ಶುಭಾಂಶು ಶುಕ್ಲಾ 
ರಾಜ್ಯ

ಶೀಘ್ರದಲ್ಲೇ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡುತ್ತಾನೆ: ಗಗನಯಾತ್ರಿ ಶುಭಾಂಶು ಶುಕ್ಲಾ

ನನ್ನ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ತರಗತಿಯ ಮೇಜಿನ ಮೇಲೆ ಅರ್ಜಿಯನ್ನು ಬಿಟ್ಟಿದ್ದರು. ಅದನ್ನು ನಾನು ಭರ್ತಿ ಮಾಡಿದ್ದೆ. ಬಳಿಕ ನಾನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾದೆ.

ಬೆಂಗಳೂರು: ಶೀಘ್ರದಲ್ಲೇ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡಲಿದ್ದು, ಭಾರತೀಯ ನಿರ್ಮಿತ ಉಡಾವಣಾ ವಾಹನ ಮತ್ತು ಉಪಗ್ರಹದಲ್ಲಿ ಸುರಕ್ಷಿತವಾಗಿ ಹಿಂತಿರುಗುತ್ತಾನೆಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನ ಸರ್ಜಾಪುರದ ಸೇಂಟ್ ಫಿಲೋಮಿನಾ ಪಬ್ಲಿಕ್ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಭಾರತೀಯನೊಬ್ಬ ಬಾಹ್ಯಾಕಾಶಕ್ಕೆ ಹೋಗಲು 41 ವರ್ಷ ಸಮಯ ಬೇಕಾಗಿತ್ತು. 1984ರಲ್ಲಿ ಗ್ರೂಪ್ ಕ್ಯಾಪ್ಟನ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ, ಈಗ ಬಾಹ್ಯಾಕಾಶಕ್ಕೆ ಹೋಗಲು ಅಷ್ಟು ಸಮಯ ಬೇಕಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಬೆಳೆಯುತ್ತಿರುವಾಗ ಗಗಯಾತ್ರಿಯಾಗುವ ಆಲೋಚನೆ ಇರಲಿಲ್ಲ. ಆಗುತ್ತೇನೆಂದೂ ಭಾವಿಸಿರಲಿಲ್ಲ. 1984 ರಲ್ಲಿ ಮೊದಲ ಭಾರತೀಯ ಬಾಹ್ಯಾಕಾಶಕ್ಕೆ ಹೋದಾಗ, ನಾನು ಹುಟ್ಟಿಯೂ ಇರಲಿಲ್ಲ. ಆದರೆ, ವಿಚಾರ ತಿಳಿದುಕೊಂಡಾಗ ಆಕರ್ಷಿತನಾದೆ. ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಉದ್ದೇಶವೂ ನನಗಿರಲಿಲ್ಲ.

ನನ್ನ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ತರಗತಿಯ ಮೇಜಿನ ಮೇಲೆ ಅರ್ಜಿಯನ್ನು ಬಿಟ್ಟಿದ್ದರು. ಅದನ್ನು ನಾನು ಭರ್ತಿ ಮಾಡಿದ್ದೆ. ಬಳಿಕ ನಾನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾದೆ. ಪೈಲಟ್ ಆದೆ ಎಂದು ತಿಳಿಸಿದರು.

2018 ರಲ್ಲಿ ಭಾರತೀಯರು ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಹೋಗುತ್ತಾರೆ ಎಂಬ ಪ್ರಧಾನಿಯವರ ಘೋಷಣೆಯನ್ನು ಕೇಳಿದಾಗ, 2019 ರಲ್ಲಿ ಆಯ್ಕೆಗಳು ಪ್ರಾರಂಭವಾದಾಗ ನಾನು ಉತ್ಸುಕನಾಗಿದ್ದೆ. 2019 ರಲ್ಲಿ ಅರ್ಜಿ ಸಲ್ಲಿಸಬಹುದಾದ ಸ್ಥಳದಲ್ಲಿದ್ದೆ, ಅಲ್ಲಿಂದ ಗಗನಯಾತ್ರಿಯಾಗಿ ನನ್ನ ಪ್ರಯಾಣ ಪ್ರಾರಂಭವಾಯಿತು ಎಂದು ತಮ್ಮ ಪಯಣವನ್ನು ಸ್ಮರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

ಸಂಪುಟ ವಿಸ್ತರಣೆ ಕಿಚ್ಚು; 'ಕೈ' ಪಾಳಯದಲ್ಲಿ ಹೈ ಡ್ರಾಮಾ: ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಎಂಟ್ರಿ..!

'Real estate mafia ಲಾಭಕ್ಕಾಗಿ ಬಿಡದಿ ಯೋಜನೆ'; ಸರ್ಕಾರದ ವಿರುದ್ಧ BJP-JDS ವಾಗ್ದಾಳಿ, ಜಂಟಿ ಪಾದಯಾತ್ರೆಗೆ ಮುಂದು..!

ಒಂದಲ್ಲ, 5 ಪೊಲೀಸ್‌ ಆಯುಕ್ತಾಲಯಗಳು; ಬೆಂಗಳೂರು ಪೊಲೀಸ್‌ ವ್ಯವಸ್ಥೆಗೆ ಮೇಜರ್‌ ಸರ್ಜರಿ; ಆ.15ರಂದು ಡಿಕೆ.ಶಿವಕುಮಾರ್ ಮಹತ್ವದ ಘೋಷಣೆ..?

ಎಗ್ಗಿಲ್ಲದ AI ಕಂಟೆಂಟ್, ಡೀಪ್‌ಫೇಕ್‌ಗಳಿಗೆ ಬ್ರೇಕ್: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಹೊಸ ನಿಯಮ!