ಳತನ ವಿವಾದ: ಸೋನಿಯಾ ವಿರುದ್ಧ ಎಡಪಂಥೀಯರ ನಿಲುವಿಗೆ ರಾಹುಲ್ ಗಾಂಧಿ ಅಸಮಾಧಾನ

ಬಾಂಗ್ಲಾದಲ್ಲಿ 'ಪ್ರಜಾಪ್ರಭುತ್ವ ಗಡಿಪಾರು'; ಚುನಾವಣೆ ಮುಕ್ತವಾಗಿರುವುದಿಲ್ಲ: ಯೂನಸ್ ವಿರುದ್ಧ ಮಾಜಿ ಪ್ರಧಾನಿ ಹಸೀನಾ ವಾಗ್ದಾಳಿ

IND vs NZ 2nd T20: ಭಾರತಕ್ಕೆ 7 ವಿಕೆಟ್‌ ಗೆಲುವು

SCROLL FOR NEXT