ತೇಜಸ್ವಿ ಸೂರ್ಯ 
ರಾಜ್ಯ

ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಅಪಾಯಗಳ ಕುರಿತು ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಮಾತು!

ಲೋಕಸಭೆಯ ಚಳಿಗಾಲ ಅಧಿವೇಶನದ ಇಂದಿನ ಶೂನ್ಯವೇಳೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಆರೋಗ್ಯದ ಅಪಾಯಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.

ನವದೆಹಲಿ: ಕಪ್ ನೂಡಲ್ಸ್‌ಗಳು, ಸಿದ್ಧಪಡಿಸಿದ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಬೆರೆಸಿದ ಪಾನೀಯಗಳಂತಹ ಅತ್ಯಂತ ಸಂಸ್ಕರಿಸಿದ ಆಹಾರಗಳು, ವಿಶೇಷವಾಗಿ ಯುವಜನರು ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ ಸಾಂಪ್ರದಾಯಿಕ ಆಹಾರಗಳ ಸ್ಥಾನವನ್ನು ಹೆಚ್ಚಾಗಿ ಕಬಳಿಸುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಲೋಕಸಭೆಯ ಚಳಿಗಾಲ ಅಧಿವೇಶನದ ಇಂದಿನ ಶೂನ್ಯವೇಳೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯಿಂದಾಗುವ ಆರೋಗ್ಯದ ಅಪಾಯಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.

ಈ ಉತ್ಪನ್ನಗಳ ಹೆಚ್ಚಿನ ಸೇವನೆಯು ಸ್ಥೂಲಕಾಯತೆ (obesity), ಹೃದಯರಕ್ತನಾಳದ ಕಾಯಿಲೆಗಳು (cardiovascular diseases), ಟೈಪ್ 2 ಮಧುಮೇಹ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಲೋಕಸಭೆಯಲ್ಲಿ ವಿವರಿಸಿದ್ದಾರೆ.

ಭಾಷಣದಲ್ಲಿ, ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದು,

1) ಸಂಸ್ಕರಿತ ಆಹಾರಗಳಿಗೆ ಸ್ಪಷ್ಟವಾದ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳುವುದು.

2) ಹೆಚ್ಚು ಪರಿಣಾಮಕಾರಿಯಾದ ಮುಂಭಾಗದ ಪ್ಯಾಕ್ ಎಚ್ಚರಿಕೆ ಲೇಬಲ್ ಅನ್ನು ಅಂಟಿಸುವುದು.

3) ಈ ಉತ್ಪನ್ನಗಳ ಮೇಲೆ ತೆರಿಗೆ ಮತ್ತು ಜಾಹೀರಾತಿನ ನಿಯಂತ್ರಣವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಈ ಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ಒದಗಿಸಲಿದ್ದು, ಆಹಾರ ಹಾಗೂ ಪೋಷಣೆಯ ಬಗ್ಗೆ ನಾಗರಿಕರು ತಿಳುವಳಿಕೆಯನ್ನು ಹೊಂದಲು ಅನುವು ಮಾಡಿಕೊಡಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣದ ಪ್ಲಾನ್, TMC ಶಾಸಕ ಹುಮಾಯೂನ್ ಕಬೀರ್ ಅಮಾನತು, ಹೊಸ ಪಕ್ಷ ರಚನೆಯ ಘೋಷಣೆ!

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಎಲ್ಗರ್ ಪರಿಷತ್ ಪ್ರಕರಣ: 5 ವರ್ಷಗಳ ನಂತರ DU ಮಾಜಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

SCROLL FOR NEXT