ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಗುದ್ದಾಟ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸದ್ದು ಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ಗೆ ಆಗಮಿಸಿದ್ದರು. ಇದೀಗ ಇಂದು ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಡಿಕೆಶಿ ನಿವಾಸದಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಆಗಮಿಸಿ ಬ್ರೇಕ್‌ಫಾಸ್ಟ್‌ನಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್ ಸವಿದರೆ, ಡಿ.ಕೆ ಶಿವಕುಮಾರ್ ನಾನ್‌ವೆಜ್ ಮುಟ್ಟಿಯೇ ಇಲ್ಲವಂತೆ.
ನಾನ್‌ವೆಜ್ ಸೇವನೆ ಬಿಟ್ಟಿರುವ ಡಿ.ಕೆ ಶಿವಕುಮಾರ್!
ಇಂದು ಡಿ ಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಡಿ.ಕೆ ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಮತ್ತು ಮಂಡ್ಯ ಜಿಲ್ಲೆಯ ಶಾಸಕ ಕೆ.ಎಂ. ರಂಗನಾಥ್ ಭಾಗಿಯಾಗಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತ್ರ ನಾನ್‌ವೆಜ್ ತಿಂದಿದ್ದಾರಂತೆ. ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್ ಸವಿದಿದ್ದು, ಇತ್ತ ನಾನ್‌ವೆಜ್ ಮುಟ್ಟದ ಡಿ.ಕೆ ಶಿವಕುಮಾರ್ ಇಡ್ಲಿ, ಚಟ್ನಿ, ವೆಜ್ ಸಾಂಬಾರ್ ಹಾಗೂ ಫ್ರೂಟ್ ಸಲಾಡ್‌ಗೆ ಮಾತ್ರ ಸೀಮಿತರಾದರು ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ನಾನ್‌ವೆಜ್ ಸಂಪೂರ್ಣ ಬಿಟ್ಟಿರುವ ಡಿಕೆಶಿ ತಮ್ಮ ಆರೋಗ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿ ವೆಜ್ ಆಹಾರಕ್ಕೆ ಸೀಮಿತರಾಗಿದ್ದಾರಂತೆ.
ನನ್ನ ಮನೆಗೆ ಊಟಕ್ಕೆ ಅಥವಾ ಬ್ರೇಕ್ ಫಾಸ್ಟ್ ಗೆ ಬನ್ನಿ ಅಂತ ಡಿಕೆಶಿ ಕರೆದಿದ್ರು. ನಾನು ಮಂಗಳವಾರ ಬರುತ್ತೇನೆ ಎಂದಿದ್ದೆ. ನಾನೇ ಹಳ್ಳಿಯಿಂದ ಕೋಳಿ ತರಿಸಿ ಅಡುಗೆ ಮಾಡಲು ಹೇಳಿದ್ದೆ, ಅವ್ರು ನಾನ್ ವೆಜ್ ತಿನ್ನಲ್ಲ ಹೀಗಾಗಿ ನಮ್ಮ ಮನೆಯಲ್ಲಿ ವೆಜ್ ಊಟ, ಡಿಕೆ ಶಿವಕುಮಾರ್ ಮನೆಯಲ್ಲಿ ನಾನು ನಾನ್ ವೆಜ್ ಊಟ ಮಾಡಿದೆ, ಮೈಸೂರು ಶೈಲಿಯಲ್ಲಿಯೇ ಮಾಡಿದ್ದಾರೆ ಎಂದರು.
ತಿಂಡಿ ಸೇವನೆ ನಂತರ ಡಿ ಕೆ ಶಿವಕುಮಾರ್ ತಮ್ಮ ಮನೆಯನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿದರು.